ನಿಮ್ಗೆ ಮಾನ ಮರ್ಯಾದೆ ಇದ್ರೆ ಕೂಡಲೇ ರಾಜೀನಾಮೆ ಪಡೀರಿ : ಸಿದ್ದರಾಮಯ್ಯ ಆಗ್ರಹ
ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾನ ಮರ್ಯಾದೆ ಇದ್ರೆ ರಮೇಶ್ ಜಾರಕಿಹೊಳಿ ರಾಜೀನಾಮೆ ಪಡೆಯಬೇಕು ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಬೆಳಗಾವಿ ಸಾಹುಕಾರ್ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ಸಂಬಂಧಿಸಿಂದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಕಾಮಕಾಂಡ ಇಡೀ ರಾಷ್ಟ್ರಕ್ಕೆ ಗೊತ್ತಾಗಿದೆ.
ಈ ಸರ್ಕಾರಕ್ಕೆ ಮಾನ ಮರ್ಯಾದೆ ಅಂತಾ ಏನಾದ್ರು ಇದ್ರೆ ಮೊದಲು ರಮೇಶ್ ಜಾರಕಿಹೊಳಿ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ಇನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೌಲ್ಯುಗಳಿಗೆ ಬೆಲೆ ಕೊಟ್ಟು ರಮೇಶ್ ಜಾರಕಿಹೊಳಿ ವಿರುದ್ಧ ಎಫ್ ಐಆರ್ ದಾಖಲಿಸಿ ಅವರ ರಾಜೀನಾಮೆ ಪಡೆಯಬೇಕು ಅಂತಾ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.
ರಾಜೀನಾಮೆ ಕೊಡಬಾರದು : ಬಾಲಚಂದ್ರ
ಯಾವುದೇ ಕಾರಣಕ್ಕೂ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡಬಾರದು. ಪ್ರಕರಣದ ತನಿಖೆಯ ಬಳಿಕವಷ್ಟೇ ರಾಜೀನಾಮೆ ಕೊಡಲಿ ಎಂದು ಹೇಳಿದ್ದಾರೆ.
ಸಿಎಂ ಬಾಲಚಂದ್ರ ಜಾರಕಿಹೊಳಿ ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನ ಭೇಟಿಯಾಗಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ದೆಹಲಿಗೆ ಹೋಗಲ್ಲ, ಇಲ್ಲೇ ಬೆಂಗಳೂರಲ್ಲೇ ಇರ್ತಾರೆ. ಸಿಡಿಯಲ್ಲಿದ್ದ ಯುವತಿ ಯಾರು ಅಂತ ಗೊತ್ತಾಗಬೇಕಿದೆ. ಇದೊಂದು ನಕಲಿ ವಿಡಿಯೋ ಅಂತ ತನಿಖೆಗೆ ಸಿಎಂಗೆ ಒತ್ತಾಯಿಸಿದ್ದೇವೆ. ಇದು ನಿಜ ಆಗಿದ್ರೆ ರಮೇಶ್ ಜಾರಕಿಹೊಳಿಗೆ ನಿವೃತ್ತಿ ತೆಗೆದುಕೊಳ್ಳಲು ಹೇಳ್ತೀನಿ. ವಕೀಲರ ಜೊತೆ ಮಾತನಾಡಿ 100ಕೋಟಿ ಮಾನನಷ್ಟ ಮೊಕದ್ದಮೆ ಹಾಕ್ತೀವಿ ಎಂದು ತಿಳಿಸಿದ್ದಾರೆ.










