ಐಪಿಎಲ್-14 ಹರಾಜು : ಕಣದಲ್ಲಿ 292 ಆಟಗಾರರು, ಪ್ರಾಂಚೈಸಿಗಳ ಬಳಿ ಇರೋ ಹಣ ಎಷ್ಟು.?
ಚೆನ್ನೈ : ಚೆನ್ನೈನಲ್ಲಿ 14ನೇ ಆವೃತ್ತಿಯ ಐಪಿಎಲ್ ಗಾಗಿ ಹರಾಜು ಪ್ರಕ್ರಿಯೆ ಇಂದು ಮೂರು ಗಂಟೆಗೆ ನಡೆಯಲಿದೆ. ಪ್ರಾಂಚೈಸಿಗಳು ಪಕ್ಕಾ ಲೆಕ್ಕಾಚಾರ ಹಾಕಿ ಆಟಗಾರರ ಖರೀದಿಗೆ ಮುಂದಾಗಿದ್ದಾರೆ.
ಈ ಬಾರಿ ಹರಾಜು ಪಟ್ಟಿಯಲ್ಲಿ 292 ಮಂದಿ ಆಟಗಾರರು ಕಣದಲಿದ್ದು, ಇದರಲ್ಲಿ 164 ಭಾರತೀಯರು, 128 ವಿದೇಶಿ ಆಟಗಾರರಿದ್ದಾರೆ.
ಇನ್ನು ಫ್ರಾಂಚೈಸಿಗಳ ಬಳಿ ಇರುವ ಹಣ ಎಷ್ಟು ಅಂತಾ ನೋಡೋದಾದ್ರೆ..
ರಾಯಲ್ ಚಾಲೆಂಜರ್ಸ್ ಬೆಂಗಳೂರು : 35.40 ಕೋಟಿ, 11 ಆಟಗಾರರನ್ನು ಖರೀದಿಸಬಹುದು.
ಚೆನ್ನೈ ಸೂಪರ್ ಕಿಂಗ್ಸ್ : 19.90 ಕೋಟಿ, 6 ಆಟಗಾರರನ್ನು ಖರೀದಿಸಬಹುದು.
ಡೆಲ್ಲಿ ಕ್ಯಾಪಿಟಲ್ಸ್ : 13.40 ಕೋಟಿ, 8 ಆಟಗಾರರನ್ನು ಖರೀದಿಸಬಹುದು.
ಪಂಜಾಬ್ ಕಿಂಗ್ಸ್ : 53.20 ಕೋಟಿ, 9 ಆಟಗಾರರನ್ನು ಖರೀದಿಸಬಹುದು.
ಕೋಲ್ಕತ್ತಾ ನೈಟ್ ರೈಡರ್ಸ್ 10.75 ಕೋಟಿ, 8 ಆಟಗಾರರನ್ನು ಖರೀದಿಸಬಹುದು.
ಮುಂಬೈ ಇಂಡಿಯನ್ಸ್ : 15.35 ಕೋಟಿ, 7 ಆಟಗಾರರನ್ನು ಖರೀದಿಸಬಹುದು
ರಾಜಸ್ಥಾನ ರಾಯಲ್ಸ್ 37.65 ಕೋಟಿ, 9 ಆಟಗಾರರನ್ನು ಖರೀದಿಸಬಹುದು
ಸನ್ ರೈಸ್ ಹೈದರಾಬಾದ್ : 10.75 ಕೋಟಿ, 3 ಆಟಗಾರರನ್ನು ಖರೀದಿಸಬಹುದು.
ಭಾರತದ ಪ್ರಮುಖ ಆಟಗಾರರು : ಹರ್ಭಜನ್ ಸಿಂಗ್, ಕೇದಾರ್ ಜಾಧವ್, ಕುಲದೀಪ್ ಯಾದವ್, ಶಿವಂ ದುಬೆ, ಪವನ್ ನೇಗಿ, ಕರುಣ್ ನಾಯರ್, ಉಮೇಶ್ ಯಾದವ್, ಪಿಯೂಷ್ ಚಾವ್ಲಾ, ಕೃಷ್ಣಪ್ಪ ಗೌತಮ್, ಮೊಹಮ್ಮದ್ ಅಜರುದ್ದೀನ್, ವಿಷ್ಣು ಸೋಳಂಕಿ, ಅಭಿಮನ್ಯು ಈಶ್ವರನ್, ಜೆ. ಸುಚಿತ್, ಅರುಣ್ ಕಾರ್ತಿಕ್, ವಿಷ್ಣು ವಿನೋದ್, ಬಾಬಾ ಅಪರಾಜಿತ್, ಅರ್ಜುನ್ ತೆಂಡೂಲ್ಕರ್, ರಿಷಿ ಧವನ್, ಕುಲವಂತ್ ಖೆಜ್ರೋಲಿಯಾ, ಶಾರೂಕ್ ಖಾನ್.
ಇದನ್ನೂ ಓದಿ : ಆಧಾರ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್ : ಹೊಸ ಸೌಲಭ್ಯ ಒದಗಿಸಿದ UDPI
ಪ್ರಮುಖ ವಿದೇಶಿ ಆಟಗಾರರು : ಸ್ಟೀವ್ ಸ್ಮಿತ್, ಆರೋನ್ ಫಿಂಚ್, ಗ್ಲೆನ್ ಮ್ಯಾಕ್ಸ್‍ವೆಲ್,ಜೇಸನ್ ರಾಯ್, ಲಿಯಾಮ್ ಪ್ಲಂಕೆಟ್, ಡೇವಿಡ್ ಮಲನ್,ಶಕೀಬ್ ಅಲ್ ಹಸನ್, ಮೋಯಿನ್ ಅಲಿ, ಕೈಲ್ ಜೆಮೀಸನ್, ಡರೆನ್ ಬ್ರಾವೊ, ಶೆಲ್ಡನ್ ಕಾಟ್ರೆಲ್, ಮುಸ್ತಫಿಜರ್ ರೆಹಮಾನ್, ಟಿಮ್ ಸೌಥಿ, ಮಾರ್ಕ್ ವುಡ್, ಅಲ್ಜರಿ ಜೋಸೆಫ್, ಸ್ಯಾಮ್ ಬಿಲ್ಲಿಂಗ್ಸ್, ಅಲೆಕ್ಸ್ ಕ್ಯಾರಿ, ಅಲೆಕ್ಸ್ ಹೇಲ್ಸ್, ಶಾನ್ ಮಾರ್ಷ್.