16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ 7 ಕಾಮುಕರಿಂದ 6 ತಿಂಗಳ ಕಾಲ ಅತ್ಯಾಚಾರ..!
16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ 7 ಕಾಮುಕರು 6 ತಿಂಗಳುಗಳ ಕಾಲ ಅತ್ಯಾಚಾರವೆಸಗಿರುವ ಘಟನೆ ಹರಿಯಾಣದ ಭಿವಾನಿ ಗ್ರಾಮದಲ್ಲಿ ನಡೆದಿದೆ. ಹುಡುಗಿ ಗರ್ಭಿಣಿಯಾದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದಕ್ಕೆ ಮುಸ್ಲಿಂ ಯುವತಿ, ಕುಟುಂಬದ ಮೇಲೆ ಹಲ್ಲೆ : ದೂರು ದಾಖಲಿಸಿಕೊಳ್ಳದ ಪೊಲೀಸರು..!
ಈ ಸಂಬಂಧ ಸಂತ್ರಸ್ತೆಯ ತಂದೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಅತ್ಯಾಚಾರಿ ಆರೋಪಿಗಳಲ್ಲಿ ಇಬ್ಬರು 50 ವರ್ಷದವರಾಗಿದ್ದು, ಇನ್ನುಳಿದವರು 30-35 ವರ್ಷದವರು. ಅಷ್ಟೇ ಅಲ್ಲ ಈ ಹೇಯ ಕೃತ್ಯದಲ್ಲಿ ಅಪ್ಪ ಮಗನ ಜೋಡಿಯು ಸಹ ಶಾಮೀಲಾಗಿದ್ದರು ಎಂದು ತಿಳಿದು ಬಂದಿದೆ. ಎಂದು ಪೊಲೀಸ್ ಅಧಿಕಾರಿಗಳಾದ ಭವಾನಿ ಕೆಹ್ರಾ ಹಾಗೂ ರವೀಂದ್ರ ಕುಮಾರ್ ತಿಳಿಸಿದ್ದಾರೆ.
ಬ್ರೈನ್ ಟ್ಯೂಮರ್ ಇದ್ದ ಹೆಂಡತಿಗೆ ಚಿಕಿತ್ಸೆ ಕೊಡಿಸಲಾಗದೇ ಪ್ರಾಣವನ್ನೇ ತೆಗೆದ ಪತಿ..!
ಹುಡುಗಿ ಮೇಲೆ ನಿರಂತರ ಅತ್ಯಾಚಾರವೆಸಗುತ್ತಿದ್ದ ಕಾಮುಕುರು ಈ ವಿಚಾರವನ್ನ ಎಲ್ಲಾದರೂ ಬಾಯ್ಬಿಟ್ಟರೆ ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಹೀಗಾಗಿ ಬಾಲಕಿ ಮನೆಯಲ್ಲಿ ಈ ವಿಚಾರದ ಬಗ್ಗೆ ಹೇಳಿರಲಿಲ್ಲ. ಆದ್ರೆ ಆಕೆ ಗರ್ಭಿಣಿಯಾದ ನಂತರ ಈ ವಿಚಾರ ಗೊತ್ತಾಗಿದೆ.
ಮೊದಲಿಗೆ ಬಾಲಕಿಯ ಮೇಲೆ 3-4 ಮಂದಿ ಅತ್ಯಾಚಾರ ನಡೆಸಿದ್ದಾರೆ. ಇದಾದ ಬಳಿಕ ಮತ್ತೆ ಉಳಿದವರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಹೀಗೆ 6 ತಿಂಗಳ ವರೆಗೂ ಪದೇ ಪದೇ ಅತ್ಯಾಚಾರ ನಡೆಸಿದ್ದಾರೆ. ಹುಡುಗಿಯು ಮಾನಸಿಕವಾಗಿ ತೀರ ಆಘಾತಕ್ಕೆ ಒಳಗಾಗಿದ್ದಾಳೆ ಎನ್ನಲಾಗಿದೆ.








