ADVERTISEMENT
Sunday, May 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಡಿಕೆಶಿ ಮನೆಗೆ ಸತೀಶ್ ಜಾರಕಿಹೊಳಿ ಎಂಟ್ರಿ! ಸಾಹುಕಾರ್ ಎಸೆದ ಡಬಲ್ ಕಾರ್ಡ್ ಹಿಂದೆ ಅಡಗಿದೆಯಾ ಬಿಗ್ ಪ್ಲಾನ್?

Shwetha by Shwetha
May 31, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಈಗ ಸಂಪುಟ ಕಸರತ್ತಿನ ಸುನಾಮಿ ಎದ್ದಿದೆ. ದೆಹಲಿಯಿಂದ ಸಚಿವರ ಪಟ್ಟಿಯನ್ನ ಹೊತ್ತು ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರಿಗೆ ಕಾಲಿಡುತ್ತಿದ್ದಂತೆ, ಅವರ ಸದಾಶಿವನಗರದ ನಿವಾಸ ಈಗ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ. ಸಚಿವ ಸ್ಥಾನದ ಆಕಾಂಕ್ಷಿಗಳು ಹಾಗೂ ಪ್ರಭಾವಿ ನಾಯಕರು ಸಾಲು ಸಾಲಾಗಿ ಡಿಕೆಶಿ ಮನೆಗೆ ಧಾವಿಸುತ್ತಿದ್ದಾರೆ. ಆದರೆ ಇವೆಲ್ಲದರ ನಡುವೆ ಬೆಳಗಾವಿಯ ಸಾಹುಕಾರ್ ಸತೀಶ್ ಜಾರಕಿಹೊಳಿ ಅವರ ಭೇಟಿ ಮಾತ್ರ ಭಾರೀ ಕುತೂಹಲಕ್ಕೆ ಕಾರಣವಾಗಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ನಾಂದಿ ಹಾಡಿದೆ.

ಸಾಹುಕಾರ್ ಹಾಕಿದ ಡಬಲ್ ಡಿಮ್ಯಾಂಡ್ ಗೇಮ್

Related posts

40 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್

40 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್

May 31, 2026
ಕರ್ನಾಟಕಕ್ಕೆ ಹೊಸ ಸಾರಥಿ : ಒಂದೇ ಕಾರಿನಲ್ಲಿ ರಾಜಭವನಕ್ಕೆ ತೆರಳಿ ಒಗ್ಗಟ್ಟು ಪ್ರದರ್ಶಿಸಿದ ಸಿದ್ದು ಡಿಕೆಶಿ ಜೋಡಿ

ಕರ್ನಾಟಕಕ್ಕೆ ಹೊಸ ಸಾರಥಿ : ಒಂದೇ ಕಾರಿನಲ್ಲಿ ರಾಜಭವನಕ್ಕೆ ತೆರಳಿ ಒಗ್ಗಟ್ಟು ಪ್ರದರ್ಶಿಸಿದ ಸಿದ್ದು ಡಿಕೆಶಿ ಜೋಡಿ

May 31, 2026

ಸತೀಶ್ ಜಾರಕಿಹೊಳಿ ಅವರು ಕೇವಲ ಸೌಜನ್ಯದ ಭೇಟಿಗಾಗಿ ಡಿಕೆಶಿ ಮನೆಗೆ ಹೋಗಿಲ್ಲ. ಅವರ ಕೈಯಲ್ಲಿ ಎರಡು ಪ್ರಬಲ ಬೇಡಿಕೆಗಳ ಪಟ್ಟಿಯಿದೆ. ಮೂಲಗಳ ಪ್ರಕಾರ, ಸತೀಶ್ ಜಾರಕಿಹೊಳಿ ಅವರು ಸಚಿವ ಸ್ಥಾನದ ಜೊತೆಗೆ ಉಪಮುಖ್ಯಮಂತ್ರಿ (DCM) ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ಒಂದು ವೇಳೆ ಮುಂದಿನ ದಿನಗಳಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದಲ್ಲಿ, ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ತನಗೇ ನೀಡಬೇಕು ಎಂಬ ಮಾಸ್ಟರ್ ಪ್ಲಾನ್ ಅನ್ನು ಅವರು ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಬೆಳಗಾವಿ ಸಾಮ್ರಾಜ್ಯದ ಮೇಲೆ ಕಣ್ಣು

ಸತೀಶ್ ಜಾರಕಿಹೊಳಿ ಅವರಿಗೆ ಇಷ್ಟೊಂದು ಆತುರ ಮತ್ತು ಪಟ್ಟು ಏಕಪ್ಪಾ ಅಂದರೆ, ಅದು ಬೆಳಗಾವಿ ಜಿಲ್ಲೆಯ ಮೇಲಿರುವ ಅವರ ಹಿಡಿತ. ಒಂದು ವೇಳೆ ಸಂಪುಟದಲ್ಲಿ ತಮಗೆ ಸಿಗಬೇಕಾದ ಪ್ರಬಲ ಸ್ಥಾನ ಸಿಗದಿದ್ದರೆ, ಜಿಲ್ಲೆಯಲ್ಲಿ ತಮ್ಮ ರಾಜಕೀಯ ಪ್ರಭಾವ ಕುಗ್ಗಬಹುದು ಎಂಬ ಆತಂಕ ಜಾರಕಿಹೊಳಿ ಅವರನ್ನ ಕಾಡುತ್ತಿದೆ. ಹೀಗಾಗಿ ಮಂತ್ರಿ ಸ್ಥಾನದ ಜೊತೆಗೆ ಡಿಸಿಎಂ ಸ್ಥಾನವನ್ನೇ ಕೇಳ್ತಿದ್ದಾರೆ ಎಂಬ ಗುಸುಗುಸು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.

ಹೈಕಮಾಂಡ್ ಹಾಕಿದ ಬ್ರೇಕ್ ಮತ್ತು ಹರಿಪ್ರಸಾದ್ ಎಂಟ್ರಿ

ಸತೀಶ್ ಜಾರಕಿಹೊಳಿ ಅವರ ಈ ಎರಡು ಹುದ್ದೆಗಳ ಬೇಡಿಕೆಗೆ ಹೈಕಮಾಂಡ್ ಸದ್ಯಕ್ಕೆ ಮಣೆ ಹಾಕಿದಂತೆ ಕಾಣುತ್ತಿಲ್ಲ. ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮವನ್ನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಕಟ್ಟುನಿಟ್ಟಾಗಿ ಹೇಳಿದ್ದಾರೆ. ಇದೇ ಗ್ಯಾಪ್ ನಲ್ಲಿ ಈಗ ಬಿ.ಕೆ. ಹರಿಪ್ರಸಾದ್ ಅವರ ಹೆಸರು ಮುನ್ನೆಲೆಗೆ ಬಂದಿದೆ. ಹಿರಿಯ ನಾಯಕ ಹಾಗೂ ಓಬಿಸಿ ಸಮುದಾಯದ ಪ್ರಬಲ ಧ್ವನಿಯಾಗಿರುವ ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಸಿದ್ಧರಾಮಯ್ಯ ಮತ್ತು ಯತೀಂದ್ರ ಫ್ಯಾಕ್ಟರ್

ಇನ್ನೊಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರ ಅವರಿಗೆ ಡಿಸಿಎಂ ಸ್ಥಾನ ಬೇಡ ಎಂದು ಈಗಾಗಲೇ ಹೇಳಿದ್ದಾರೆ ಎಂಬ ಮಾಹಿತಿ ಇದೆ. ಈ ಬೆಳವಣಿಗೆಯಿಂದಾಗಿ ಬಿ.ಕೆ. ಹರಿಪ್ರಸಾದ್ ಅವರ ಹಾದಿ ಸುಗಮವಾಗುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ, ಸಾಹುಕಾರ್ ಸತೀಶ್ ಜಾರಕಿಹೊಳಿ ಹಾಕಿದ ಡಬಲ್ ಡಿಮ್ಯಾಂಡ್ ಪ್ಲಾನ್ ವರ್ಕೌಟ್ ಆಗುತ್ತಾ ಅಥವಾ ಹೈಕಮಾಂಡ್ ಹರಿಪ್ರಸಾದ್ ಅವರಿಗೆ ಮಣೆ ಹಾಕುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಅಂತಿಮವಾಗಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಈ ಒಗಟನ್ನ ಹೇಗೆ ಬಿಡಿಸುತ್ತಾರೆ ಎಂಬುದು ಈಗ ಇಡೀ ರಾಜ್ಯದ ಕುತೂಹಲವಾಗಿದೆ.

ShareTweetSendShare
Join us on:

Related Posts

40 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್

40 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್

by Shwetha
May 31, 2026
0

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಶಿಕ್ಷಣ ಇಲಾಖೆ ಮಹತ್ವದ ಕ್ರಮ ಕೈಗೊಂಡಿದ್ದು, 40,067 ಅತಿಥಿ ಶಿಕ್ಷಕರ ನೇಮಕಾತಿಗೆ ಅಧಿಕೃತ ಆದೇಶ...

ಕರ್ನಾಟಕಕ್ಕೆ ಹೊಸ ಸಾರಥಿ : ಒಂದೇ ಕಾರಿನಲ್ಲಿ ರಾಜಭವನಕ್ಕೆ ತೆರಳಿ ಒಗ್ಗಟ್ಟು ಪ್ರದರ್ಶಿಸಿದ ಸಿದ್ದು ಡಿಕೆಶಿ ಜೋಡಿ

ಕರ್ನಾಟಕಕ್ಕೆ ಹೊಸ ಸಾರಥಿ : ಒಂದೇ ಕಾರಿನಲ್ಲಿ ರಾಜಭವನಕ್ಕೆ ತೆರಳಿ ಒಗ್ಗಟ್ಟು ಪ್ರದರ್ಶಿಸಿದ ಸಿದ್ದು ಡಿಕೆಶಿ ಜೋಡಿ

by Shwetha
May 31, 2026
0

ಬೆಂಗಳೂರು: ರಾಜ್ಯ ರಾಜಕಾರಣದ ಕುತೂಹಲಕ್ಕೆ ತೆರೆ ಬಿದ್ದಿದ್ದು, ನೂತನ ಸರ್ಕಾರ ರಚನೆಯ ಪ್ರಕ್ರಿಯೆಗಳು ಅಧಿಕೃತವಾಗಿ ಚುರುಕುಗೊಂಡಿವೆ. ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿ.ಕೆ. ಶಿವಕುಮಾರ್...

ನೀಟ್ ಪರೀಕ್ಷಾ ವಿಧಾನದಲ್ಲಿ ಭಾರಿ ಬದಲಾವಣೆ.. NTA ಮಹತ್ವದ ಘೋಷಣೆ

ನೀಟ್ ಪರೀಕ್ಷಾ ವಿಧಾನದಲ್ಲಿ ಭಾರಿ ಬದಲಾವಣೆ.. NTA ಮಹತ್ವದ ಘೋಷಣೆ

by Shwetha
May 31, 2026
0

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿಚಾರಣೆ ನಡೆಯುತ್ತಿರುವ ನಡುವೆಯೇ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹತ್ವದ ಘೋಷಣೆ ಮಾಡಿದೆ. ಮುಂದಿನ ವರ್ಷದಿಂದ NEET ಪರೀಕ್ಷೆಯನ್ನು ಸಂಪೂರ್ಣವಾಗಿ ಕಂಪ್ಯೂಟರ್...

ಚಾಮುಂಡೇಶ್ವರಿಯಲ್ಲಿ ಕುಮಾರಣ್ಣ ಕಣಕ್ಕಿಳಿದರೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಫಿಕ್ಸ್: ಸಾ ರಾ ಮಹೇಶ್ ಮಾಸ್ಟರ್ ಪ್ಲಾನ್

ಚಾಮುಂಡೇಶ್ವರಿಯಲ್ಲಿ ಕುಮಾರಣ್ಣ ಕಣಕ್ಕಿಳಿದರೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಫಿಕ್ಸ್: ಸಾ ರಾ ಮಹೇಶ್ ಮಾಸ್ಟರ್ ಪ್ಲಾನ್

by Shwetha
May 31, 2026
0

ಮೈಸೂರು: ರಾಜ್ಯ ರಾಜಕಾರಣದಲ್ಲಿ ಈಗ ಹೊಸ ಸಂಚಲನವೊಂದು ಶುರುವಾಗಿದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಮೈಸೂರಿನ ಪ್ರತಿಷ್ಠಿತ ಚಾಮುಂಡೇಶ್ವರಿ ಕ್ಷೇತ್ರದಿಂದ...

ರಾಜ್ಯದ ಮುಂದಿನ ಸಿಎಂ ಡಿಕೆಶಿನಾ..? ರಾಜಕೀಯದಲ್ಲಿ ಭಾರೀ ಚರ್ಚೆ!

ಡಿಕೆ ಶಿವಕುಮಾರ್‌ ಸಿಎಂ ಪ್ರಮಾಣ ವಚನಕ್ಕೆ ಅಧಿಕೃತ ಸಮಯ ಫಿಕ್ಸ್

by Shwetha
May 31, 2026
0

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುವ ದಿನಾಂಕ ಹಾಗೂ ಸಮಯ ಅಧಿಕೃತವಾಗಿ ನಿಗದಿಯಾಗಿದೆ. ಜೂನ್ 3, ಬುಧವಾರ ಸಂಜೆ 4.05ಕ್ಕೆ ಬೆಂಗಳೂರಿನ ಲೋಕಭವನದ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram