ಅಫ್ಘಾನಿಸ್ಥಾನದಲ್ಲಿ ತೀವ್ರವಾಗಿದೆ ಲಿಂಗ ತಾರತಮ್ಯ : ಸಾರ್ವಜನಿಕವಾಗಿ ಹಾಡುವ ಸ್ವಾತಂತ್ರವನ್ನ ಕಸಿದ ಸರ್ಕಾರ..!
ಅಫ್ಘಾನಿಸ್ಥಾನ: ಅಫ್ಘಾನಿಸ್ಥಾನದಲ್ಲಿ ಲಿಂಗ ತಾರತಮ್ಯಕ್ಕೆ ಅಲ್ಲಿನ ಮಹಿಳೆಯರು ಬಾಲಕಿಯರು ತತ್ತರಿಸಿ ಹೋಗಿದ್ಧಾರೆ. ಮಹಿಳೆಯರಿಗೆ ಯಾವುದೇ ಸ್ವಾತಂತ್ರ್ಯ ಕೊಡದ ಈ ದೇಶದಲ್ಲಿ ಇದೀಗ ಹೆಣ್ಮಕ್ಕಳು ಸಾರ್ವನಿಕವಾಗಿ ಹಾಡನ್ನೂ ಹಾಡದಂತಹ ಪರಿಸ್ಥಿತಿ ಬಂದುಬಿಟ್ಟಿದೆ.
ಹೌದು ಅಲ್ಲಿನ ಸರ್ಕಾರ ಹೊಸ ಆದೇಶ ಹೊರೆಡಿಸಿದ್ದು, ಇದರ ಅನ್ವಯ 12 ವರ್ಷ ಮತ್ತು ಅದಕ್ಕೂ ಹೆಚ್ಚಿನ ವರ್ಷದ ಬಾಲಕಿಯರು ಸಾರ್ವಜನಿಕ ಸ್ಥಳಗಳಲ್ಲಿ ಹಾಡು ಹಾಡುವಂತಿಲ್ಲ. ಶಿಕ್ಷಣ ಎಲಾಖೆ ಇಂತಹದೊಂದು ಸುತ್ತೋಲೆ ಹೊರಡಿಸಿ, ಇಡೀ ವಿಶ್ವದ ಎದುರು ನಗೆಪಾಟಲಿಗೀಡಾಗಿದೆ.
ವಿರಾಟ್ ಕೊಹ್ಲಿ ಕಥೆ ಮುಗೀತಾ..?
ಅಷ್ಟೇ ಅಲ್ಲ ಇದರಿಂದಾಗಿ ಜಾಗತಿಕ ಮಾನವ ಹಕ್ಕುಗಳ ಸಂಘಟನೆಗಳು ಅಫ್ಗಾನ್ ಸರ್ಕಾರದ ನಡೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿವೆ. ಅಷ್ಟೇ ಅಲ್ಲ ಟ್ವಿಟ್ಟರ್ ನಲ್ಲಿ #IAmMySong ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ.
ಸಾರ್ವಜನಿಕವಾಗಿ ಹಾಡು ಹೇಳುವ ಸ್ವಾತಂತ್ರವ್ಯವನ್ನೂ ಕೂಡ ಹೆಣ್ಮಕ್ಕಳನ್ನ ಕಿತ್ತುಕೊಂಡು ಮಹಿಳೆಯರನ್ನ ಮೂಲೆಗುಂಪು ಮಾಡ್ತಿದ್ದು, ಮಹಿಳೆಯರನ್ನ ಶೋಷಣೆ ಮಾಡುತ್ತಿರುವ ಇಂತಹ ದೇಶಗಳ ಮಹಿಳೆಯರ ಮೇಲೆ ನಿಜಕ್ಕೂ ಕನಿಕರ ಮೂಡುತ್ತೆ.
ಅಫ್ಘಾನಿಸ್ಥಾನದ ಶಿಕ್ಷಣ ಇಲಾಖೆಯ ನೋಟಿಸ್ಗೆ ವಿಶ್ವದಾದ್ಯಂತ ಪ್ರತಿರೋಧವಾಗಿ ಈ ಹ್ಯಾಷ್ಟ್ಯಾಗ್ ಟ್ರೆಂಡ್ ಆಗುತ್ತಿದೆ. #IAmMySong ಎಂಬ ಹ್ಯಾಷ್ಟ್ಯಾಗ್ ಮೂಲಕ ನೀವು ನಿಮ್ಮ ಹಾಡನ್ನು ಹಂಚಿಕೊಳ್ಳಿ ಎಂದು ಸಂದೇಶ ನೀಡುವ ಮೆಸೇಜ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಲವ್ ಕಮ್ ಅರೇಂಜ್ ಮ್ಯಾರೇಜ್ ನಲ್ಲಿ ದುರಂತ : ವರನ ಬೈಕ್ ಡಿಮ್ಯಾಂಡ್ ನಿಂದ ವಧುವಿನ ಪ್ರಾಣವೇ ಹೋಯ್ತು..!
2021ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಸಂಪತ್ತು ಗಳಿಸಿದ ಭಾರತೀಯ ಉದ್ಯಮಿ ಯಾರು ಗೊತ್ತಾ..!