ಕೆ.ಎಲ್.ರಾಹುಲ್ ಚಾಂಪಿಯನ್ ಪ್ಲೇಯರ್ : ಕನ್ನಡಿಗನ ಪರ ನಿಂತ ವಿರಾಟ್
ಅಹ್ಮದಾಬಾದ್ : ಕೆ.ಎಲ್ ರಾಹುಲ್ ಚಾಂಪಿಯನ್ ಪ್ಲೇಯರ್, ಅವರು ಭಾರತ ತಂಡದಲ್ಲಿ ಆರಂಭಿಕನಾಗಿ ಮುಂದುವರಿಯಲಿದ್ದಾರೆ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ಟಿ 20 ಸರಣಿಯಲ್ಲಿ ರನ್ ಗಳಿಸಲು ಪರದಾಡುತ್ತಿರುವ ಕೆ.ಎಲ್ ರಾಹುಲ್ ಅವರನ್ನ ತಂಡದಿಂದ ಡ್ರಾಪ್ ಮಾಡಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. 4 ಪಂದ್ಯಗಳಲ್ಲಿ ರಾಹುಲ್ ಮೂರು ಬಾರಿ ಡಕ್ ಔಟ್ ಆಗಿರುವುದು ಟೀಕಾರರಿಗೆ ಆಹಾರವಾಗಿದ್ದು, ಅವರನ್ನ ಪ್ಲೇಯಿಂಗ್ 11ನಿಂದ ಡ್ರಾಪ್ ಮಾಡಿ ಬೇರೆಯವರಿಗೆ ಅವಕಾಶ ನೀಡಬೇಕೆಂದು ಹೇಳುತ್ತಿದ್ದಾರೆ.
ಈ ಮಧ್ಯೆ ಕೆ.ಎಲ್ ರಾಹುಲ್ ಪ್ರದರ್ಶನದ ಬಗ್ಗೆ ಪಂದ್ಯ ಮುಗಿದ ನಂತರ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, “ಎರಡು ದಿನಗಳ ಹಿಂದೆ ನಾನು ಕೂಡ ಫಾರ್ಮ್ ಕಳೆದುಕೊಂಡಿದ್ದೆ. ಕೆಎಲ್ ರಾಹುಲ್ ಒಬ್ಬ ಚಾಂಪಿಯನ್ ಪ್ಲೇಯರ್. ನೀವು ಅವರ ಕಳೆದ ಎರಡು ಮೂರು ವರ್ಷಗಳ ನಂಬರ್ಸ್ ಗಳನ್ನು ನೋಡಿ, ಅದು ಟಿ20 ಕ್ರಿಕೆಟ್ ನಲ್ಲಿ ಎಲ್ಲರಿಗಿಂತಲೂ ಅವರು ಶ್ರೇಷ್ಠ ಪ್ರದರ್ಶನ ತೋರಿದ್ದಾರೆ. ನಮ್ಮ ತಂಡದ ಪ್ರಮುಖ ಆಟಗಾರರಾಗಿ ರೋಹಿತ್ ಜೊತೆಗೆ ಟಾಪ್ ಆರ್ಡರ್ ನಲ್ಲಿ ಮುಂದುವರಿಯಲಿದ್ದಾರೆ” ಎಂದು ತಿಳಿಸಿದ್ದಾರೆ.
ಅಂದಹಾಗೆ ರಾಹುಲ್ ಕಳೆದ 4 ಪಂದ್ಯಗಳಲ್ಲಿ 3 ಬಾರಿ ಡಕ್ ಔಟ್ ಆಗಿದ್ದಾರೆ. ಕೊಹ್ಲಿ ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯ ಮತ್ತು ಮೊದಲ ಟಿ20 ಪಂದ್ಯದಲ್ಲಿ ಡಕ್ ಔಟ್ ಆಗಿದ್ದರು.








