ಸಿಎಂ ನಾಪತ್ತೆಯಾಗಿದ್ದಾರೆ ಎಂದ ಯತ್ನಾಳ್ ಗೆ ರೇಣುಕಾಚಾರ್ಯ ಟಾಂಗ್..!
1 min read
ಸಿಎಂ ನಾಪತ್ತೆಯಾಗಿದ್ದಾರೆ ಎಂದ ಯತ್ನಾಳ್ ಗೆ ರೇಣುಕಾಚಾರ್ಯ ಟಾಂಗ್..!
ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ವಿಧಾನಸಭೆಯಲ್ಲಿ ಬಾವಿಗಿಳಿದು ಧರಣಿಗೆ ಮುಂದಾಗಿದ್ದರು. ಈ ವೇಳೆ ನಮ್ಮ ಸಮಾಜದ ಹೆಸರೇಳಿಕೊಂಡು ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾರೆ. ಪಂಚಮಸಾಲಿ ಮೀಸಲಾತಿ ಹೋರಾಟ ನಡೆದಿದೆ. ಸದನದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ರು.
ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆಹಿಡಿದ ಮಂಡ್ಯ ಗ್ರಾಮದ ಯುವಕರು..!

ಅಲ್ಲದೇ ನಿನ್ನೆಯೇ ಸರ್ಕಾರ ಉತ್ತರ ಕೊಡುತ್ತದೆ ಎಂದು ಹೇಳಿದ್ದರೂ ಉತ್ತರ ಕೊಡಬೇಕಾದ ಸಿಎಂ ನಾಪತ್ತೆಯಾಗಿದ್ದಾರೆ ಎಂದು ಹೇಳಿದರು. ಇತ್ತ ಯತ್ನಾಳ್ ಮಾತು ಕೇಳ್ತಿದ್ದಂತೆ ಸದನದಲ್ಲಿ ಗದ್ದಲ ಗಲಾಟೆಗಳು ನಡೆದವು. ಬಿಜೆಪಿ ನಾಯಕರೇ ಯತ್ನಾಳ್ ವಿರುದ್ಧ ತಿರುಗಿಬಿದ್ದರು. ಇದೇ ವೇಳೆ ಸಿಎಂ ಯಡಿಯೂರಪ್ಪ ನಾಪತ್ತೆಯಾಗಿಲ್ಲ. ಅವರಿಗೆ ಪಂಚಮಸಾಲಿ ಸಮುದಾಯಕ್ಕೆ ಅಪಾರ ಗೌರವವಿದೆ ಎಂದು ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ್ರು. ಇಷ್ಕ್ಕೂ ಸಮಾಧಾನವಾಗದ ಯತ್ನಾಳ್ ಮಾತಿನ ಪ್ರಹಾರ ಮುಂದುವರೆಸಿದ್ದರು.
ಕೋವಿಡ್ ಲಸಿಕೆಯ 2ನೇ ಡೋಸ್ ಪಡೆದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ..!
ಹೀಗೆಯೇ ಆಕ್ರೋಶದಿಂದ ಮಾತು ಮುಂದುವರೆಸಿದ ಯತ್ನಾಳ್ ಅವರು ನಮ್ಮ ಸಮುದಾಯ ಕಷ್ಟದ ಜೀವನ ನಡೆಸುತ್ತಿದೆ. ಮುಖ್ಯಮಂತ್ರಿಗಳು ಮೊನ್ನೆ ನಮ್ಮ ಸಮಾಜದ ಸಚಿವರು, ಶಾಸಕರಿಗೆ ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮ ಬೇಡಿಕೆ ಈಡೇರಿಸುವೆ ಎಂದಿದ್ದರು. ಇಂದು ಸದನದಲ್ಲಿ ಮೀಸಲಾತಿ ಜಾರಿಗೊಳಿಸಲು ಎಷ್ಟು ಸಮಯಾವಕಾಶ ಬೇಕೆಂದು ತಿಳಿಸಿ. ಮೀಸಲಾತಿ ಜಾರಿ ಮಾಡುವುದಿಲ್ಲ ಎಂದಾದರೆ ಹಾಗೆಯೇ ತಿಳಿಸಿ. ಮುಖ್ಯಮಂತ್ರಿಗಳು ಇದಕ್ಕೆ ಸ್ಪಷ್ಟ ಉತ್ತರ ಕೊಡಬೇಕು. ಇಲ್ಲವಾದಲ್ಲಿ ನಮ್ಮ ಸಮುದಾಯ ಅಲ್ಲಿ ಆಮರಣಾಂತ ಉಪವಾಸ ವ್ರತ ನಡೆಸುತ್ತಾರೆ, ನಾನು ಇಲ್ಲಿ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ರು. ಈ ವೇಳೆ ಸದನದಲ್ಲಿ ಗದ್ದಲವೆದ್ದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಸಭಾಪತಿಗಳು ಹರಸಾಹಸಪಡಬೇಕಾಯ್ತು.
ಸಿಡಿ ಕೇಸ್ : ದೂರು ವಾಪಸ್ ಪಡೆಯಲು ದಿನೇಶ್ ಕಲ್ಲಹಳ್ಳಿ ಬೇಡಿಕೆ : ಕಾನೂನಿನ ಮೊರೆ ಹೋದ ಪೊಲೀಸರು..!
ಮಲೆ ಮಹದೇಶ್ವರ ಸನ್ನಿಧಾನದಲ್ಲಿ ಶಿವರಾತ್ರಿ ಜಾಗರಣೆ ರಥೋತ್ಸವ ಹೊರಗಿನ ಭಕ್ತರಿಗಿಲ್ಲ ಪ್ರವೇಶ..!