ಕೋವಿಡ್ ಲಸಿಕೆಯ 2ನೇ ಡೋಸ್ ಪಡೆದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ..!
ಮೈಸೂರು : ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಕೋವಿಡ್ ಲಸಿಕೆಯ 2ನೇ ಡೋಸ್ ಪಡೆದುಕೊಂಡಿದ್ದಾರೆ. ಮೈಸೂರು ಜಿಲ್ಲಾಸ್ಪತ್ರೆಯಲ್ಲಿ 2ನೇ ಡೋಸ್ ಪಡೆದುಕೊಂಡಿದ್ದು, ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ರೋಹಿಣಿ ಸಿಂಧೂರಿಯವರು ಮೊದಲ ಡೋಸ್ ಲಸಿಕೆಯನ್ನ ಫೆ.8ರಂದು ಪಡೆದುಕೊಂಡಿದ್ದರು. ಇದೀಗ 28 ದಿನಗಳ ಬಳಿಕ 2ನೇ ಡೋಸ್ ಪಡೆದಿದ್ದಾರೆ.
ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆಹಿಡಿದ ಮಂಡ್ಯ ಗ್ರಾಮದ ಯುವಕರು..!
ಬಳಿಕ ಈ ಕುರಿತಾಗಿ ಮಾತನಾಡಿದ ಅವರು ಕೊರೊನಾ ಲಸಿಕೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕು. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ ಎಂದು ಕರೆಕೊಟ್ಟರು. ಅಲ್ಲದೇ ಲಸಿಕೆ ತೆಗೆದುಕೊಂಡ ನನಗೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗಲಿಲ್ಲ. ಲಸಿಕೆ ಪಡೆದ ಕೆಲವೊಬ್ಬರಿಗೆ ಸಾಮಾನ್ಯವಾಗಿ ಜ್ವರ ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿ ಲಸಿಕೆ ನೀಡುವವರೆ ಜ್ವರದ ಮಾತ್ರೆಯನ್ನು ಉಚಿತವಾಗಿ ನೀಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡುತ್ತಿದ್ದಾರೆ. ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.