ಕದನ ವಿರಾಮ ನಿಯಮಗಳ ಪಾಲನೆಗೆ ಒಪ್ಪಂದದ ಬಳಿಕ ಕಾಶ್ಮೀರದ ಕುರಿತು ಟ್ವೀಟ್ ಮಾಡಿದ ಇಮ್ರಾನ್..!

1 min read
Imran khan

ಕದನ ವಿರಾಮ ನಿಯಮಗಳ ಪಾಲನೆಗೆ ಒಪ್ಪಂದದ ಬಳಿಕ ಕಾಶ್ಮೀರದ ಕುರಿತಾಗಿ ಟ್ವೀಟ್ ಮಾಡಿದ ಇಮ್ರಾನ್..!

ಒಂದೆಡೆ ಗಡಿ ನಿಯಂತ್ರಣ ರೇಖೆಯಲ್ಲಿ  ಕದನ ವಿರಾಮ ನಿಯಮಗಳ ಒಪ್ಪಂದಗಳನ್ನು ಪಾಲಿಸಲು ಭಾರತ ಹಾಗೂ ಪಾಕಿಸ್ತಾನ ಒಪ್ಪಿಗೆ ಸೂಚಿಸಿದೆ. ಆದ್ರೆ ಇದರ ಬೆನ್ನಲ್ಲೇ ಪಾಕಿಸ್ತಾನವು ಮತ್ತೆ ಮತ್ತೆ ಕಾಶ್ಮೀರದ ವಿಚಾರವಾಗಿ ಭಾರತವನ್ನ ಕೆಣಕುವ ಕೆಲಸ ಮಾಡ್ತಿದೆ. ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್ ಖಾನ್ ಕಾಶ್ಮೀರ ವಿವಾದದ ಕುರಿತು ಮಾತನಾಡಿ ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಭಾರತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಅಂತರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧ ಮತ್ತೆ ಮಾರ್ಚ್ 31ರ ವರೆಗೆ ವಿಸ್ತರಣೆ..!

ಈ ಕುರಿತು ಟ್ವೀಟ್ ಮಾಡಿರುವ ಇಮ್ರಾನ್ ಖಾನ್  ‘ ಗಡಿಯಲ್ಲಿ ಶಾಂತಿ ಕಾಪಾಡುವ ಸಲುವಾಗಿ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ನಿಯಮಗಳ ಎಲ್ಲ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿದ್ದು, ಇದನ್ನ ನಾನು ಸ್ವಾಗತಿಸುತ್ತೇನೆ. ಆದ್ರೆ  ಮುಂದಿನ ಪ್ರಗತಿಗೆ ಅನುವು ಮಾಡಿಕೊಡುವ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಭಾರತದ ಕೈಯಲ್ಲಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಉಲ್ಲೇಖಿಸಿರುವ ಕಾಶ್ಮೀರಿ ಜನರ ಸ್ವ-ನಿರ್ಣಯದ ಹಕ್ಕು ಮತ್ತು ದೀರ್ಘಾವಧಿಯ ಬೇಡಿಕೆಯನ್ನು ಈಡೇರಿಸಲು ಭಾರತವು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಬರೆದುಕೊಂಡಿದ್ದಾರೆ.

ಅಮೆರಿಕಾ ವಿರುದ್ಧ ಬೇಹುಗಾರಿಕೆಯ ಅಪಪ್ರಚಾರ : ಚೀನಾಗೆ ತಕ್ಕ ಪಾಠ ಕಲಿಸಿದ ವಿಶ್ವದ ದೊಡ್ಡಣ್ಣ..!

ಅಲ್ಲದೇ ಪಾಕಿಸ್ತಾನವು ವಶಪಡಿಸಿಕೊಂಡ ಭಾರತೀಯ ಪೈಲಟ್ ಅನ್ನು ಮರಳಿ ಕಳುಹಿಸುವ ಮೂಲಕ ಭಾರತೀಯ ಸೇನೆಯ ಅಪಾಯಕಾರಿ ನೀತಿಯ ವಿರುದ್ಧ ನಮ್ಮ ರಾಷ್ಟ್ರದ ಜವಾಬ್ದಾರಿಯುತ ನಡವಳಿಕೆಯನ್ನು ಇಡೀ ವಿಶ್ವ ನೋಡಿದೆ.  ಪಾಕಿಸ್ತಾನ ಎಂದಿಗೂ ಶಾಂತಿಯ ಪರವಾಗಿದ್ದು, ಮಾತುಕತೆ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಸಿದ್ಧವಿದೆ ಎಂದು ಬರೆದುಕೊಂಡು ಮತ್ತೊಮ್ಮೆ ವಿಶ್ವಕ್ಕೆ ಮಹಾನ್ ಆಗುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಕಾಶ್ಮೀರದ ವಿಚಾರ ತೆಗೆದು ಭಾರತವನ್ನ ಕೆಣಕಿದ್ದಾರೆ.

ಪ್ಯಾರೇ ದೇಶ ವಾಸಿಯೋ…! ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd