ಮಂಗಳಮುಖಿಯರಿಗೆ ಗೌರವಾನ್ವಿತ ಉದ್ಯೋಗ ಕಲ್ಪಿಸಿಕೊಡಿ: ಸರ್ಕಾರಕ್ಕೆ ಅನಿರುದ್ಧ್ ಮನವಿ
1 min read
ಮಂಗಳಮುಖಿಯರಿಗೆ ಗೌರವಾನ್ವಿತ ಉದ್ಯೋಗ ಕಲ್ಪಿಸಿಕೊಡಿ: ಸರ್ಕಾರಕ್ಕೆ ಅನಿರುದ್ಧ್ ಮನವಿ
ಬೆಂಗಳೂರು: ನಟ ಅನಿರುದ್ಧ ಅವರು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದಾರೆ, ಇದೀಗ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಒಂದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಹೌದು ಅನಿರುದ್ಧ್ ಇದೀಗ ಮಂಗಳಮುಖಿಯರ ಪರ ಧ್ವನಿ ಎತ್ತಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಟ, ನಮ್ಮ ಸರ್ಕಾರ, ಸಂಸ್ಥೆ ಹಾಗೂ ಉದ್ಯಮಿಗಳಲ್ಲಿ ಕಳಕಳಿಯ ಮನವಿ. ದಯವಿಟ್ಟು ಎಲ್ಲಾ ಮಂಗಳಮುಖಿಯರಿಗೂ ಗೌರವಾನ್ವಿತ ಉದ್ಯಮ ಕಲ್ಪಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮಂಗಳಮುಖಿಯರಿಗೆ ಉದ್ಯೋಗ ಕಲ್ಪಿಸಿಕೊಡಬೇಕೆಂದು ನಟ ಅನಿರುದ್ಧ್ ಸರ್ಕಾರ ಮತ್ತು ಉದ್ಯಮಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ. ಎಲ್ಲಾ ಮಂಗಳಮುಖಿಯರಿಗೂ ಗೌರವಾನ್ವಿತ ಉದ್ಯಮ ಕಲ್ಪಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ. ಸಮಾಜದಲ್ಲಿ ಕಡೆಗಣಿಸಲ್ಪಟ್ಟಿರುವ, ಅವಕಾಶ ವಂಚಿತ ಮಂಗಳಮುಖಿಯರಿಗೆ ಜೀವನ ಕಲ್ಪಿಸಿಕೊಡಲು ಅನಿರುದ್ಧ ಮನವಿ ಮಾಡಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.