ಅನಾನಸ್( ಪೈನಾಪಲ್) ಗೊಜ್ಜು Saakshatv cooking recipes pineapple gojju
ಬೇಕಾಗುವ ಸಾಮಗ್ರಿಗಳು
ಉದ್ದಿನ ಬೇಳೆ 2 ಚಮಚ
ಜೀರಿಗೆ 1/2 ಚಮಚ
ಕಾಳುಮೆಣಸು 1/4 ಚಮಚ
ಚಿಟಕಿ ಇಂಗು
ಒಣ ಕೊಬ್ಬರಿ ತುರಿ 1/4 ಕಪ್
ಬಿಳಿ ಎಳ್ಳು 2ಚಮಚ
ಸಣ್ಣಗೆ ಹೆಚ್ಚಿದ ಪೈನಾಪಲ್ 1 ಕಪ್
ಸಾಸಿವೆ 1 ಚಮಚ
ಕತ್ತರಿಸಿದ ಕರಿಬೇವು ಸ್ವಲ್ಪ
ಹುಣಸೆ ರಸ 1/4 ಕಪ್
ಬೆಲ್ಲ ಪುಡಿ 2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಚಿಟಕಿ ಅರಿಶಿನ
ಒಣಮೆಣಸು 6
ಎಣ್ಣೆ
Saakshatv cooking recipes pineapple gojju
ಮಾಡುವ ವಿಧಾನ
ಪಾನ್ ಗೆ ಉದ್ದಿನ ಬೇಳೆ, ಜೀರಿಗೆ, ಕಾಳುಮೆಣಸು ಇಂಗು, ಒಣ ಮೆಣಸಿನಕಾಯಿ ಹಾಕಿ ಹುರಿಯಿರಿ. ಒಣ ಕೊಬ್ಬರಿ ತುರಿ ಸೇರಿಸಿ ಕೆಂಪಗಾಗುವ ವರೆಗೆ ಹುರಿಯಿರಿ. ನಂತರ ಬಿಳಿ ಎಳ್ಳು ಹುರಿದು ಎಲ್ಲವನ್ನೂ ಮಿಕ್ಸಿ ಗೆ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ.
ಈಗ ಬಾಣಲೆಗೆ 4 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಸಾಸಿವೆ ಸೇರಿಸಿ, ಸಾಸಿವೆ ಸಿಡಿದ ಬಳಿಕ ಕರಿಬೇವು ಸೇರಿಸಿ.
ಅದಕ್ಕೆ ಸಣ್ಣಗೆ ಹೆಚ್ಚಿದ ಪೈನಾಪಲ್ ಸೇರಿಸಿ ಅರಿಶಿಣ ಹಾಕಿ ಬೇಯಿಸಿ. ಬಳಿಕ ಹುಣಸೆ ರಸ ಮತ್ತು ಬೆಲ್ಲ ಸೇರಿಸಿ. ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 5 ನಿಮಿಷ ಕುದಿಸಿದ ಬಳಿಕ ರುಬ್ಬಿದ ಮಿಶ್ರಣವನ್ನು ಸೇರಿಸಿ ಕುದಿಸಿ. ಈಗ ಸವಿಯಲು ರುಚಿಯಾದ ಅನಾನಸ್ ಗೊಜ್ಜು ತಯಾರಾಗಿದೆ.
ಇನ್ನಷ್ಟು ಅಡುಗೆ ರೆಸಿಪಿಗಾಗಿ ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ.
ನಿಂಬೆಯೊಂದಿಗೆ ಹಸಿರು ಚಹಾ ಸೇವನೆಯ ಆರೋಗ್ಯ ಪ್ರಯೋಜನಗಳು https://t.co/tefIhyN3kK
— Saaksha TV (@SaakshaTv) March 3, 2021
ಎಸ್ಬಿಐ ಬಳಕೆದಾರರ ಗಮನಕ್ಕೆ – ಎಸ್ಬಿಐ ಗ್ರಾಹಕರನ್ನು ಗುರಿಯಾಗಿಸಿರುವ ಹ್ಯಾಕರ್ಗಳು https://t.co/gOcViWLpAH
— Saaksha TV (@SaakshaTv) March 4, 2021
ಆಲೂಗಡ್ಡೆ ಸಮೋಸ https://t.co/h2JTXWBD3v
— Saaksha TV (@SaakshaTv) March 4, 2021