ಬೆಂಗಳೂರಿಗರೇ ಗಮನಿಸಿ : 8 ದಿನ ಮೆಟ್ರೊ Metro ರೈಲು ಸಂಚಾರ ಸ್ಥಗಿತ
ಬೆಂಗಳೂರು : ಇದೇ ತಿಂಗಳ 21ರಿಂದ 28ರ ತನಕ ಮೆಜೆಸ್ಟಿಕ್ ನಿಂದ ಮೈಸೂರು ರಸ್ತೆ ಮೆಟ್ರೋನಿಲ್ದಾಣದವರೆಗೆ ಮೆಟ್ರೋ ರೈಲು ಸಂಚಾರ ಇರಲ್ಲ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.
ಮೈಸೂರು ರಸ್ತೆಯಿಂದ ಕೆಂಗೇರಿಯವರೆಗೆ ಮುಂದಿನ ತಿಂಗಳು ಪರೀಕ್ಷಾರ್ಥ ರೈಲು ಸಂಚಾರ ನಡೆಸಲು ಬಿಎಂಆರ್ ಸಿಎಲ್ ಮುಂದಾಗಿದೆ. ಇದಕ್ಕಾಗಿ ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ಮಾರ್ಗದಲ್ಲಿ ಸಿಗ್ನಲಿಂಗ್ ವ್ಯವಸ್ಥೆ ಮಾರ್ಪಾಡು ಕಾಮಗಾರಿ ಹಮ್ಮಿಕೊಳ್ಳಲಿದೆ.
ಈ ಹಿನ್ನಲೆಯಲ್ಲಿ ಇದೇ 21ರಿಂದ 28ರ ತನಕ ನೇರಳೆ ಮಾರ್ಗದಲ್ಲಿನ ನಾಡಪ್ರಭು ಕೆಂಪೇಗೌಡ ರೈಲು ನಿಲ್ದಾಣದಿಂದ ಮೈಸೂರು ರಸ್ತೆ ಮೆಟ್ರೊ ನಿಲ್ದಾಣದವರೆಗೆ ಮೆಟ್ರೊ ರೈಲು ಸಂಚಾರ ಇರುವುದಿಲ್ಲ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.
ಇನ್ನು ಮೆಜೆಸ್ಟಿಕ್ ನಿಂದ ಬೈಯಪ್ಪನಹಳ್ಳಿ ನಿಲ್ದಾಣದ ನಡುವೆ ಮಾತ್ರ ಎಂದಿನಂತೆ ಮೆಟ್ರೋ ರೈಲು ಸಂಚರಿಸಲಿದೆ.










