ADVERTISEMENT
Friday, July 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಸಿರಿವಂತ ರಾಷ್ಟ್ರ ಅಮೇರಿಕಾದಲ್ಲೂ ಇದೆ ಕುಗ್ರಾಮ : Marjala manthana

admin by admin
March 5, 2021
in Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಸಿರಿವಂತ ರಾಷ್ಟ್ರ ಅಮೇರಿಕಾದಲ್ಲೂ ಇದೆ ಕುಗ್ರಾಮ ; ಈ ಸುಪೈ ವಿಲೇಜ್ ನಲ್ಲಿ ಯಾವ ಮೂಲಸೌಕರ್ಯಗಳೂ ಇಲ್ಲ ಆದರೂ ಪ್ರವಾಸಿ ತಾಣವಿದು: Marjala manthana

ಪ್ರಪಂಚದ ಬಲಾಢ್ಯ ರಾಷ್ಟ್ರ ಅಮೇರಿಕಾದ ಮೂಲೆಯಲ್ಲಿದೆ ಒಂದು ವಿಸ್ಮಯಕಾರಿ ಗ್ರಾಮ. ಈ ದೂರದ ಹಳ್ಳಿ, ಸಣ್ಣ,ಹಿಂದುಳಿದ ದುರ್ಗಮ ಕುಗ್ರಾಮ. ಈಗ್ರಾಮ ತಲುಪಲು ಅಡ್ವೆಂಚರಸ್ ಚಾರಣ ಮಾಡಬೇಕು. ಪ್ರಪಂಚದ ಎಲ್ಲಾ ರಾಷ್ಟ್ರಗಳ ಪ್ರವಾಸಿಗರನ್ನು ಸೆಳೆಯುವ ಹಳ್ಳಿ ಇದು.

Related posts

Karnataka Election 2023 congress bjp jds modi amith shah

30 ದಿನ ಜೈಲಿನಲ್ಲಿದ್ದರೆ ಅಧಿಕಾರ ಗೋವಿಂದ -ಜೈಲಿನಿಂದ ಆಡಳಿತ ನಡೆಸುವ ಆಟಕ್ಕೆ ಬೀಳಲಿದೆ ಬ್ರೇಕ್:30 ದಿನ ಜೈಲಿನಲ್ಲಿದ್ದರೆ ಸಿಎಂ ಮತ್ತು ಪ್ರಧಾನಿ ಪಟ್ಟಕ್ಕೆ ಕುತ್ತು;ವಿರೋಧ ಪಕ್ಷಗಳ ನಿದ್ದೆಗೆಡಿಸಿದ ಕೇಂದ್ರದ ಹೊಸ ಪ್ಲಾನ್

July 3, 2026
ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ಟಿನ್ನು ಯಾದವ್ ಪ್ರಮುಖ ಆರೋಪಿಯೆಂದ ಚಂಪತ್ ರಾಯ್

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ಟಿನ್ನು ಯಾದವ್ ಪ್ರಮುಖ ಆರೋಪಿಯೆಂದ ಚಂಪತ್ ರಾಯ್

July 3, 2026

ಗ್ರಾಂಡ್ ಕೆನಾನ್ ವ್ಯಾಪ್ತಿಯ ಆ ಗ್ರಾಮ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕುಗ್ರಾಮವಾದರೂ ರಮಣೀಯ ಪ್ರಕೃತಿಸೌಂದರ್ಯದ ನಡುವಿರುವ ಹಳ್ಳಿ. ಕೌಟುಂಬಿಕ ವ್ಯವಸ್ಥೆ ಅಸಮತೋಲನಗೊಂಡಿದ್ರೂ ಆ ಮಂದಿ ಆ ಹಳ್ಳಿ ಬಿಟ್ಟು ಬರಲು ಒಲ್ಲರು. ಬೆರಳೆಣಿಕೆಯ ಜನರಿದ್ರೂ ಸ್ವಾಭಿಮಾನಿಗಳಾಗಿ ಬದುಕ್ತಿದ್ದಾರೆ ಸುಪೈಯನ್ನರು. ಎಲ್ಲದಕ್ಕಿಂತ ಮುಖ್ಯವಾಗಿ ಆ ಪ್ರದೇಶ ಚಾರಣಕ್ಕೆ ಹಾಗೂ ಪ್ರಾಕೃತಿಕ ಅದ್ಭುತ ಭೂದೃಶ್ಯಕ್ಕೆ ಖ್ಯಾತವಾಗಿದೆ.

ಸುಪೈ ಅಥವಾ ಹವಾಸುಪೈ ಎಂದು ಕರೆಯಲಾಗುವ ಈ ಪುಟ್ಟ ಗ್ರಾಮವನ್ನು ಅಮೇರಿಕಾದಂತಹ ಹಿರಿಯಣ್ಣನ ನಾಡಿನ ಕುಗ್ರಾಮ ಅಂತ ಕರೆದ್ರೆ ತಪ್ಪಿಲ್ಲ. ಯಾಕಂದ್ರೆ ಇಲ್ಲಿಯಾವುದೇ ಮೂಲಸೌಕರ್ಯಗಳಿಲ್ಲ, ರಸ್ತೆಗಳಿಲ್ಲ ಇತರೆ ವ್ಯವಸ್ಥೆಗಳಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದ್ರೆ ಇದ್ಯಾವುದನ್ನು ಇಲ್ಲಿ ಒದಗಿಸಿಕೊಡುವುದೂ ಸಾಧ್ಯವಿಲ್ಲ. ಯಾಕಂದ್ರೆ ಪ್ರಾಕೃತಿಕವಾಗಿ ಅತ್ಯಂತ ದುಸ್ತರವಾದ ದುರ್ಬರವಾದ ಗಿರಿಕಣಿವೆಯ ನಡುವೆ ಇದೆ ಸುಪೈ.

ಗ್ರಾಂಡ್ ಕೆನಾನ್ ನ್ಯಾಷನಲ್ ಪಾರ್ಕ್, ಅಮೇರಿಕಾದ ಕೆಂಪುಮಣ್ಣಿನ ಗಿರಿಕಂದರಗಳಿಂದಾವೃತವಾದ ಸುಂದರ ಪ್ರದೇಶ.. ಗ್ರಾಂಡ್ ಕೆನಾನ್ ವ್ಯಾಪ್ತಿಯಲ್ಲಿದೆ ಸುಪೈ ಹಳ್ಳಿ. ಯುಎಸ್ಎ ಖಂಡದ ಕೋಕೋನಿನೋ ದೇಶದ ಅರಿಜುನಾ ಪ್ರಾಂತ್ಯದ ಆಡಳಿತ ವ್ಯಾಪ್ತಿಗೆ ಒಳಪಟ್ಟಿದೆ ಅಪರೂಪದ ಹಾಗೂ ವಿಸ್ಮಯಕಾರಿ ಹಳ್ಳಿ ಸುಪೈ.

 Marjala manthana

2010ರ ಜನಸಂಖ್ಯೆಯ ಅನ್ವಯ ಇಲ್ಲಿ ಸುಮಾರು 43 ಕುಟುಂಬಗಳ 208 ಜನ ವಾಸಿಸ್ತಿದ್ದಾರೆ. ಈಗ ಜನಸಂಖ್ಯೆ ಪ್ರಮಾಣ ಕೊಂಚ ಹೆಚ್ಚು ಕಡಿಮೆ ಆಗಿರಬಹುದಾದ್ರೂ ಇಲ್ಲಿನ ಜೀವನ ಶೈಲಿಯಲ್ಲಿ ಮಾತ್ರ ಯಾವ ಬದಲಾವಣೆಯೂ ಸಾಧ್ಯವಿಲ್ಲ.

ಅಮೇರಿಕಾದ ಆಡಳಿತವೇ ಈ ಸುಪೈ ಗ್ರಾಮವನ್ನು ದಿ ಮೋಸ್ಟ್ ರಿಮೋಟ್ ವಿಲೇಜ್ ಅಥವಾ ಅತ್ಯಂತ ದೂರದ ಹಳ್ಳಿ ಅಂತ ಕರೆದಿದೆ. ಇದು ಸಾಮಾನ್ಯ ನಾಗರೀಕ ಪ್ರಪಂಚದ ವಹಿವಾಟುಗಳಿಗಿಂತ ಭಿನ್ನ ಹಾಗಾಗಿ ಇದು ಅಮೇರಿಕನ್ನರಿಗೆ ದೂರ ಬಹು ದೂರ. ಸುಪೈಗೆ ಹತ್ತಿರವಿರುವ ಒಂದು ರಸ್ತೆ ತಲುಪಲು ಕನಿಷ್ಟ 13 ಕಿಲೋಮೀಟರ್ ಕ್ರಮಿಸಬೇಕು.

ಸುಪೈ ತಲುಪಲು ಹ್ವಾಲಪೈ ಗಿರಿಶಿಖರದ ಮೂಲಕ ಚಾರಣಮಾಡಬೇಕು. ನಡೆದು ಸಾಗಬೇಕು ಅಥವಾ ಕುದುರೆಗಳ ಸಹಾಯದಿಂದ ಹೋಗಬೇಕು. ಅಥವಾ ಹೆಲಿಕಾಪ್ಟರ್​ ಮೂಲಕ ಬರುವುದಿದ್ದರೂ ಹ್ವಾಲಾಪೈ ಏರ್​ಬೇಸ್​ ಮೂಲಕ ಸುಪೈಗೆ ಹೋಗಬಹುದು. ಇಲ್ಲಿನ ಸಮೀಪದ ರಸ್ತೆ ಪೀಚ್ ಸ್ಪ್ರಿಂಗ್​ನ ಬಿಐಎ ರೋಡ್. ಈ ಪೀಚ್ ಸ್ಪ್ರಿಂಗ್ಸಹ ಗ್ರಾಂಡ್ ಕೆನಾನ್​ ಪ್ರದೇಶದ ವ್ಯಾಪ್ತಿಯಲ್ಲೇ ಇದೆ.

Marjala manthana

ಸುಪೈ ತಲುಪಬೇಕೆಂದರೆ ಯಾವುದೇ ವಾಹನಗಳ ಸೌಲಭ್ಯವಿಲ್ಲ. ಇಲ್ಲಿ ಈಗಲೂ ಸರಕು, ಸಾಮಾನು ಸರಂಜಾಮು ಹಾಗೂ ಅಂಚೆ ಟಪಾಲು ಸಾಗಾಣಿಕೆಗೆ ಬಳಸುವುದು ಮ್ಯೂಲ್ ಅಂತ ಕರೆಯಲಾಗುವ ಒಂದು ಜಾತಿಯ ಗಿಡ್ಡನೆಯ ಕುದುರೆಗಳನ್ನು. ಜನಸಂಚಾರಕ್ಕೂ ಈ ಕುಳ್ಳಕುದುರೆಗಳೇ ವಾಹಕಗಳು ಅಥವಾ ಆಗಾಗಬಂದು ಹೋಗುವ ಹೆಲಿಕಾಪ್ಟರ್​ ಮೂಲಕ ಸುಪೈ ಸಂಪರ್ಕ ಸಾಧ್ಯವಷ್ಟೆ. ಇವೆರಡೂ ಇಲ್ಲದಿದ್ದರೆ ನಿಮ್ಮ ಪಾದಗಳೇ ಗತಿ. ಸುಪೈಗೆ ಕುದುರೆಗಳ ಮೇಲೆ ಆಹಾರ ಪದಾರ್ಥ ಹಾಗೂ ಇತರೆ ಸಾಮಗ್ರಿಗಳನ್ನು ಹೇರಿಕೊಂಡು ಬಂದು ಹಳ್ಳಿಗರಿಗೆ ಒದಗಿಸಲಾಗುತ್ತದೆ.

ಸಮುದ್ರ ಮಟ್ಟದಿಂದ 974 ಮೀಟರ್ ಎತ್ತರದಲ್ಲಿರುವ ಸುಪೈ ಗ್ರಾಮ 4.4 ಚದರ ಕಿಲೋಮೀಟರ್ ವಿಸ್ತಾರದಲ್ಲಿ ಹರಡಿಕೊಂಡಿದೆ.. ಇಲ್ಲಿನ ಕುಟುಂಬ ವ್ಯವಸ್ಥೆಯ ಗೋಳುಹೇಳತೀರದ್ದು. ಹಿಂದಿನ ಗಣತಿಯಲ್ಲಿ ಬಹಿರಂಗವಾಗಿದ್ದ ಸಂಗತಿ ಅಂದ್ರೆ ಶೇ 34ರಷ್ಟು ಸಂಸಾರಗಳು ಇಲ್ಲಿವೆ. ಶೇ 32ರಷ್ಟು ಮಹಿಳೆಯರಿದ್ದಾರೆ ಇನ್ನೂ ಮದುವೆಯಾಗಿಲ್ಲ. ಶೇ 14ರಷ್ಟು ಪುರುಷರು ಅವಿವಾಹಿತರಾಗಿ ಉಳಿದುಕೊಂಡಿದ್ದಾರೆ. ಇನ್ನುಳಿದ ಪ್ರಮಾಣದಲ್ಲಿ ಅನಾಥರು, ಕುಟುಂಬವಿಲ್ಲದವರು, ವೃದ್ಧರು, ಮಕ್ಕಳು ಇಲ್ಲಿದ್ದಾರೆ. ಇಲ್ಲಿನ ಹೆಣ್ಣು ಮಕ್ಕಳು ಹೊರ ಪ್ರಪಂಚಕ್ಕೆ ಹೋಗಲು ಇಚ್ಛಿಸುವುದಿಲ್ಲ ಹಾಗಾಗಿ ಅವರಿಗೆ ಮದುವೆಯಾಗ್ತಿಲ್ಲ. ಸುಪೈನಂತಹ ದೂರದ ಒಂಟಿ ಕುಗ್ರಾಮದ ಯುವಕರಿಗೆ ಯಾರು ತಾನೇ ಹೆಣ್ಣು ಕೊಟ್ಟು ಮದುವೆ ಮಾಡ್ತಾರೆ.

ಯುನೈಟೆಡ್ ಸ್ಟೇಟ್ಸ್ನ 48 ರಾಜ್ಯಗಳಲ್ಲೇ ಅತ್ಯಂತ ಹಿಂದುಳಿದ ಸಣ್ಣ ಹಾಗೂ ದೂರದ ಏಕೈಕ ಗ್ರಾಮ ಈ ಸುಪೈ. ಹಾಗಂತ ಇದು ನಿರ್ಲಕ್ಷಕ್ಕೀಡಾದ ಹಳ್ಳಿಯೇನಲ್ಲ. ವರ್ಷದ ಬಹುತೇಕ ದಿನಗಳು ಇಲ್ಲಿ ಪ್ರವಾಸಿಗರುತುಂಬಿಕೊಂಡಿರುತ್ತಾರೆ.

ಗ್ರಾಂಡ್ ಕೆನಾನ್ ಪ್ರಾಕೃತಿಕ ವೈಭವವನ್ನು ಕಣ್ತುಂಬಿಕೊಳ್ಳಲು ವಿಶ್ವದ ಬೇರೆ ಬೇರೆ ಕಡೆಗಳಿಂದ ಬರುವ ಪ್ರವಾಸಿಗರು ಸುಪೈನಲ್ಲಿ ಒಂದಿನ ತಂಗಿದ್ದು ಹೋಗ್ತಾರೆ. ಸುಪೈ ಎಷ್ಟೇ ಕುಗ್ರಾಮದಂತಿದ್ರೂ ಇಲ್ಲಿನ ಸಹಜ ವಾತಾವರಣ ಹಾಗೂ ನಿಸರ್ಗವೇ ಸೃಷ್ಟಿಸಿಕೊಂಡಿರುವ ರಮಣೀಯ ದೃಶ್ಯವೈಭವ ಅನನ್ಯ. ಸುಪೈ ಈ ಕಾರಣದಿಂದಲೇ ವಿಶ್ವದ ಎಲ್ಲಾ ರಾಷ್ಟ್ರಗಳ ಅಡ್ವೆಂಚರಸ್ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತದೆ.

ಸುಪೈ ಹಳ್ಳಿ ಇರುವ ಗ್ರಾಂಡ್​ ಕೆನಾನ್​ ನ್ಯಾಷನಲ್ ಪಾರ್ಕ್​ನಲ್ಲಿ ಸುಪೈಗೆ ಕೆಲವೆ ಕೂಗಳತೆಯ ದೂರದಲ್ಲಿದೆ ಮನಮೋಹಕ ಹವಾಸು ಜಲಪಾತ. ಇದರ ಒನಪು ವಯ್ಯಾರ ಹಾಗೂ ಭೋರ್ಗರೆತವನ್ನು ಇಷ್ಟಪಡದವನು ಅರಸಿಕನೇ ಸರಿ. ಹ್ವಾಲಾಪೈ ಹವಾಸುಪೈ ಗಿರಿಕಂದರಗಳ ಕಡಿದಾದ ದಾರಿಯಲ್ಲಿ ಚಾರಣ ಮಾಡುತ್ತ, ಹವಾಸು ಜಲಪಾತದಲ್ಲಿ ಸ್ವಚ್ಛಂದ ಜಲಕ್ರೀಡೆಯಾಡಿ, ಮೋಟು ಕುದುರೆಗಳ ಮೇಲೆ ಕುಳಿತು ಸುಪೈಗೆ ಬಂದರೆ ಒಂದು ನೆಮ್ಮದಿಯಾದ ವಿಶ್ರಾಂತಿಗೆ ಸುಪೈನ ಪ್ರವಾಸಿ ತಾಣಗಳು ಸಿದ್ಧವಾಗಿರುತ್ತವೆ. ಪ್ರತೀ ವರ್ಷ ಸುಪೈಗೆ 30 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ಕೊಡ್ತಿದ್ದಾರೆ ಅನ್ನುತ್ತವೆ ಕೆಲವು ಮೂಲಗಳು.

Marjala manthana

ಇಲ್ಲಿ ಲಭ್ಯವಿರುವ ಭಾರದಾತುಗಳಿಂದ ಇಲ್ಲಿ ಮನೆಗಳನ್ನು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಸುಪೈನ ಸಾಲು ಸಾಲು ಮನೆಗಳ ಜೊತೆ ಜನರಲ್ ಸ್ಟೋರ್, ಕೆಫೆ, ಅಂಚೇ ಕಚೇರಿ, ಪ್ರಾಥಮಿಕ ಶಾಲೆ, ವಸತಿ ನಿಲಯಗಳು ಹಾಗೂ ಎರಡು ಚರ್ಚ್ಗಳೂ ಸಹ ಇವೆ. ಸುಪೈನ ಜನ, ಲಭ್ಯ ಇರುವ ಸೌಕರ್ಯದಲ್ಲಿ ಹಾಗೂ ನೀರಿನ ಲಭ್ಯತೆಯ ಸಹಾಯದಿಂದ ಸಣ್ಣ ಪ್ರಮಾಣದಲ್ಲಿ ಕೃಷಿ ಮಾಡುತ್ತಾರೆ. ಬೇಳೆ, ಕಾಳು, ಧಾನ್ಯಗಳು ಹಾಗೂ ಬೀನ್ಸ್ ನಂತಹ ತರಕಾರಿಗಳನ್ನು ಬೆಳೆಯುತ್ತಾರೆ.

ಹಾಗೆಯೇ ತಮ್ಮ ಪೂರ್ವಜರಂತೆ ಸುರುಳಿಯಾಕಾರದ ಬುಟ್ಟಿಗಳನ್ನು ನೇಯುತ್ತಾರೆ. ಕಳೆದ ಒಂದು ಸಾವಿರ ವರ್ಷದಿಂದಲೂ ಗ್ರಾಂಡ್ ಕೆನಾನ್ ಹಾಗೂ ಹ್ವಾಲಾಪೈ ಕೆಂಪು ಶಿಲಾ ಹೊದಿಕೆ ಪರ್ವತ ಶ್ರೇಣಿ ಹೀಗೆಯೇ ಇದೆ; ಈ ಪ್ರದೇಶದ ಸುಪೈ ಹಳ್ಳಿಯೂ ದಶಕಗಳಿಂದ ಒಂದೇ ರೀತಿಯ ಜೀವನ ಶೈಲಿ ಅಳವಡಿಸಿಕೊಂಡು ಬದುಕುತ್ತಿದೆ.. ಇಲ್ಲಿನ ಜನರಿಗೆ ಈ ಪ್ರದೇಶದ ನಿಶ್ಯಬ್ಧ ಹಾಗೂ ಮೌನ ಅಭ್ಯಾಸವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಸುಪೈನ ಏಕತಾನವನ್ನು ಬಹುವಾಗಿ ಮೆಚ್ಚಿಕೊಳ್ತಾರೆ. ಹೀಗಾಗಿಯೇ ದುರ್ಗಮ ಪ್ರದೇಶದಲ್ಲಿದ್ರೂ ಸುಪೈನ ಮಂದಿಗೆ ಬದುಕು ದುರ್ಬರ ಎಂದು ಯಾವಾಗಲೂ ಅನ್ನಿಸಿಲ್ಲ.

ಸುಪೈಯನ್ನರು ನೂರಾರು ವರ್ಷಗಳಿಂದ ಒಂದೇ ರೀತಿಯಜೀವನಶೈಲಿಗೆ ಹೊಂದುಕೊಂಡು ಬದುಕುತ್ತಿದ್ದಾರೆ. ಮೂಲ ಸೌಕರ್ಯಗಳಿಲ್ಲದಿದ್ದರೂ ತಮ್ಮ ಬದುಕನ್ನು ಹಾಗೂ ಕೃಷಿಯನ್ನು ಸುಖವಾಗಿಯೇ ನಡೆಸ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ನೆಮ್ಮದಿಯ ಆತಿಥ್ಯ ಕೊಡುತ್ತಿದ್ದಾರೆ ಸುಪೈನ ಮಂದಿ. ನಮ್ಮಲ್ಲಿ ಎಲ್ಲವೂ ಇದ್ದರೂ ಕೊರಗುವ ಮಂದಿ ಸುಪೈಯನ್ನರನ್ನು ನೋಡಿ ಕಲಿಯಬೇಕಿದೆ.

-ವಿಭಾ (ವಿಶ್ವಾಸ್ ಭಾರದ್ವಾಜ್)

Tags: marjala manthanaSupai VillageUs
ShareTweetSendShare
Join us on:

Related Posts

Karnataka Election 2023 congress bjp jds modi amith shah

30 ದಿನ ಜೈಲಿನಲ್ಲಿದ್ದರೆ ಅಧಿಕಾರ ಗೋವಿಂದ -ಜೈಲಿನಿಂದ ಆಡಳಿತ ನಡೆಸುವ ಆಟಕ್ಕೆ ಬೀಳಲಿದೆ ಬ್ರೇಕ್:30 ದಿನ ಜೈಲಿನಲ್ಲಿದ್ದರೆ ಸಿಎಂ ಮತ್ತು ಪ್ರಧಾನಿ ಪಟ್ಟಕ್ಕೆ ಕುತ್ತು;ವಿರೋಧ ಪಕ್ಷಗಳ ನಿದ್ದೆಗೆಡಿಸಿದ ಕೇಂದ್ರದ ಹೊಸ ಪ್ಲಾನ್

by Shwetha
July 3, 2026
0

ನವದೆಹಲಿ: ಭ್ರಷ್ಟಾಚಾರ ಅಥವಾ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿ ಜೈಲು ಪಾಲಾಗುವ ಉನ್ನತ ಹುದ್ದೆಯಲ್ಲಿರುವವರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದೆ. ಯಾವುದೇ ಸಚಿವರು, ಮುಖ್ಯಮಂತ್ರಿ ಅಥವಾ...

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ಟಿನ್ನು ಯಾದವ್ ಪ್ರಮುಖ ಆರೋಪಿಯೆಂದ ಚಂಪತ್ ರಾಯ್

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ಟಿನ್ನು ಯಾದವ್ ಪ್ರಮುಖ ಆರೋಪಿಯೆಂದ ಚಂಪತ್ ರಾಯ್

by Shwetha
July 3, 2026
0

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದ ತನಿಖೆಯಲ್ಲಿ ಹೊಸ ಮಾಹಿತಿಗಳು ಹೊರಬರುತ್ತಿದ್ದು, ಚಂಪತ್ ರಾಯ್ ಅವರು ಪೊಲೀಸರ ವಿಚಾರಣೆ ವೇಳೆ ಟಿನ್ನು ಯಾದವ್ ಪ್ರಮುಖ ಪಾತ್ರವಹಿಸಿದ್ದಾನೆ ಎಂದು ಹೇಳಿರುವುದಾಗಿ...

ಸಂಜು ಸ್ಯಾಮ್ಸನ್ ಫೇಲ್, ವೈಭವ್ ಔಟ್ – ಐರ್ಲೆಂಡ್ ಬೌಲರ್ ಗಳ ಪ್ಯಾಂಟ್ ಬಿಚ್ಚಿಸುತ್ತಿದ್ದ ಈ ಹುಡುಗ: ವೈಭವ್ ಸೂರ್ಯವಂಶಿಗೆ ಅವಕಾಶ ನೀಡದ್ದಕ್ಕೆ ರವಿಶಾಸ್ತ್ರಿ ಗರಂ

ಸಂಜು ಸ್ಯಾಮ್ಸನ್ ಫೇಲ್, ವೈಭವ್ ಔಟ್ – ಐರ್ಲೆಂಡ್ ಬೌಲರ್ ಗಳ ಪ್ಯಾಂಟ್ ಬಿಚ್ಚಿಸುತ್ತಿದ್ದ ಈ ಹುಡುಗ: ವೈಭವ್ ಸೂರ್ಯವಂಶಿಗೆ ಅವಕಾಶ ನೀಡದ್ದಕ್ಕೆ ರವಿಶಾಸ್ತ್ರಿ ಗರಂ

by Shwetha
July 3, 2026
0

ಲಂಡನ್: ಟೀಂ ಇಂಡಿಯಾದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ಸತತವಾಗಿ ಬೆಂಚ್ ಕಾಯಿಸುತ್ತಿರುವುದಕ್ಕೆ ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್...

2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ: ರಾಜೇಂದ್ರ ಪಾಲ್ ಗೌತಮ್

2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ: ರಾಜೇಂದ್ರ ಪಾಲ್ ಗೌತಮ್

by Shwetha
July 3, 2026
0

ಉತ್ತರ ಪ್ರದೇಶ ಕಾಂಗ್ರೆಸ್‌ನ ನೂತನ ಉಸ್ತುವಾರಿಯಾಗಿ ನೇಮಕಗೊಂಡಿರುವ ರಾಜೇಂದ್ರ ಪಾಲ್ ಗೌತಮ್ ಅವರು, 2029ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡುತ್ತೇವೆ ಎಂದು...

ಬಿಡದಿ ಟೌನ್‌ಶಿಪ್ ದಂಗಲ್:ನಿಮ್ಮಿಂದ ರಿಪ್ಲೈ ಬಂದಿಲ್ಲ- ಬಿಡದಿ ರೈತರ ಕಣ್ಣೀರು ಒರೆಸಲು ಬನ್ನಿ: ಡಿಕೆಶಿಗೆ ಎಚ್‌ಡಿಕೆ ಖಡಕ್ ಪತ್ರ, ಜೂನ್ 27ಕ್ಕೆ ಮಹಾ ಮುಖಾಮುಖಿ?

ಕಾಲಚಕ್ರ ಉರುಳುತ್ತಲೇ ಇರುತ್ತದೆ, ಮೇಲೆ ಹೋದವನು ಕೆಳಗೆ ಬರಲೇಬೇಕು: ಅಧಿಕಾರದ ಮದದಲ್ಲಿ ಮೆರೆಯಬೇಡಿ, ಪ್ರತಿ ಅಂತ್ಯಕ್ಕೂ ಒಂದು ಆರಂಭವಿದೆ – ಡಿಕೆಶಿಗೆ ಎಚ್‌ಡಿ ಕುಮಾರಸ್ವಾಮಿ ಖಡಕ್ ತಿರುಗೇಟು

by Shwetha
July 3, 2026
0

ಬೆಂಗಳೂರು: ರಾಜಕೀಯದಲ್ಲಿ ಯಾರೂ ಶಾಶ್ವತವಲ್ಲ, ಅಧಿಕಾರದ ಮದದಲ್ಲಿ ಮೆರೆಯುವವರಿಗೆ ಕಾಲವೇ ಉತ್ತರ ನೀಡಲಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram