ನಿಯಮ ಉಲ್ಲಂಘಿಸಿ `ಖಾಸಗಿ ಶಾಲೆಗಳಲ್ಲಿ 1 ರಿಂದ 5ನೇ ತರಗತಿ ಆರಂಭಿಸಿದ್ರೆ ಕ್ರಮ’
ತುಮಕೂರು : ಕೊರೊನಾ ಎರಡನೇ ಅಲೆ ಹಿನ್ನೆಲೆ 1 ರಿಂದ 5ನೇ ತರಗತಿಗಳು ನಡೆಯಬಾರದು.
ಖಾಸಗಿ ಶಾಲೆಗಳು ನಿಯಮ ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಸಿದ್ದಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 15 ರಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭಿಸುವ ಚಿಂತನೆ ನಡೆದಿದೆ.
ಕೊರೋನಾ ಎರಡನೇ ಅಲೆ ಶುರುವಾಗಿದೆ, ಅದನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕು.
ಪಠ್ಯಗಳಲ್ಲಿ ಭಗವದ್ಗಿತೆ ಅಳವಡಿಕೆ ಕುರಿತು ಆಗ್ರಹ ಇದೆ. ಇದರ ಕುರಿತು ಕುಳಿತು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ 1ರಿಂದ 5ನೇ ತರತಿಗಳು ನಡೆಯಬಾರದು, ಖಾಸಗಿ ಶಾಲೆಗಳು ನಿಯಮ ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ ಸುರೇಶ್ ಕುಮಾರ್,
ಮಾರ್ಚ್ 1ರಿಂದ 1ರಿಂದ5ನೇ ತರಗತಿ ಆರಂಭಿಸುವ ಇಚ್ಛೆ ನನಗೂ ಇತ್ತು. ಆದರೆ ಚರ್ಚೆ ಮಾಡಿ ಬೇಡ ಎಂಬ ಅಭಿಪ್ರಾಯಕ್ಕೆ ಬಂದಿದ್ದೆವೆ ಎಂದರು.
ಇನ್ನು ಅಜೀಂ ಪ್ರೇಮ್ ಜಿ ವಿವಿ ಆಘಾತಕಾರಿ ವರದಿ ನೀಡಿದೆ. ಶಾಲೆ ಆರಂಭವಾಗದ ಹಿನ್ನೆಲೆಯಲ್ಲಿ ಮಕ್ಕಳು ಗಣಿತ ಮರೆತಿದ್ದಾರೆ, ಭಾಷೆ ಮರೆತಿದ್ದಾರೆ ಎಂಬುದು ವರದಿಯಲ್ಲಿ ಇದೆ.
ಹಾಗಾಗಿ ರಾಜ್ಯ ಸರ್ಕಾರ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ಕಡೆಗೂ ಗಮನ ಕೊಡುತ್ತದೆ ಎಂದು ತಿಳಿಸಿದರು.










