ಹಿಂದಿಯ ‘ಚೋಟಿ ಬಹು’ ಖ್ಯಾತಿಯ ರುಬಿನಾ ‘ಬಿಗ್ ಬಾಸ್’ ಸೀಸನ್ 14ರ ವಿನ್ನರ್
ಬಾಕ್ಸ್ ಆಫೀಸ್ ಸುಲ್ತಾನ ಸಲ್ಮಾನ್ ಖಾನ್ ನಡೆಸಿಕೊಟ್ಟ ‘ಬಿಗ್ ಬಾಸ್’ ಹಿಂದಿಯ ಸೀಸನ್ 14 ಮುಕ್ತಾಯವಾಗಿದ್ದು, ಫೈನಲ್ ವಿನ್ನರ್ ಕೂಡ ಅನೌನ್ಸ್ ಆಗಿದೆ. ಹಿಂದಿಯ ಚೋಟಿ ಬಹು ಧಾರವಾಹಿಯಿಂದ ಅತಿ ಹೆಚ್ಚು ಪ್ರಸಿದ್ಧಿ ಪಡೆದು, ಹಲವಾರು ಧಾರವಾಹಿಗಳಲ್ಲಿ ನಟಿಸಿ ಕಿರುತೆರೆಯ ಅಚ್ಚುಮೆಚ್ಚಿನ ನಟಿಯಾಗಿರುವ ರುಬೀನಾ ದಿಲೈಕ್ ಅವರು ವಿನ್ನರ್ ಆಗಿದ್ದಾರೆ.
KGF ಚಾಪ್ಟರ್ 2 ತೆಲುಗಿನ ಡಬ್ಬಿಂಗ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್
ಇದರೊಂದಿಗೆ ರುಬೀನಾ 36 ಲಕ್ಷ ರೂಪಾಯಿ ಬಹುಮಾನ ಹಾಗೂ ಟ್ರೋಫಿಯನ್ನ ತಮ್ಮದಾಗಿಸಿಕೊಂಡಿದ್ದಾರೆ. ರಾಖಿ ಸಾವಂತ್, ನಿಕ್ಕಿ ತಂಬೊಲಿ, ಅಲಿ ಗೊನಿ, ರಾಹುಲ್ ವೈದ್ಯ ಅವರೊಂದಿಗೆ ಫೈನಲ್ ಪ್ರವೇಶಿಸಿದ್ದ ರುಬಿನಾ ಅಂತಿಮವಾಗಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ರಾಹುಲ್ ವೈದ್ಯ ಎರಡನೇ ಸ್ಥಾನ ಪಡೆದುಕೊಂಡಿದ್ದು, ನಿಕ್ಕಿ ತಂಬೊಲಿ ಎರಡನೇ ರನ್ನರ್ ಅಪ್ ಆಗಿದ್ದಾರೆ.