ಪ್ಯಾರೇ ದೇಶ ವಾಸಿಯೋ ಗಮನಿಸಿ : ರೈಲು ಪ್ಲಾಟ್ ಫಾರ್ಮ್ ಟಿಕೆಟ್ ದರ ದಿಢೀರ್ ಹೆಚ್ಚಳ..!
ಮುಂಬೈ : ಪೆಟ್ರೋಲ್ , ಡೀಸೆಲ್ ದರ ಏರಿಕೆ. ದಿನಬಳಕೆ ವಸ್ತುಗಳ ದರ ಏರಿಕೆ, ಅಡುಗೆ ಅನಿಲ, ರೈಲು ಟಿಕೆಟ್ ದರ ಏರಿಕೆ. ಹೀಗೆ ದಿನೇ ದಿನೇ ದರ ಏರಿಕೆಯಿಂದ ಸಾರ್ವಜನಿಕರು ಕಂಗಾಲಾಗಿ ಹೋಗಿದ್ದಾರೆ. ಇಷ್ಟಾದ್ರೂ ಕೇಂದ್ರದಿಂದ ದರ ಏರಿಕೆ ಪರ್ವ ನಿಲ್ಲೋ ಕಾಣ್ತಿಲ್ಲ. ರೈಲು ಪ್ರಯಾಣದ ಟಿಕೆಟ್ ದರ ಏರಿಸಿರೋದು ಸಾಲೋದಿಲ್ಲ ಅಂತ ಇದೀಗ ಪ್ಲಾಟ್ ಫಾರ್ಮ್ ಟಿಕೆಟ್ ದರ ಏರಿಕೆ ಮಾಡಿದೆ ಭಾರತೀಯ ರೈಲ್ವೆ ಇಲಾಖೆ.
ರ್ಯಾಗಿಂಗ್ ಪ್ರಶ್ನಿಸಿದ್ದಕ್ಕೆ ಪ್ರಾಂಶುಪಾಲರ ಮೇಲೆಯೇ ಹಲ್ಲೆ ಮಾಡಿದ ವಿದ್ಯಾರ್ಥಿಗಳು..!
ಹೌದು ರೈಲ್ವೆ ಫ್ಲಾಟ್ ಫಾರಂ ಟಿಕೆಟ್ ಶುಲ್ಕವನ್ನು 10 ರೂ.ಗಳಿಂದ 30 ರೂ.ಗಳಿಗೆ ದಿಢೀರನೆ ಏರಿಸುವ ಮೂಲಕ ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ದೊಡ್ಡ ಶಾಕ್ ನೀಡಿದೆ. ದೇಶಾದ್ಯಂತ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ರೈಲ್ವೆ ಇಲಾಖೆಯು ಫ್ಲಾಟ್ ಫಾರಂ ಟಿಕೆಟ್ ಬೆಲೆಯಲ್ಲಿ 10 ರೂ.ಗಳಿಂದ 30 ರೂ.ಗೆ ಏರಿಸಿದೆ.
ಇದೇ ವೇಳೆ ಕನಿಷ್ಠ ಪ್ರಯಾಣ ದರವನ್ನು ಕೂಡ 10 ರೂ.ನಿಂದ 30ರೂ.ಗೆ ಏರಿಸಿದೆ.
22 ವರ್ಷದ ಯುವತಿ ಮೇಲೆ 1 ತಿಂಗಳ ಕಾಲ 60 ಜನರಿಂದ ನಿರಂತರ ಅತ್ಯಾಚಾರ..!
ಆದ್ರೆ ಮುಂಬೈನಲ್ಲಿ ಈ ದರವನ್ನ ಏಕಾಏಕಿ 50 ರೂಪಾಯಿ ಹೆಚ್ಚಳ ಮಾಡಲಾಗಿದೆ. ಹೌದು ಆದ್ರೆ ಈ ನಿರ್ಧಾರಕ್ಕೆ ರೈಲ್ವೇ ಇಲಾಖೆಯು ಕೊರೊನಾದ ಕಾರಣ ಕೊಟ್ಟಿದೆ. ಕೊರೊನಾ 2ನೇ ಅಲೆ ಶುರುವಾಗಿರುವ ಹಿನ್ನೆಲೆ, ಜನಸಂದಣಿ ನಿಯಂತ್ರಿಸಲು ಮುಂಬೈನ ಕೆಲವು ಮುಖ್ಯ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ ದರ ಏರಿಸಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರೈಲ್ವೆ ಇಲಾಖೆಯ ಕೇಂದ್ರೀಯ ರೈಲ್ವೆ ಮಂಡಳಿಯು ಈ ನಿರ್ಧಾರ ಕೈಗೊಂಡಿದೆ.
ಅಕ್ಷರಸಃ ನರಕವಾದ ಮ್ಯಾನ್ಮಾರ್, ಅಸಹಾಯಕತೆಯಿಂದ ಭಾರತಕ್ಕೆ ಓಡಿ ಬಂದ ಮ್ಯಾನ್ಮಾರ್ ಪೊಲೀಸರು..!
ಈ ಮೊದಲು ಪ್ಲಾಟ್ಫಾರ್ಮ್ ಟಿಕೆಟ್ ದರ 10 ರೂ.ಇತ್ತು. ಆದರೆ ಈಗ ಕೊರೊನಾ ಕಾರಣದಿಂದಾಗಿ ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಿಸಲು, ಆ ದರವನ್ನು 50 ರೂಪಾಯಿಗೆ ಏರಿಕೆ ಮಾಡಲಾಗಿದೆ.








