ವಿವಾಹಿತ ಮಹಿಳೆಯನ್ನ ಬಲವಂತವಾಗಿ ಎಳೆದೊಯ್ದು ಟಾರ್ಚರ್ ಕೊಟ್ಟ ಪಾಗಲ್ ಪ್ರೇಮಿ..!
ಕಲಬುರಗಿ : ಯುವಕನೋರ್ವ ವಿವಾಹಿತ ಮಹಿಳೆಯನ್ನ ಬಲವಂತವಾಗಿ ಕರೆದೊಯ್ದು ಆಕೆಗೆ ಮದುವೆಯಾಗುವಂತೆ ಮಾನಸಿಕವಾಗಿ ಚಿತ್ರಹಿಂಸೆ ನೀಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನನ್ನ ಪೊಲೀಸರು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದ ನಾಲ್ಕನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀನಿವಾಸ ಕೆ.ಆರ್. ಅವರು ಆರೋಪಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 12 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ತಂದೆ – ತಾತನನ್ನು ಬರ್ಬರವಾಗಿ ಕೊಲೆ ಮಾಡಿದ ತಾನೂ ಆತ್ಮಹತ್ಯೆ ಮಾಡಿಕೊಂಡ..!
ಯಾದಗಿರಿ ಜಿಲ್ಲೆ ಶಹಾಪುರದ ಮಿಲನಕುಮಾರ ಹಯ್ಯಾಳಕರ ಶಿಕ್ಷೆಗೊಳಗಾದ ಯುವಕನಾಗಿದ್ದಾನೆ. ಖೂಬಾ ಪ್ಲಾಟ್ ನ ಮಹಿಳೆಯನ್ನ ಮದುವೆ ಮುಂಚೆಯೇ ಈತ ವಿವಾಹವಾಗಲು ಬಯಸಿದ್ದ. ಆದ್ರೆ ಇದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ. ಆದ್ರೆ ಮಹಿಳೆಗೆ ಕಳೆದ 9 ವರ್ಷಗಳ ಹಿಂದೆ ಮತ್ತೊಬ್ಬರ ಜೊತೆಗೆ ವಿವಾಹವಾಗಿತ್ತು. ಆದ್ರೂ ಈ ಪಾಗಲ್ ಪಟ್ಟು ಬಿಡದೆ ಮಹಿಳೆಯ ಬೆನ್ನಿಗೆ ಬಿದ್ದಿದ್ದ. ಬಳಿಕ ಆಕೆಗೆ ಜೀವ ಬೆದರಿಕೆ ಹಾಕಿ ಬಲವಂತವಾಗಿ ಕರೆದೊಯ್ದಿದ್ದ. ಬಳಿಕ ಈ ಸಂಬಂಧ ಮಹಿಳೆಯ ಪೋಷಕರು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬಳಿಕ ಕಂಬಿ ಹಿಂದೆ ತಳ್ಳಿದ್ದಾರೆ.








