ಲಾಕ್ ಡೌನ್ ಹಿನ್ನೆಲೆ ದೇಶದ ಎಲ್ಲಾ ಜನರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಸಮಯದಲ್ಲಿ ಭಾರತೀಯರು ಗೂಗಲ್ ನಲ್ಲಿ ಯಾವ ವಿಚಾರಕ್ಕಾಗಿ ಹೆಚ್ಚಾಗಿ ಹುಡುಕಾಟ ನಡೆಸಿದ್ದಾರೆ ಎಂಬುದರ ಬಗ್ಗೆ ಗೂಗಲ್ ಸಂಸ್ಥೆ ಮಾಹಿತಿ ನೀಡಿದೆ.
ಶೇಕಡಾ 39ರಷ್ಟು ಮಂದಿ ಕೊರೊನಾ ಬಗ್ಗೆ ಹುಡುಕಾಟ!
ಮನೆಯಲ್ಲಿ ಸಮಯ ಕಳೆಯುತ್ತಿರುವ ಜನರು ಹೆಚ್ಚು ಸರ್ಚ್ ಮಾಡುತ್ತಿರೋದು ಕೊರೊನಾ ಚಿಕಿತ್ಸಾ ಸಲಹೆಗಳು. ಈ ವಿಷಯದ ಹುಡುಕಾಟ ಕಳೆದ ಒಂದು ವಾರದಲ್ಲಿ ಶೇಕಡಾ 39ರಷ್ಟು ಹೆಚ್ಚಾಗಿದೆ.
ಇನ್ನು ಎರಡನೇದಾಗಿ ಜನರು ಲಾಕ್ ಡೌನ್ ಬಗ್ಗೆ ಹುಡುಕುತ್ತಿದಾರಂತೆ. ಲಾಕ್ ಡೌನ್ ಅವಧಿ ಹೆಚ್ಚಾಗುತ್ತಾ ಅಥವಾ ಮುಗಿಯುತ್ತಾ. ಈ ಬಗ್ಗೆ ಸರ್ಕಾರ ಯಾವಾಗ ಘೋಷಿಸುತ್ತೆ ಎಂದು ಹುಡುಕುತ್ತಿದ್ದಾರಂತೆ. ಇದೂ ಕೂಡ ಕಳೆದ ಒಂದು ವಾರದಲ್ಲಿ ಶೇಕಡಾ.19ರಷ್ಟು ಹೆಚ್ಚಾಗಿದೆ.
ವಿಶೇಷವೆಂದರೆ, ಹೆಚ್ಚಾಗಿ ಹಿಂದಿಯಲ್ಲೇ ಪ್ರಶ್ನೆಗಳನ್ನ ಕೇಳಲಾಗ್ತಿದೆಯಂತೆ. ಇದರ ಜೊತೆಗೆ ಮತ್ತೆ ಹಲವು ಪ್ರಶ್ನೆಗಳನ್ನ ಭಾರತೀಯರು ಕೇಳಿದ್ದು ಅದರಲ್ಲಿ ಪ್ರಮುಖವಾದವು.. ಕೊರೊನಾ ರೋಗಿಗಳ ಸಂಖ್ಯೆ ಎಷ್ಟು? ಇದುವರೆಗೂ ಎಷ್ಟು ಹೆಚ್ಚಾಗಿದ್ದಾರೆ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರಂತೆ.