ಮತ್ತಷ್ಟು ಹ್ಯಾಂಡ್ಸಮ್ ಲುಕ್ ನಲ್ಲಿ ಧ್ರುವ ದರ್ಶನ : ಹೊಸ ಗೆಟಪ್ ಗೆ ಫ್ಯಾನ್ಸ್ ಫಿಧಾ..!
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತೆ ‘ಖರಾಬ್’ ಲುಕ್ ನಿಂದ ಈಗ ಮತ್ತೆ ತಮ್ಮ ಒರಿಜಿನಲ್ ಸ್ಟೈಲ್ ಗೆ ಮರಳಿದ್ದಾರೆ. ಸದ್ಯ ಪೊಗರು ಸಿನಿಮಾಗಾಗಿ 2 ವರ್ಷಗಳಿಂದ ಗಡ್ಡ ಮೀಸೆ ಬಿಟ್ಟು ಖಡಕ್ ಆಗಿ ಬದಲಾಗಿದ್ದರು ಧ್ರುವ. ಇದೀಗ ಸಿನಿಮಾ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ತಿದೆ. ಇನ್ನೂ ಚಿತ್ರೀಕರಣ ಮುಗಿಯುತ್ತಿದ್ದಂತೆ ಧ್ರುವ ಕೂದಲಿಗೆ ಕತ್ತರಿ ಹಾಕುವ ಮೂಲಕ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಧ್ರುವ ಕ್ಲೀನ್ ಶೇವ್ ಮಾಡಿ ಅಭಿಮಾನಿಗಳಿಗೆ ಮತ್ತಷ್ಟು ಹ್ಯಾಂಡ್ಸಮ್ ಲುಕ್ ನಲ್ಲಿ ದರ್ಶನ ನೀಡಿದ್ದಾರೆ.
ಇತ್ತೀಚಿಗಷ್ಟೆ ಧ್ರುವ ಪತ್ನಿ ಪ್ರೇರಣಾ ಜೊತೆ ಗೋವಾ ಪ್ರವಾಸಕ್ಕೆ ತೆರಳಿದ್ದ ಧ್ರುವ ಸದ್ಯ ವಾಪಸ್ ಆಗಿದ್ದಾರೆ. ಗೋವಾ ಕಡಲ ತೀರದಲ್ಲಿ ಪತ್ನಿ ಜೊತೆ ರೊಮ್ಯಾಂಟಿಕ್ ಮೂಡ್ ನಲ್ಲಿದ್ದ ಧ್ರುವ ಸರ್ಜಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಲ್ಲಿಂದ ಬೆಂಗಳೂರಿಗೆ ವಾಪಸ್ ಬರುತ್ತಿದ್ದಂತೆ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಇವರ ಹೊಸ ಗೆಟಪ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಪ್ರಭಾಸ್ ಗೂ ಮುನ್ನ ‘ರಾಖಿ ಭಾಯ್’ ಮುಂದೆ ‘ಸಲಾರ್’ ಆಫರ್ ಇಟ್ಟಿದ್ರಾ ಪ್ರಶಾಂತ್ ನೀಲ್..!
ಇನ್ನು ಧ್ರುವ ಸರ್ಜಾ ತಮ್ಮ 5ನೇ ಸಿನಿಮಾವಾಗಿರುವ ದುಬಾರಿಯಲ್ಲಿ ಬ್ಯುಸಿಯಾಗಲಿದ್ದಾರೆ. ಅದ್ಧೂರಿ, ಭರ್ಜರಿ , ಬಹದ್ದೂರ್, ಪೊಗರು ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿ ಅಪಾರ ಅಭಿಮಾನಿಗಳನ್ನ ಸಂಪಾದಿಸಿರುವ ಧ್ರುವ ಇದೀಗ ದುಬಾರಿಯಾಗಿ ಬರಲು ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ ಪೂಜೆಯಾಗಿದ್ದು, ಅದ್ಧೂರಿಯಾಗಿ ದುಬಾರಿ ಸೆಟ್ಟೇರಲಿದೆ. ಈ ಸಿನಿಮಾದಲ್ಲೂ ಪೊಗರು ಕಾಂಬೋ ಮೋಡಿ ಮಾಡಲಿದೆ. ನಂದಕಿಶೋರ್ ಮತ್ತೆ ಧ್ರುವಾಗೆ ಆಕ್ಷನನ್ ಕಟ್ ಹೇಳಲಿದ್ದಾರೆ.








