ಹಾಡಹಗಲೇ ದಂತ ವೈದ್ಯನ ಕೊಲೆಗೆ ಯತ್ನ
ಕಲಬುರಗಿ : ಹಾಡಹಗಲೇ ಯುವಕನೋರ್ವ ದಂತ ವೈದ್ಯನ ಕೊಲೆಗೆ ಯತ್ನಿಸಿರುವ ಘಟನೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದಿದೆ.
ಸಿದ್ಧಗಂಗಾ ಡೆಂಟಲ್ ಆಸ್ಪತ್ರೆಯ ಡಾ.ವಿಶ್ವನಾಥ್ ಪಾಟೀಲ್ ಅವರಿಗೆ ಅಪರಿಚಿತ ಯುವಕ ಚಾಕುವಿನಿಂದನ ಇರಿದಿದ್ದಾನೆ. ಇದರಿಂದ ವಿಶ್ವನಾಥ್ ಗಾಯಗೊಂಡಿದ್ದು, ಹೊಟ್ಟೆಯಿಂದ ರಕ್ತಸ್ರಾವವಾಗಿದೆ.
ಡಾ. ವಿಶ್ವನಾಥ್ ರಸ್ತೆ ಬದಿ ಕಾರು ನಿಲ್ಲಿಸಿ ಆಸ್ಪತ್ರೆಗೆ ಹೋಗುತ್ತಿದ್ದಾಗ ಹೊಟ್ಟೆಗೆ ಇರಿದು ಕೊಲೆಗೆ ಯತ್ನಿಸಿದ್ದಾನೆ. ಇದನ್ನ ಗಮನಿಸಿದ ಸಾರ್ವಜನಿಕರು ದುಷ್ಕರ್ಮಿಯನ್ನು ಹಿಡಿದು ಥಳಿಸಿದ್ದಾರೆ.
ಕೊಲೆಗೆ ಯತ್ನಿಸಿದ ಯುವಕನ ಬಳಿ ನೋಟ್ ಬುಕ್ ಪತ್ತೆಯಾಗಿದ್ದು, ಇದರಲ್ಲಿ ಡಾ.ವಿಶ್ವನಾಥ್ ಅವರ ಬಗ್ಗೆ ಬರೆದುಕೊಂಡಿದ್ದಾನೆ.
ಮೇಲ್ನೋಟಕ್ಕೆ ಹಳೆ ವೈಷಮ್ಯವೇ ಕಾರಣ ಎನ್ನಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸ್ಟೇಷನ್ ಬಜಾರ್ ಠಾಣೆಯ ಪೊಲೀಸರು ಕೊಲೆಗೆ ಯತ್ನಿಸಿದ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.










