ಪಂಚ ಮಹಾಸಾಗರಗಳ ನೆಲೆವೀಡು ಉತ್ತರ ಅಮೇರಿಕಾ

1 min read
Saakshatv Naavu kelada charitre episode 16

ಪಂಚ ಮಹಾಸಾಗರಗಳ ನೆಲೆವೀಡು ಉತ್ತರ ಅಮೇರಿಕಾ : Saakshatv Naavu kelada charitre episode 16

ಒಮ್ಮೆ ಉತ್ತರ ಅಮೆರಿಕಾ ಖಂಡದ ಭೂಪಟವನ್ನೊಮ್ಮೆ ದಿಟ್ಟಿಸಿ ನೋಡಿ. ಕೂಡಲೇ ಎದ್ದು ಕಾಣುವುದೇನು? ಎದ್ದು ಕಾಣುವಂತಹ ಮೂರ್ನಾಲ್ಕು ರಚನೆಗಳ ಹೇಳಬಹುದಾದರೂ ನನಗೆ ಮೊದಲು ಕಣ್ಣಿಗೆ ಬೀಳುವುದು ಪಂಚ‌ ಮಹಾಸರೋವರಗಳು. ಸಮುದ್ರ ಸದೃಶವಾದ ಸಿಹಿನೀರಿನ ಆಕರಗಳು. ಭೂಮಿಯ ಮೇಲ್ಮೈಲಿರುವ ಸಿಹಿನೀರಿನ ಐದನೇ ಒಂದು ಭಾಗ ಇಲ್ಲಿದೆ (ಧೃವ ಪ್ರದೇಶಗಳಲ್ಲಿ ಶೇಖರವಾದ ಹಿಮರಾಶಿಯ ಬಿಟ್ಟು). ಇವುಗಳ ಒಟ್ಟಾರೆ ವಿಸ್ತೀರ್ಣ ಹತ್ತಿರ ಹತ್ತಿರ 2.40 ಲಕ್ಷ ಚದರ ಕೊಲೋಮೀಟರುಗಳು. ಆಶ್ಚರ್ಯಕರ ಸಂಗತಿಯೇನೆಂದರೆ ಇವು ಭೂಮಿಯಲ್ಲಿ ಉಗಮಿಸಿದ್ದು ತೀರಾ ಇತ್ತೀಚೆಗೆ. ಮಾನವ ನಾಗರೀಕತೆ ಶುರುವಾದಮೇಲೆ.

Saakshatv Naavu kelada charitre episode 16

ಸುಮಾರು ಇಪ್ಪತ್ತು ಸಾವಿರಕ್ಕೂ ವರ್ಷಗಳ ಹಿಂದೆ ಹಿಮಯುಗವಿದ್ದಾಗ ಉತ್ತರ ಅಮರಿಕಾ ಖಂಡದ ಅರ್ಧದವರೆಗೂ ದಪ್ಪನೆಯ ಪದರದ ಹಿಮ ಶೇಖರಣೆಗೊಂಡಿತ್ತು. ಆ ಮಂಜುಗಡ್ಡೆಗಳ ಭಾರಕ್ಕೆ ಅನೇಕ ಕುಳಿಗಳಂತ ರಚನೆಗಳು ಉಂಟಾದವು‌. ಹಿಮಯುಗ ಮುಗಿಯುತ್ತಾ ಬಂದಂತೆ ಮಂಜುಗಡ್ಡೆಗಳು ಕರಗತೊಡಗಿದವು. ಹಿಮಯುಗ ಮುಗಿಯುತ್ತಾ ಮಂಜು ಕರಗತೊಡಗಿದಂತೆ ಅಲ್ಲಿ ನೀರು ತುಂಬುತ್ತಾ ಬಂದಿತು. ಹೀಗೆ ಈ ಪಂಚಮಹಾಸರೋವರಗಳು ಹುಟ್ಟಿದವು. ಅವು ಈಗಿನ ರೂಪಕ್ಕೆ ಬಂದಿದ್ದು ಕೇವಲ ಮೂರುಸಾವಿರ ವರ್ಷಗಳ ಹಿಂದೆ. ಪ್ರಕೃತಿಯ ಮುಂದೆ ನಾವು ಎಷ್ಟು ಚಿಕ್ಕವರೆಂಬುದನ್ನ ಇಂತಹ ಮಹಾ ರಚನೆಗಳು ಮತ್ತೆ ಮತ್ತೆ ನೆನಪಿಸುತ್ತವೆ.

ಪಂಚ ಮಹಾ ಸರೋವರಗಳೆಂದರೆ ಸುಪೀರಿಯರ್, ಮಿಶಿಗನ್, ಹ್ಯೂರಾನ್, ಈರಿ ಮತ್ತು ಓಂಟಾರಿಯೋ. ಟೆಕ್ನಿಕಲಿ ನೋಡೋದಾದರೆ ಈ ಐದೂ ಸರೋವರಗಳು ಒಂದೇ, ಒಂದಕ್ಕೊಂದು ತಾಗಿಕೊಂಡಿವೆ. ಅದರಲ್ಲೂ ಮಿಶಿಗನ್ ಮತ್ತು ಹ್ಯೂರಾನ್‌ಗಳೆಂತೂ ಬೇರೆ ಎಂದು ಹೇಳಲಾಗದಷ್ಟು ಒಟ್ಟಿಗಿವೆ.

ಸುಪಿಯರ್ ಮತ್ತು ಮಿಶಿಗನ್ ಸರೋವರದದ ನೀರು ಹ್ಯೂರಾನ್ ಕಡೆ ಪ್ರವಹಿಸುತ್ತದೆ. ಅಲ್ಲಿಂದ ಈರಿ ತಲುಪಿ, ಇರಿಯಿಂದ ನಯಾಗರಾ ಮೂಲಕ ಓಂಟಾರಿಯೋ ಸರೋವರ ತಲುಪಿ ಅಲ್ಲಿಂದ ಒಂದು ಧಾರೆ ಅಟ್ಲಾಂಟಿಕ್ ಮಹಾಸಾಗರದೆಡೆ ಪ್ರವಹಿಸುತ್ತದೆ. ಇದಲ್ಲದೇ ಇನ್ನೂ ಕೆಲ ನದಿಗಳು ಈ ಸರೋವರಗಳಲ್ಲಿ ಹುಟ್ಟುತ್ತವೆ.

Saakshatv Naavu kelada charitre episode 16

ಈ ಐದು ಸರೋವರಗಳಲ್ಲಿ ಸುಪೀರಿಯರ್ ಅತ್ಯಂತ ಶುದ್ಧವಾಗಿದ್ದರೆ ಈರಿಯು ಉಳಿದ ಸರೋವರಗಳಿಗಿಂತ ಹೆಚ್ಚು ಮಲಿನಗೊಂಡಿದೆ. ಇದಕ್ಕೆ ಮುಖ್ಯ ಕಾರಣ ಇದು ಎಲ್ಲಕ್ಕಿಂದ ದಕ್ಷಿಣದಲ್ಲಿರುವ ಕಾರಣ ಮತ್ತು ಬೆಚ್ಚಗಿನ ನೀರನ್ನು ಹೊಂದಿದ ಕಾರಷ ಮೀನುಗಾರಿಕೆಗೆ ಅತ್ಯಂತ ಪ್ರಶಸ್ತವಾಗಿದೆ ಮತ್ತು ಕೈಗಾರಿಕೋದ್ಯಮಗಳಿಗೂ ಅತ್ಯಂತ ಅನುಕೂಲಕರವಾಗಿವೆ.

ನೈಸರ್ಗಿಕ ಮಹಾಸರೋವರಗಳ ನೋಡದ ನನಗೆ ಇವುಗಳಲ್ಲಿ ಯಾವುದಾದರೊಂದನ್ನ ನೋಡುವ ಮನಸ್ಸಿತ್ತಾದರೂ ಅವಕಾಶ ಸಿಗಲಿಲ್ಲ. ಮಾನವನ ಹಸ್ತಕ್ಷೇಪದಿಂದಾದ ದೊಡ್ಡ ಪ್ರಾಕೃತಿಕ ದುರಂತದ ಬಗ್ಗೆ ತಿಳಿಯಲು ಅರಾಲ್ ಸಮುದ್ರದ ಸಾವಿನ ಕಥೆಯನ್ನು ಒಮ್ಮೆ ಓದಿ ನೋಡಿ.

-ಗಿರಿಧರ್ ಭಟ್ ಗುಂಜಗೋಡು
ಸಾಫ್ಟ್ ವೇರ್ ಉದ್ಯೋಗಿ ಮತ್ತು ಹವ್ಯಾಸಿ ಬರಹಗಾರ
ಸಿದ್ಧಾಪುರ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd