ಟೈಂ ಗ್ಯಾಪ್ ಅಷ್ಟೆ ಟೈಮಿಂಗ್ ನಲ್ಲಿ ಅಲ್ಲ : ಯುವಿಗೆ ಯುವಿಯೇ ಸಾಟಿ
ರಾಯ್ಪುರ್ : ಯುವರಾಜ್ ಸಿಂಗ್ ಅಂದ್ರೆ ಥಟ್ ಅಂತ ನೆನಪಿಗೆ ಬರೋದು 2007ರ ಟಿ 20 ವಿಶ್ವಕಪ್. ಯಾಕೆಂದ್ರೆ ಆ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವಿ ಒಂದೇ ಓವರ್ ನಲ್ಲಿ 6 ಸಿಕ್ಸರ್ ಗಳನ್ನ ಬಾರಿಸಿ ದಾಖಲೆ ಬರೆದಿದ್ದರು. ಆ ಬಳಿಕ ಎಷ್ಟೊ ಮಂದಿ ಘಟಾನುಘಟಿಗಳು ಆರು ಬಾಲಿಗೆ ಆರು ಸಿಕ್ಸರ್ ಗಳನ್ನ ಸಿಡಿಸಿದ್ರೂ ಮಜಾ ಅನ್ನಿಸಲಿಲ್ಲ. ಕಾರಣ ಸಿಕ್ಸರ್ ಸಿಡಿಸುವರಲ್ಲಿ ಯುವಿಗೆ ತನ್ನದೇಯಾದ ಒಂದು ಸ್ಟೈಲ್ ಇದೆ.
ಬಹುಶಃ ಯುವರಾಜ್ ಸಿಂಗ್ ಅವರಷ್ಟು ಸ್ಟೈಲ್ ಆಗಿ ಸಿಕ್ಸರ್ ಸಿಡಿಸುವ ಮತ್ತೊಬ್ಬ ಬ್ಯಾಟ್ಸ್ ಮನ್ ಹುಟ್ಟುವುದಿಲ್ಲವೇನೋ. ಯುವಿ ಸಿಡಿಸುವ ಪ್ರತಿ ಸಿಕ್ಸರ್ ಮನಮೋಹಕವಾಗಿರುತ್ತೆ. ಇದೇ ಕಾರಣಕ್ಕೆ ಯುವಿಯನ್ನ ಎಲ್ಲರೂ ಸಿಕ್ಸರ್ ಕಿಂಗ್ ಅಂತ ಕರೆಯೋದು.
ಒಂದೇ ಓವರ್ ನಲ್ಲಿ ನಾಲ್ಕು ಸಿಕ್ಸರ್
ಹೌದು..! ವಿವಿಧ ದೇಶದ ಕ್ರಿಕೆಟ್ ದಿಗ್ಗಜರೊಂದಿಗೆ ನಡೆಯುತ್ತಿರುವ ರೋಡ್ ಸೇಫ್ಟಿ ಸರಣಿಯಲ್ಲಿ ಮತ್ತೊಮ್ಮೆ ಯುವರಾಜ್ ಸಿಂಗ್ ಅಬ್ಬರಿಸಿದ್ದಾರೆ. ವಿಂಡೀಸ್ ಲೆಜೆಂಡ್ಸ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಯುವಿ ಒಂದೇ ಓವರ್ ನಲ್ಲಿ 4 ಸಿಕ್ಸರ್ ಸಿಡಿಸಿ ಪ್ರೇಕ್ಷಕರಲ್ಲಿ ರಂಜಿಸಿದ್ದಾರೆ.
https://twitter.com/i/status/1372210114241826817
ಪಂದ್ಯದಲ್ಲಿ ಕೇವಲ 20 ಎಸೆತಗಳ ಎದುರಿಸಿದ ಯುವಿ ಅಜೇಯ 49ರನ್ ಸಿಡಿಸಿದ್ದು, ಇದರಲ್ಲಿ 1 ಬೌಂಡರಿ ಹಾಗೂ 6 ಸಿಕ್ಸರ್ ಸೇರಿಕೊಂಡಿವೆ. ವಿಶೇಷವೆಂದರೆ ಒಂದೇ ಓವರ್ ನಲ್ಲಿ ನಾಲ್ಕು ಭರ್ಜರಿ ಸಿಕ್ಸರ್ ಸಿಡಿಸಿದ್ದಾರೆ. ಟೈಂ ಗ್ಯಾಪ್ ಅಷ್ಟೆ ಸಿಕ್ಸರ್ ಸಿಡಿಸುವ ಟೈಮಿಂಗ್ ನಲ್ಲಿ ಅಲ್ಲ ಎಂದು ಸಾರಿದ್ದಾರೆ.








