ಖುದ್ದು ಗಾಂಧಿಯೇ ಸತ್ಯವೆಂದು ಹೇಳಿದ ಪುನರ್ಜನ್ಮದ ಕಥೆ

1 min read
reincarnation told by Gandhi

ಖುದ್ದು ಗಾಂಧಿಯೇ ಸತ್ಯವೆಂದು ಹೇಳಿದ ಪುನರ್ಜನ್ಮದ ಕಥೆ : Saakshatv vishwa vismaya episode7

ಈಕೆಯ ಹೆಸರು ಶಾಂತಿ ದೇವಿ. ಜನಿಸಿದ್ದು ದೆಹಲಿಯಲ್ಲಿ (1926). ಈಕೆಗೆ ನಾಲ್ಕು ವರ್ಷವಿದ್ದಾಗಲೆ ತನ್ನ ಪೋಷಕರಿಗೆ ತಾನು ಕಳೆದ ಜನ್ಮದಲ್ಲಿ ಲುಗ್ಡಿ ದೇವಿ ಎಂಬ ಹೆಸರಲ್ಲಿ‌ ಜನಿಸಿದ್ದೆನೆಂದೂ. ಈಗ್ಗೆ ಹತ್ತು ವರ್ಷದ ಕೆಳಗಷ್ಟೆ ಮಗುವೊಂದಕ್ಕೆ ಜನ್ಮ ನೀಡಿ ಪ್ರಾಣ ಬಿಟ್ಟೆನೆಂದೂ, ಮಥುರಾದಲ್ಲಿ ತನ್ನ ಪತಿ ‘ಕೇದಾರ್ ನಾಥ್’ ಇರುವನೆಂದೂ ಹೇಳಿದಳು !

ನಂಬದ ಪೋಷಕರ ತಿರಸ್ಕಾರದಿಂದಾಗಿ ಮನೆ ಬಿಟ್ಟ ಈಕೆ ತನ್ನ ಆರನೇ ವಯಸ್ಸಿಗೇ ಮಥುರಾ ತಲುಪಿ ಅಲ್ಲಿನ‌ ಶಾಲೆಯೊಂದರಲ್ಲಿ ತನ್ನ ಪೂರ್ವಾಪರದ ಕತೆ ತಿಳಿಸಿದಾಗ. ಆಕೆ ಉಲ್ಲೇಖಿಸಿದ ಕೇದಾರ್ ನಾಥ್ ಹೆಸರಿನ ವ್ಯಕ್ತಿಯೊಬ್ಬ ಪಕ್ಕದಲ್ಲಿ ಇದ್ದುದು ಹಾಗೂ ಆತ ಹತ್ತು ವರ್ಷದ ಕೆಳಗಷ್ಟೆ ತನ್ನ ಪತ್ನಿಯನ್ನ ಕಳೆದುಕೊಂಡಿದ್ದ ಸಂಗತಿಯೂ ತಿಳಿಯಿತು !

reincarnation told by Gandhi

ಆತನನ್ನ‌ ಭೇಟಿಯಾದಾಗ ಆತನನ್ನೂ ಆತನ‌ ಜತೆಗಿದ್ದ ತನ್ನ ಹೋದ ಜನ್ಮದ ಮಗನನ್ನೂ ಗುರುತು ಹಿಡಿದ ಆರು ವರ್ಷದ ಬಾಲಕಿ ಅವನ ಮನೆಯವರೆಲ್ಲರ ಹೆಸರನ್ನೂ ಹೇಳಿ ಗುರುತು ಹಿಡಿದಳು. 1935 ರಲ್ಲೊಮ್ಮೆ ಸ್ವತಃ ಗಾಂಧೀಜಿಯವರಿಂದಲೆ ಒಂದು ಸಮಿತಿ ಆಯೋಜಿಸಿ ಈಕೆಯನ್ನ ಕರೆಸಿ ಈಕೆಯ ಕತೆ ಸತ್ಯವೆಂದು ಘೋಷಿಸಲಾಯ್ತು !

ದೆಹಲಿಯ ಬಾಲಕಿ ಹರಳು ಹುರುದಂತೆ ಮಥುರಾದ ಭಾಷೆಯನ್ನ ಅದೇ ಧಾಟಿಯಲ್ಲಿ ಮಾತಾಡುತ್ತಿದ್ದಳು ಕೂಡ. ಆಕೆಯನ್ನ ಸಂದರ್ಶಿಸಿದ ಅನೇಕ ವಿದೇಶಿ ಪತ್ರಕರ್ತರು ಹಾಗೂ ಬರಹಗಾರರು ಆಕೆಯ ಈ ರೋಚಕ ಪುನರ್ಜನ್ಮದ ಬಗ್ಗೆ ಪುಸ್ತಕಗಳನ್ನ ಬರೆದಿದ್ದಾರೆ.

reincarnation told by Gandhi

I have lived before ಎಂಬ ಆಕೆಯ ಬಗೆಗಿನ ಒಂದು ಇಂಗ್ಲೀಷ್ ಪುಸ್ತಕ ಇಲ್ಲಿ ಸೂಕ್ತ ಸಲಹೆ. ಪುನರ್ಜನ್ಮದ ಸತ್ಯಘಟನೆಗಳಲ್ಲಿ ಈಕೆಯ ಕತೆ ಟಾಪಲ್ಲಿದೆ

-ಇಂದೂಧರ್ ಒಡೆಯರ್ ಚಿತ್ರದುರ್ಗ
ಹವ್ಯಾಸಿ ಬರಹಗಾರ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd