ಬಡತನದಿಂದ ಮುಕ್ತವಾಗಿದ್ಯಂತೆ ಚೀನಾ : ಕ್ಸಿ ಜಿನ್ಪಿಂಗ್ ಘೋಷಣೆ
ಚೀನಾ : ಚೀನಾ ದೇಶ ಬಡತನದಿಂದ ಮುಖ್ಯವಾಗಿದೆ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅಧಿಕೃತವಾಗಿ ಘೋಷಿಸಿದ್ದಾರೆ. ಹೌದು.. ಚೀನಾದಲ್ಲಿ ತೀವ್ರ ಬಡತನದಲ್ಲಿ ಯಾರೂ ಸಹ ಇಲ್ಲ. ದೇಶದ ಸುಮಾರು 99 ಮಿಲಿಯನ್ ಜನರ ವಾರ್ಷಿಕ ಆದಾಯವು 2,300 ಯುವಾನ್ ಅಂದ್ರೆ ಸುಮಾರು 350 ಡಾಲರ್ ಗಿಂತಲೂ ಹೆಚ್ಚಿದೆ ಎಂದು ಚೀನಾದ ಸರ್ಕಾರಿ ಒಡೆತನದ ಪತ್ರಿಕೆಗಳ ಪ್ರಕಟಣೆಯಲ್ಲಿ ವರದಿ ಬಿತ್ತರವಾಗಿದೆ. ಕಳೆದ 8 ವರ್ಷಗಳಲ್ಲಿ ಬಡತನ ರೇಖೆಗಿಂತ ಕೆಳಗಿದ್ದ 9.89 ಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಲಾಗಿದೆ ಎಂದು ಚೀನಾ ಸರ್ಕಾರವು ಘೋಷಿಸಿದೆ. ಅಲ್ಲದೇ ಸುಮಾರು 10 ಮಿಲಿಯನ್ ಜನರು ಹೊಸ ಮನೆಗಳಿಗೆ ತೆರಳಿದ್ದು, 27 ಮಿಲಿಯನ್ ಜನತೆಯ ಮನೆ ನವೀಕರಿಸಲಾಗಿದೆ. ಇದಕ್ಕಾಗಿ ಸರ್ಕಾರ ಒಟ್ಟು 1.6 ಟ್ರಿಲಿಯನ್ ಯುವಾನ್ ಅಂದ್ರೆ 250 ಬಿಲಿಯನ್ ಖರ್ಚು ಮಾಡಿದೆ ಎಂದೂ ಸಹ ಚೀನಾ ಸರ್ಕಾರವು ಹೇಳಿಕೊಂಡಿದೆ.