ಇತಿಹಾಸ ಪ್ರಸಿದ್ಧ ಪುತ್ತೂರಿನ ಮಹತೋಬಾರ್ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಧಾರ್ಮಿಕ ವಿಧಾನದ ಅಂಗವಾಗಿ ಧ್ವಜಾರೋಹಣ ನಡೆಸುವುದರೊಂದಿಗೆ ಜಾತ್ರೆಗೆ ಇಂದು ಬೆಳಿಗ್ಗೆ ವಿದ್ಯುಕ್ತ ಚಾಲನೆ ನೀಡಲಾಯಿತು.
ಲಕ್ಷಾಂತರ ಜನ ಆಗಮಿಸುವ ಪುತ್ತೂರಿನ ಜಾತ್ರೆಗೆ ಈ ಬಾರಿ ಕೊರೋನಾ ಸೋಂಕಿನ ಭೀತಿಯಿಂದ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. ತಂತ್ರಿಗಳು, ಅರ್ಚಕರ ಉಪಸ್ಥಿತಿಯಲ್ಲಿ ಹತ್ತೂರು ಒಡೆಯನ ಜಾತ್ರೋತ್ಸವದ ಸಾಂಪ್ರದಾಯಿಕ ಧ್ವಜಾರೋಹಣವನ್ನು ಬೆಳಿಗ್ಗೆ 9.50ಕ್ಕೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಗರುಡ, ಧ್ವಜಸ್ಥಂಭಕ್ಕೆ ಪ್ರದಕ್ಷಿಣೆ ಹಾಕಿದ್ದು, ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
FIFA 2026 : ಹಸಿರು ರಂಗಮಂಟಪದ ಮಹಾರಾಣಿ.. 22 ಆಟಗಾರರನ್ನು ಆಡಿಸುವ ಆ ತಾಂತ್ರಿಕ ಮೋಹಿನಿ ಯಾರು..?
FIFA 2026 : ಅದು ಹಚ್ಚ ಹಸಿರಿನ ಹೈಬ್ರಿಡ್ ಹುಲ್ಲು ಹಾಗೂ ಸ್ವಲ್ಪ ಕೃತಕ ಪ್ಲಾಸ್ಟಿಕ್ ನಾರುಗಳಿಂದ ಸಿದ್ದಗೊಂಡಿರುವ ಆಯತಾಕಾರದ ವಿನ್ಯಾಸದ ಫುಟ್ಬಾಲ್ ಮೈದಾನ. 105 ಮೀಟರ್...








