ರಾಯಚೂರು : ವಿದ್ಯುತ್ ಸ್ಪರ್ಷ ಟ್ರ್ಯಾಕ್ಟರ್ ನಲ್ಲಿದ್ದ ಮೇವು ಬೆಂಕಿಗಾಹುತಿ..!
ರಾಯಚೂರು : ಜೋಳದ ಒಣ ಮೇವು ಸಾಗಿಸುತ್ತಿದ್ದ ವೇಳೆ ಟ್ರ್ಯಾಕ್ಟರ್ ನಲ್ಲಿ ವಿದ್ಯುತ್ ತಂತಿಗಳು ಸ್ಪರ್ಶವಾಗಿ ಬೆಂಕಿ ಹೊತ್ತಿಕೊಂಡಿದ್ದು, ಬಣವೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರು ಘಟನೆ ರಾಯಚೂರಿನ ಆಶಾಪೂರ ರಸ್ತೆಯಲ್ಲಿ ನಡೆದಿದೆ. ಘಟನೆ ನಡೆಯುತ್ತಿದ್ದಂತೆ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಚಲಾಪುರದಿಂದ ಉಡಮಗಲ್ ಗ್ರಾಮಕ್ಕೆ ರೈತರು ಮೇವು ತೆಗೆದುಕೊಂಡು ಹೋಗುತ್ತಿದ್ದರು. ಮಾರ್ಗ ಮಧ್ಯದಲ್ಲಿ ವಿದ್ಯುತ್ ತಂತಿಗಳು ತಗುಲಿ ಬೆಂಕಿ ಹತ್ತಿಕೊಂಡ ಕೂಡಲೇ, ಟ್ರ್ಯಾಕ್ಟರ್ ನಲ್ಲಿದ್ದ ಮೇವನ್ನು ರಸ್ತೆಯುದ್ದಕ್ಕೂ ಡಂಪ್ ಮಾಡಿ ಟ್ರ್ಯಾಕ್ಟರ್ ಹೊರತೆಗೆದುಕೊಳ್ಳಲಾಗಿದೆ.








