ದುರಹಂಕಾರದಲ್ಲಿ ಯದ್ವಾತದ್ವಾ ಮಾತನಾಡಿ ಮಹಿಳಾ PSI ಕೈಲಿ ಒದೆ ತಿಂದ ಯುವತಿ: Video Viral

1 min read

ದುರಹಂಕಾರದಲ್ಲಿ ಯದ್ವಾತದ್ವಾ ಮಾತನಾಡಿ ಮಹಿಳಾ PSI ಕೈಲಿ ಒದೆ ತಿಂದ ಯುವತಿ: Video Viral

ಮಂಡ್ಯ: ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುತ್ತಿದ್ದ ಯುವತಿಯನ್ನ ತಡೆದು ನಿಲ್ಲಿಸಿದ ಮಹಿಳಾ ಪಿ ಎಸ್ ಐ ಬೈಕ್ ನ ದಾಖಲೆ ಪತ್ರಗಳನ್ನು ನೀಡುವಂತೆ ಕೇಳಿದ್ದಾರೆ. ಈ ವೇಳೆ ಮಹಿಳಾ ಪೊಲೀಸ್ ಮೇಲೆಯೇ ಮಾತಿನ ಪ್ರಹಾರ ನಡೆಸಿರುವ ಯುವತಿ ಯದ್ವಾತದ್ವಾ ಮಾತನಾಡಿ ಮಹಿಳಾ PSI ಕೈನಿಂದ ಕಪಾಳಕ್ಕೆ ಹೊಡೆಸಿಕೊಂಡಿರುವ ಘಟನೆ ಮಂಡ್ಯದ  ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ನಡೆದಿದೆ.

ಹೌದು… ತನ್ನ ದ್ವಿಚಕ್ರ ವಾಹನ ತಡೆದ ಪೊಲೀಸರಿಗೆ ಯುವತಿ ನನ್ನ ಸ್ಕೂಟರ್ ಅನ್ನು ಯಾಕೆ ಮುಟ್ತಿದ್ದೀರಾ ಎಂದು ಆವಾಜ್ ಹಾಕಿದ್ದಾಳೆ. ಅಲ್ಲದೆ ಸ್ಕೂಟರ್ ಮೇಲೆ ಕುಳಿತೇ ನಾನು ಗಾಡಿಯನ್ನು ಯಾಕೆ ಕೊಡಲಿ ಎಂದು ಪ್ರಶ್ನಿಸಿದ್ದಾಳೆ. ಸ್ಕೂಟರ್ ನಿಂದ ಇಳಿಯಮ್ಮ ನಿನ್ನ ಹೆಸರೇನು? ನಿಮ್ಮ ತಂದೆಯನ್ನು ಕರೆಸು. ಠಾಣೆಗೆ ಬಾ ಎಂದು ಮಹಿಳಾ ಪಿಎಸ್ ಐ ಸೂಚಿಸಿದ್ದಾರೆ.

ಸಿಎಂ ಯಡಿಯೂರಪ್ಪ ಜಾತಿ ರಾಜಕಾರಣ ಮಾಡುತ್ತಿರುವುದು ಸರಿಯೇ : ಕುಮಾರಸ್ವಾಮಿ

ಈ ವೇಳೆ ನನಗೆ ತಂದೆಯಿಲ್ಲ. ನಾನು ಯಾರನ್ನು ಠಾಣೆಗೆ ಕರೆಸುವುದಿಲ್ಲ ಎಂದು ದುರಹಂಕಾರದಿಂದ ಯುವತಿ ಮಾತನಾಡಿದ್ದು,  ಪೊಲೀಸರ ಪಿತ್ತ ನೆತ್ತಿಗೇರಿಸಿದ್ದಾಳೆ. ತಾಳ್ಮೆ ಕಳೆದುಕೊಂಡ ಪಿಎಸ್ ಐ  ಯುವತಿಯ ಕಪಾಳಕ್ಕೆ ಹೊಡೆದಿದ್ದಾರೆ. ಮಹಿಳಾ ಪಿ ಎಸ್ ಐ ಸವಿತಾಗೌಡ ಪಾಟೀಲ್ ಯುವತಿ ಕಪಾಳಕ್ಕೆ ಹೊಡೆದಿದ್ದು, ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇನ್ನೂ ಸವಿತಾಗೌಡ ಪಾಟೀಲ್ ಕಪಾಳ ಮೋಕ್ಷ ಮಾಡ್ತಿದ್ದಂತೆ ರೊಚ್ಚಿಗೆದ್ದ ಯುವತಿ ಕರ್ತವ್ಯನಿರತ ಪಿಎಸ್ ಐಗೆ ಏಕವಚನದಲ್ಲಿ ನೀನ್ಯಾರೆ ನನಗೆ ಹೊಡೆಯೋಕೆ, ಯಾವಳೇ ನೀನ್ ನನಗೆ ಹೊಡಿಯೋಕೆ ರಾಸ್ಕಲ್ ನಿನಗೆ ಯಾರು ಅಧಿಕಾರ ಕೊಟ್ಟಿದ್ದು ಎಂದೆಲ್ಲಾ ಪ್ರಶ್ನಿಸಿದ್ದಾಳೆ.  ಇದ್ರಿಂದ ಮತ್ತಷ್ಟು ತಾಳ್ಮೆ ಕಳೆದುಕೊಂಡಿರುವ ಪೊಲೀಸರು ಮೊದಲು ನಡಿ ನೀನು ಪೊಲೀಸ್ ಠಾಣೆಗೆ ಎಂದು ಸಿಟ್ಟಿನಲ್ಲಿ ಬೈದಿದ್ದಾರೆ. ಆಗಲೂ ಸುಮ್ಮನಾಗದೇ ಏನ್ ಮಾಡ್ತೀಯ , ಎಂದಿದ್ದಾಳೆ. ಇದಕ್ಕೆ ಸ್ಫಳದಲ್ಲಿದ್ದ ಸಾರ್ವನಿಕರು ಯುವತಿಯನ್ನ ಸಮಾಧಾನಪಡಿಸಲು ಪ್ರಯತ್ನ ಮಾಡಿದ್ರೂ ಯುವತಿ ಸಮಾಧಾನಗೊಂಡಿಲ್ಲ. ಇಷ್ಟಕ್ಕೆ ಸುಮ್ಮನಾಗದೆ ಪಿ ಎಸ್ ಐ ಸವಿತಾಗೌಡ ಪಾಟೀಲ್ ರಿಗೆ ಅನ್ ಎಜುಕೇಟೆಡ್ ಬ್ರೂಟ್ ಎಂದು ಬೈದಿದ್ದಾಳೆ. ಇದನ್ನೆಲ್ಲಾ ಪೊಲೀಸರು ವಿಡಿಯೋ ಮಾಡಿಕೊಂಡಿದ್ದು ಸದ್ಯ ವಿಡಿಯೋ ವೈರಲ್ ಆಗಿದೆ.

ಸಿಎಂ ನಾಪತ್ತೆಯಾಗಿದ್ದಾರೆ ಎಂದ ಯತ್ನಾಳ್ ಗೆ  ರೇಣುಕಾಚಾರ್ಯ ಟಾಂಗ್..!

ಘಟನೆ ಬೆನ್ನಲ್ಲೇ ಡಿವೈ ಎಸ್ ಪಿ ಬಳಿ ಮಂಡ್ಯ ಎಸ್ ಪಿ ಅಶ್ವಿನಿ ವರದಿ ಕೇಳಿದ್ದು, ಜಿಲ್ಲಾ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸಬೇಕು ಎಂದು ಸೂಚಿಸಿದ್ದಾರೆ. ಅಲ್ಲ್ದೇ ಸಾರ್ವಜನಿಕರು ಕೂಡ ಕಾನೂನು, ಸುವ್ಯವಸ್ಥೆ ನಿಟ್ಟಿನಲ್ಲಿ ಪೊಲೀಸರಿಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd