ಮಲೆ ಮಹದೇಶ್ವರ ಸನ್ನಿಧಾನದಲ್ಲಿ ಶಿವರಾತ್ರಿ ಜಾಗರಣೆ ರಥೋತ್ಸವ ಹೊರಗಿನ ಭಕ್ತರಿಗಿಲ್ಲ ಪ್ರವೇಶ..!

1 min read

male mahadeshwara : no entry for outside devotees

ಮಲೆ ಮಹದೇಶ್ವರ ಸನ್ನಿಧಾನದಲ್ಲಿ ಶಿವರಾತ್ರಿ ಜಾಗರಣೆ ರಥೋತ್ಸವ ಹೊರಗಿನ ಭಕ್ತರಿಗಿಲ್ಲ ಪ್ರವೇಶ..!

ಚಾಮರಾಜನಗರ : ಕೊರೊನಾ ಹಾವಳಿ ಹೆಚ್ಚುತ್ತಿರುವ ಆತಂಕದ ಹಿನ್ನೆಲೆ  ಈ ಬಾರಿ ಚಾಮರಾಜನಗರ ಜಿಲ್ಲೆಯ ಪವಾಡ ಪುರುಷ ಮಲೆ ಮಹದೇಶ್ವರ ಬೆಟ್ಟಕ್ಕೆ ಹೊರಗಿನ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಶಿವರಾತ್ರಿ ಜಾಗರಣೆ ಹಾಗೂ  ರಥೋತ್ಸವಕ್ಕೆ ಹೊರಗಿನ ಭಕ್ತರಿಗೆ ಬ್ರೇಕ್ ಹಾಕಲಾಗಿದೆ.

ಇ – ಮೇಲ್ ಹ್ಯಾಕ್ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್..!

ಈ ಹಿನ್ನೆಲೆ ಪೊಲೀಸರು ಚೆಕ್ ಪೋಸ್ಟ್ ನಲ್ಲಿ ಅಲರ್ಟ್ ಆಗಿದ್ದು, ತಪಾಸಣೆಯನ್ನ ತೀವ್ರಗೊಳಿಸಿದ್ದಾರೆ. ಇಂದಿನಿಂದ 15 ರ ತನಕ ಹೊರಗಿನ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೇವಲ ಮಹದೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಮಾತ್ರವೇ ಶಿವರಾತ್ರಿ ಜಾಗರಣೆ ಜಾತ್ರೆಯು ಮೀಸಲಾಗಿದೆ. ಕೋರೊನಾ ಸೋಂಕು ಹರಡುವ ಭೀತಿಯಲ್ಲಿ ಜಿಲ್ಲಾಡಳಿತ ಈ ಕ್ರಮ ಜರುಗಿಸಿದೆ.

ಹಂಪಿಯಲ್ಲಿ ರೈಲು ಮಾದರಿಯ ವಿಶೇಷ ವಾಹನಗಳ ಸಂಚಾರ ಆರಂಭ..!

ಪ್ರತಿ ಬಾರಿ ಶಿವರಾತ್ರಿ ಜಾಗರಣೆ ಹಾಗೂ ರಥೋತ್ಸವಕ್ಕೆ ಹೊರ ರಾಜ್ಯಗಳಿಂದಲೂ ಸೇರಿ ಲಕ್ಷಾಂತರ ಭಕ್ತರು ಸೇರುತ್ತಿದ್ದರು. ಆದ್ರೆ ಕೊರೋನಾ ಸೋಂಕು ಉಲ್ಬಣಗೊಳ್ಳುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿಗಳನ್ನು ಹೊರತುಪಡಿಸಿ ಬೇರೆ ಪ್ರದೇಶದ ಭಕ್ತರಿಗೆ ಪ್ರವೇಶ ನಿರಾಕರಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ ಈ ಬಾರಿ ಮಲೆ ಮಹದೇಶ್ವರ ಸನ್ನಿಧಾನ ಜಾತ್ರೆಯ ವೇಳೆಯೂ ಭಕ್ತರಿಲ್ಲದೇ ಬಿಕೋ ಎನ್ನುತ್ತಿದೆ.

ಯೂಟ್ಯೂಬ್ ನಲ್ಲಿ ಮತ್ತೆ ಮಂಗ್ಲಿ ಹವಾ…! ಹೊಸ ಹಾಡು ಟ್ರೆಂಡಿಂಗ್ ನಲ್ಲಿ..!

ರಾಮ್ ಚರಣ್ – ಶಂಕರ್ ಸಿನಿಮಾದಲ್ಲಿ ರಶ್ಮಿಕಾಗೆ ಗೇಟ್ ಪಾಸ್..?

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd