ಪೂರ್ವ ಟರ್ಕಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನ : 11 ಸೇನಾ ಸಿಬ್ಬಂದಿ ಸಾವು
ಪೂರ್ವ ಟರ್ಕಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನವಾಗಿದ್ದು, ಹೆಲಿಕಾಪ್ಟರ್ ನಲ್ಲಿದ್ದ 11 ಮಂದಿ ಸೇನಾ ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
22 ವರ್ಷದ ಯುವತಿ ಮೇಲೆ 1 ತಿಂಗಳ ಕಾಲ 60 ಜನರಿಂದ ನಿರಂತರ ಅತ್ಯಾಚಾರ..!
ರಕ್ಷಣಾ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಕೂಗರ್ ಮಾದರಿಯ ಹೆಲಿಕಾಪ್ಟರ್ ಪ್ರಮುಖವಾಗಿ ಕುರ್ದಿಶ್ ಜನಸಂಖ್ಯೆಯಿರುವ ಬಿಟ್ಲಿಸ್ ಪ್ರಾಂತ್ಯದ ತತ್ವಾನ್ ಪಟ್ಟಣಕ್ಕೆ ಸಮೀಪವಿರುವ ಸೆಕ್ಮೀಸ್ ಗ್ರಾಮದ ಬಳಿ ಪತನಗೊಂಡಿದೆ. ಬಿಂಗೋಲ್ನಿಂದ ತತ್ವಾನ್ ಗೆ ತೆರಳುತ್ತಿದ್ದಾಗ ಈ ಅನಾಹುತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟವರ ಪೈಕಿ ಉನ್ನತ ಅಧಿಕಾರಿಯಾಗಿದ್ದ ಸೇನಾದಳದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಸ್ಮಾನ್ ಎರ್ಬಾಸ್ ಕೂಡ ಇದ್ದರು ಎಂದು ಟರ್ಕಿಯ ಪ್ರಮುಖ ರಾಷ್ಟ್ರೀಯವಾದಿ ಪಕ್ಷದ ನಾಯಕರೊಬ್ಬರು ಟ್ವಿಟರ್ ನಲ್ಲಿ ತಿಳಿಸಿದ್ದಾರೆ.