ಬಳಕೆದಾರರಿಗೆ ಪ್ರೈವೆಸಿ ನೀತಿ ಸ್ವೀಕರಿಸಲು ಡೆಡ್ ಲೈನ್ ಕೊಟ್ಟ ವಾಟ್ಸಾಪ್..!
ವಾಟ್ಸಾಪ್ ತನ್ನ ಪ್ರೈವೆಸಿ ಪಾಲಿಸಿ ನೀತಿಯನ್ನ ಒಪ್ಪಿಕೊಳ್ಳಲು ಬಳಕೆದಾರರಿಗೆ ಹೊಸ ಗಡುವು ನೀಡಿದೆ. ವಾಟ್ಸಾಪ್ ನ ಪರಿಷ್ಕೃತ ಗೌಪ್ಯತಾ ನೀತಿಯನ್ನ ಸ್ವೀಕರಿಸಲು ಮೇ 15 ಕೊನೆಯ ದಿನಾಂಕವಾಗಿದೆ. ಒಂದುವೇಳೆ ಹೊಸ ನೀತಿಯನ್ನ ಸ್ವೀಕರಿಸದಿದ್ದರೆ, ವಾಟ್ಸಾಪ್ ನಲ್ಲಿ ಸಂದೇಶಗಳನ್ನ ಕಳುಹಿಸಲು ಸಾಧ್ಯವಾಗುವುದಿಲ್ಲ. ವಾಟ್ಸಾಪ್ ನ ಎಲ್ಲಾ ವೈಶಿಷ್ಟ್ಯಗಳನ್ನ ಪಡೆಯಬೇಕೆಂದರೆ ಮೇ 15ರೊಳಗೆ ಹೊಸ ನಿಯಮಗಳನ್ನ ಒಪ್ಪಿಕೊಳ್ಳಲೇಬೇಕೆಂದು ವಾಟ್ಸಾಪ್ ಬಳಕೆದಾರರಿಗೆ ತಿಳಿಸಿದೆ.
ಕೊರೊನಾ ಎಫೆಕ್ಟ್ : ಮಾರ್ಚ್ 7ರವರೆಗೆ ಶಾಲೆ-ಕಾಲೇಜು ಬಂದ್
ಮೇ 15ರೊಳಗೆ ನಿಬಂಧನೆಗಳನ್ನ ಅಂಗೀಕರಿಸದಿದ್ದರೆ, ಬಳಕೆದಾರರು ಕರೆಗಳು ಮತ್ತು ಅಧಿಸೂಚನೆಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತೆ. ಆದ್ರೆ, ಅವರು ಅಪ್ಲಿಕೇಶನ್ ನಿಂದ ಯಾವುದೇ ಸಂದೇಶಗಳನ್ನ ಓದಲು ಅಥವಾ ಕಳುಹಿಸಲು ಸಾಧ್ಯವಾಗುವುದಿಲ್ಲ. ಈ ಸೇವೆ ಕೂಡ ಸ್ವಲ್ಪ ಕಾಲವೂ ಇರಲಿದೆ. ವಾಟ್ಸಾಪ್ ನ ಹೊಸ ಪ್ರೈವೆಸಿ ನೀತಿಯನ್ನ ಬಳಕೆದಾರರು ಒಪ್ಪಿಕೊಳ್ಳದೇ ಹೋದ ಪಕ್ಷದಲ್ಲಿ, ಮೇ 15ರ 4 ತಿಂಗಳ ನಂತರ ಖಾತೆಯನ್ನ ಡಿಲೀಟ್ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಪಿಎಫ್ ಐ, ಎಸ್ ಡಿಪಿಐ ಬಿಜೆಪಿಯ ‘ಬಿ’ ಟೀಂ : ಸಿದ್ದರಾಮಯ್ಯ
ಮಂಗಳಮುಖಿಯರಿಗೆ ಗೌರವಾನ್ವಿತ ಉದ್ಯೋಗ ಕಲ್ಪಿಸಿಕೊಡಿ: ಸರ್ಕಾರಕ್ಕೆ ಅನಿರುದ್ಧ್ ಮನವಿ