60ನೇ ವಯಸ್ಸಿನಲ್ಲಿ 2ನೇ ಮದುವೆ ಹುಚ್ಚು..! ಪಟ್ಟು ಹಿಡಿದು ಹೈ ವೋಲ್ಟೇಜ್ ವಿದ್ಯುತ್ ಕಂಬವೇರಿದ ಅಜ್ಜ : VIDEO VIRAL
ರಾಜಸ್ಥಾನ: 60 ವರ್ಷದ ಮುದುಕನೋರ್ವ 2ನೇ ಮದುವೆ ಮಾಡುವಂತೆ ಪಟ್ಟು ಹಿಡಿದು ವಿದ್ಯುತ್ ಕಂಬವೇರಿ ಕುಳಿತಿದ್ದ ವಿಲಕ್ಷಣ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ.
ಹೌದು ಮುದುಕನ 2ನೇ ಮದುವೆಯ ಹುಚ್ಚಿನ ಬಗ್ಗೆ ಮಕ್ಕಳು ಪ್ರಶ್ನೆ ಮಾಡಿದಕ್ಕೆ ಈ ಅಜ್ಜ ಇಂತಹದೊಂದು ಸಾಹಸಕ್ಕೆ ಕೈ ಹಾಕಿದ್ದು, ಈ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿವೆ. ಇಳಿವಯಸ್ಸಿನಲ್ಲಿ ಮುದುಕನ ಚಪಲದ ಬಗ್ಗೆ ನೆಟ್ಟಿಗರು ನಾನಾ ರೀತಿಯಾದ ಕಮೆಂಟ್ ಗಳನ್ನ ಮಾಡ್ತಾಯಿದ್ದಾರೆ.
ರಾಜಸ್ಥಾನದ ಧೋಲ್ಪುರ್ ಜಿಲ್ಲೆಯಲ್ಲಿ 60 ವರ್ಷದ ಸೊಬ್ರಾನ್ ಸಿಂಗ್ ಎಂಬಾತನ ಹೆಂಡತಿ 4 ವರ್ಷಗಳ ಹಿಂದೆ ಸಾವನಪ್ಪಿದ್ದರು. ಇವರಿಗೆ ಮೂರು ಜನ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಎಲ್ಲರಿಗೂ ಮದುವೆಯಾಗಿದ್ದು, ಮಕ್ಕಳಿದ್ದಾರೆ. ಮೊಮ್ಮಕ್ಕಳೊಂದಿಗೆ ನೆಮ್ಮದಿಯಾಗಿದ್ದ ಸೊಬ್ರಾನ್ ಇತ್ತೀಚೆಗೆ 2ನೇ ಮದುವೆ ಮಾಡುವಂತೆ ಪಟ್ಟು ಹಿಡಿದಿದ್ದಾನೆ. ಆದರೆ ಇದಕ್ಕೆ ಮಕ್ಕಳು ಒಪ್ಪಿಲ್ಲ.
ದುರಹಂಕಾರದಲ್ಲಿ ಯದ್ವಾತದ್ವಾ ಮಾತನಾಡಿ ಮಹಿಳಾ PSI ಕೈಲಿ ಒದೆ ತಿಂದ ಯುವತಿ: Video Viral
ಇದೇ ವಿಚಾರವಾಗಿ ಪಟ್ಟು ಹಿಡಿದು ಮನೆಯಿಂದ ಹೊರನಡೆದ ಸೊಬ್ರಾನ್ ಹಳ್ಳಿಯಲ್ಲಿದ್ದ 11 ಸಾವಿರ ವೋಲ್ಟೇಜ್ ನ ಎಲೆಕ್ಟ್ರಿಕ್ ಕಂಬವನ್ನು ಹತ್ತಿ ಕುಳಿತಿದ್ದಾನೆ. ಅದೃಷ್ಟವಶಾತ್ ಅಜ್ಜ ಕಂಬವೇರಿ ಕುಳಿತ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ವಿದ್ಯುತ್ ಸಂಸ್ಥೆಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ವಿದ್ಯುತ್ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿದೆ. ಈ ಕಾರಣದಿಂದಾಗಿ ಆತ ಬಚಾವಾಗಿದ್ದಾನೆ.
ಆದ್ರೆ ಹಟ ಬಿಡದೇ ಕಂಬವನ್ನ ಇಳಿಯಲು ಒಪ್ಪದ ಅಜ್ಜನನ್ನ ಸಮಾಧಾನಪಡಿಸಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದಾರೆ. ನಂತರ ಸೊಬ್ರಾನ್ ನನ್ನ ವಿದ್ಯುತ್ ಇಲಾಖೆಯ ಸಿಬ್ಬಂದಿಯ ಸಹಾಯದಿಂದ ಕೆಳಗಿಳಿಸಲಾಗಿದೆ.