ಇ – ಮೇಲ್ ಹ್ಯಾಕ್ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್..!

1 min read

ಇ – ಮೇಲ್ ಹ್ಯಾಕ್ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್..!

ನಿವೃತ್ತ ಡಿಜಿಐಜಿಪಿ ಶಂಕರ್ ಬಿದರಿ ಖಾತೆ ಹ್ಯಾಕ್ ಮಾಡಿದ್ದ ನಾಗಾಲ್ಯಾಂಡ್ ಮೂಲದ ಗ್ಯಾಂಗ್ ಅನ್ನ ಆಗ್ನೇಯ ವಿಭಾಗ ಸೈಬರ್ ಕ್ರೈಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನ ರುಬೀಕಾ, ಸೆರೋಪಾ, ಇಸ್ಟರ್ ಕೊನ್ಯಾಕ್ ಎಂದು ಗುರುತಿಸಲಾಗಿದೆ.

ಈ ಖತರ್ನಾಕ್ ಗ್ಯಾಂಗ್ ಇ ಮೇಲ್ ಹ್ಯಾಕ್ ಮಾಡುತ್ತಿದ್ದು, ಇತ್ತೀಚೆಗೆ ನಿವೃತ್ತ ಡಿಜಿಐಜಿಪಿ ಶಂಕರ್ ಬಿದರಿ ಅವರ ಖಾತೆಯನ್ನೂ ಹ್ಯಾಕ್ ಮಾಡಿತ್ತು. ಅಲ್ಲದೇ  ಶಂಕರ್ ಬಿದರಿ ಯವರಂತೆ ಹಣವನ್ನ ಕಳುಹಿಸುವಂತೆ ಸಂದೇಶ ಕಳುಹಿಸಲಾಗಿದೆ.  ಇನ್ನೂ ಶಂಕರ್ ಬಿದರಿ ಅವರೇ ಈ ಮೆಸೇಜ್ ಮಾಡಿದ್ದಾರೆಂದು ನಂಬಿ ಅವರ ಸ್ನೇಹಿತರು 25 ಸಾವಿರ ಹಣವನ್ನ ಆರೋಪಿಗಳ ಖಾತೆಗೆ ಜಮಾ ಮಾಡಿದ್ದಾರೆ. ಈ ವಿಚಾರ ಗೊತ್ತಾಗ್ತಿದ್ದಂತೆ ಶಂಕರ್ ಬಿದರಿ ಅವರು ಆಗ್ನೇಯ ವಿಭಾಗ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನನ್ವಯ ಆಗ್ನೇಯ ವಿಭಾಗ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.   ತನಿಖೆ ವೇಳೆ ಶಾಕಿಂಗ್ ವಿಚಾರ ಬಯಲಾಗಿದೆ. ಈ ಆರೋಪಿಗಳ ಸುಮಾರು 60 ಬ್ಯಾಂಕ್ ಖಾತೆಗಳನ್ನ ಹೊಂದಿದ್ದ ವಿಚಾರ ಬೆಳಕಿಗೆ ಬಂದಿದೆ.

ಅದ್ರಲ್ಲೂ ಕಳೆದ ವರ್ಷ ನವೆಂಬರ್ ನಿಂದ ಇತ್ತೀಚೆಗೆ ಈ ಇಷ್ಟೂ ಬ್ಯಾಂಕ್ ಅಕೌಂಟ್ ಖಾತೆಗಳನ್ನ ತೆರಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ಈ ಆರೋಪಿಗಳು ನಾಗಾಲ್ಯಾಂಡ್ ನ ಮೂಲದವರಾಗಿದ್ದು, ನಿರುದ್ಯೋಗಿ ಯುವಕರನ್ನೇ ಟಾರ್ಗೆಟ್ ಮಾಡಿ ಹಣದ ಆಮಿಷವೊಡ್ಡಿ ಆಧಾರ್ ಕಾರ್ಡ್, ಮನೆ ಬಾಡಿಗೆ ಪತ್ರ ಪಡೆಯುತ್ತಿದ್ರು ಎಂಬ ವಿಚಾರ ಗೊತ್ತಾಗಿದೆ. ನಾಗಾಲ್ಯಾಂಡ್ ಮೂಲದ ನಿರುದ್ಯೋಗಿ ಯುವಕರನ್ನು ಸಂಪರ್ಕಿಸಿ ಹಣದ ಆಮಿಷವೊಡ್ಡಿ ಅವರನ್ನು ಸಹ ಶಾಮೀಲು ಮಾಡಿಕೊಂಡು ಅವರ ಆಧಾರ್ ಕಾರ್ಡ್, ಬಾಡಿಗೆ ಕರಾರು ಪತ್ರ, ಪ್ಯಾನ್‍ಕಾರ್ಡ್‍ಗಳನ್ನು ಮೂಲವಾಗಿಟ್ಟುಕೊಂಡು ಅಕೌಂಟ್ ಗಳನ್ನ ತೆರೆಯಲಾಗಿದೆ. ಆರೋಪಿಗಳಿಂದ 4 ಮೊಬೈಲ್, ವಿವಿಧ ಹೆಸರಿನ 13 ಪ್ಯಾನ್‍ಕಾರ್ಡ್, 6 ಆಧಾರ್ ಕಾರ್ಡ್, 2 ಎಟಿಎಂ ಕಾರ್ಡ್ ಹಾಗೂ ಸಂಬಂಸಿದ ಸುಮಾರು 20ಕ್ಕೂ ಹೆಚ್ಚು ವಿವಿಧ ಬ್ಯಾಂಕ್‍ಗಳ ಖಾತೆಗಳಲ್ಲಿನ ಸುಮಾರು 2 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಇನ್ನೂ ಈ ಗ್ಯಾಂಗ್ ನಲ್ಲಿ ಎಲ್ಲಾ ಕ್ರೈಂ ಗೆ ಸ್ಕೆಚ್ ರೂಪಿಸುತ್ತಿದ್ದ ಮಾಸ್ಟರ್ ಮೈಂಡ್ ‌ ಮಹಿಳಾ ಆರೋಪಿ ಇಸ್ಟರ್ ಕೊನ್ಯಾಕ್ . ಕೊನ್ಯಾಕ್ 4 ವರ್ಷಗಳ ಹಿಂದೆ ನಗರಕ್ಕೆ ಬಂದು ಬ್ಯೂಟಿ ಪಾರ್ಲರ್ ವೊಂದರಲ್ಲಿ ಸೇಲ್ಸ್ ಗರ್ಲ್ ಆಗಿದ್ಲು. ಫೇಸ್ಬುಕ್ ನಲ್ಲಿ ಪೀಟರ್ ಹಾಗೂ ಜೇಮ್ಸ್ ಎನ್ನುವವರ ಪರಿಚಯ ಮಾಡಿಕೊಂಡಿದ್ದ ರುಬಿಕಾ. ಜೇಮ್ಸ್ ಹಾಗೂ ಪೀಟರ್ ಮಾರ್ಗದರ್ಶನದಂತೆ ಅಕೌಂಟ್ ಹ್ಯಾಕ್ ಮಾಡಿ ಹಣ ಎಗರಿಸುವ ದಂಧೆಗೆ ಇಳಿದಿದ್ದಳು ಎನ್ನಲಾಗಿದೆ.

ಹಂಪಿಯಲ್ಲಿ ರೈಲು ಮಾದರಿಯ ವಿಶೇಷ ವಾಹನಗಳ ಸಂಚಾರ ಆರಂಭ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd