ಕೊರೊನಾ 2ನೇ ಅಲೆ : ಮತ್ತೆ ಲಾಕ್ ಡೌನ್ ಆಗುತ್ತಾ…! ಸಿಎಂ ಹೇಳಿದ್ದೇನು..?
ಬೆಂಗಳೂರು : ಕೊರೊನಾ 2ನೇ ಅಲೆ ಜೋರಾಗಿದ್ದು, ಮತ್ತೆ ಲಾಕ್ ಡೌನ್ ಆಗುತ್ತಾ ಎಂಬ ಚರ್ಚೆಗಳು ಆರಂಭವಾಗಿವೆ. ಈ ನಡುವೆ ಸಿಎಂ ಯಡಿಯೂರಪ್ಪನವರು ಈ ಕುರಿತು ಮಾತನಾಡಿದ್ದು, ಕೋವಿಡ್ ಸೋಂಕು ಕೈ ಮೀರಿ ಹೋಗ್ತಿದೆ, ಸರ್ಕಾರದ ಜೊತೆ ಜನರು ಸಹಕರಿಸಬೇಕು, ಲಾಕ್ ಡೌನ್ ಆಗಬಾರದು , ಕರ್ಪ್ಯೂ ಮಾಡಬಾರದು ಎಂದ್ರೆ ದಯಮಾಡಿ ಸರ್ಕಾರದ ಜೊತೆ ಸಹಕರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕೋವಿಡ್ ನಿಯಮ ಪಾಲಿಸಿದರೆ ಸೋಂಕು ಹರಡುವುದನ್ನು ನಿಯಂತ್ರಣ ಮಾಡಬಹುದು. ಮಹಾರಾಷ್ಟ್ರದಲ್ಲೂ ಹೆಚ್ಚಾಗ್ತಿದೆ, ಗಡಿಗಳಲ್ಲಿಯೂ ಬಿಗಿ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.
ರಾಜ್ಯದಲ್ಲೂ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತೆ : ಬಿ ವೈ ವಿಜಯೇಂದ್ರ..!
ಇನ್ನೂ ರಾಜ್ಯದಲ್ಲಿ ಕೋವಿಡ್ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲೆ ನಾಳೆಯಿಂದ ರಾಜ್ಯದಲ್ಲಿ ಕಠಿಣ ನೀತಿಗಳು ಜಾರಿಯಾಗುವ ಸಾಧ್ಯತೆಯಿದೆ. ಕೆಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಜಾರಿಗೆ ತರಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಇನ್ನೂ ಇದೇ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಾಳೆ ತುರ್ತು ಸಭೆ ಕರೆದಿದ್ದಾರೆ. ನಾಳೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಬೆಳಗಾವಿ ಗಡಿ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ಪೋಸ್ಟ್ : FIR ದಾಖಲು..!