ಗರ್ಭಿಣಿಯಾದರೂ ಸೆಕ್ಸ್ ಗೆ ಪೀಡಿಸುತ್ತಿದ್ದ ಪತಿಯ ಊಟದಲ್ಲಿ ವಿಷ ಬೆರೆಸಿ ಕೊಂದ ಪತ್ನಿ..!
ಚೆನ್ನೈ: ಪತ್ನಿ ಗರ್ಭಿಣಿಯಾಗಿದ್ದರೂ ಸಹ ಆಕೆಯ ಪತಿ ಪ್ರತಿನಿತ್ಯ ಆಕೆಯನ್ನ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ. ಇದರಿಂದ ಬೇಸತ್ತಿದ್ದ ಪತ್ನಿ ಪತಿಗೆ ವಿಷಕೊಟ್ಟು ಕೊಂದಿರುವ ಘಟನೆ ತಮಿಳುನಾಡಿನ ಪೆರಿಯಮೋಲಪಾಲಯಂನಲ್ಲಿ ನಡೆದಿದೆ. 21 ವರ್ಷದ ಮೈಥಿಲಿ ತನ್ನ ಪತಿ ನಂದ ಕುಮಾರ್ ಗೆ ವಿಷಕೊಟ್ಟು ಕೊಲೆ ಮಾಡಿದ್ದಾಳೆ. ಅಲ್ದೇ ತಾನು 5 ತಿಂಗಳ ಗರ್ಭಿಣಿಯಾಗಿದ್ದು, ಪತಿ ಸೆಕ್ಸ್ ಗೆ ಒತ್ತಾಯಿಸುತ್ತಲೇ ಇದ್ದ. ಇದರಿಂದಾಗಿ ಬೇಸರಿದಂದ ನಾನು ಆತನನ್ನ ಕೊಲೆ ಮಾಡಿದ್ದೇನೆ ಎಂದು ಮೈಥಿಲಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
ಸಿದ್ದರಾಮಯ್ಯರ ಕಾಮಾಲೆ ಕಣ್ಣಿಗೆ ಕಂಡಿದ್ದೆಲ್ಲ ಹಳದಿ : ನಳಿನ್ ಕುಮಾರ್ ಕಟೀಲ್
ಕಳೆದ 8 ತಿಂಗಳ ಹಿಂದೆ ನಂದ ಕುಮಾರ್ ನನ್ನು ಮೈಥಿಲಿ ಮದುವೆಯಾಗಿದ್ದಳು. ಈತನಿಗೆ ಇದು 2 ನೇ ಮದುವೆಯಾಗಿತ್ತು. ಬಳಿಕ ಪತ್ನಿ ಗರ್ಭಿಣಿಯಾಗಿದ್ದಳು. ಆದ್ರೂ ನಂದ ಕುಮಾರ್ ಆಕೆಯನ್ನ ಸೆಕ್ಸ್ ಗಾಗಿ ಪೀಡಿಸುತ್ತಿದ್ದನು ಎನ್ನಲಾಗಿದೆ. ಈ ವಿಚಾರವಾಗಿ ಮನನೊಂದ ಮೈಥಿಲಿ ಊಟದಲ್ಲಿ ಕೀಟನಾಶಕ ಹಾಕಿ ಬಡಿಸಿದ್ದಾಳೆ. ಊಟವನ್ನು ತಿಂದು ಅಸ್ವಸ್ಥನಾದಗಿದ್ದ ನಂದ ಕುಮಾರ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುಮಾರು 15 ದಿನಗಳ ಕಾಲ ಚಿಕಿತ್ಸೆ ಪಡೆದ ನಂದ ಇದೀಗ ಸಾವನಪ್ಪಿದ್ದಾನೆ.