BIGGBOSS 8 : ಬಿಗ್ ಬಾಸ್ ಮನೆಯಿಂದ ಆಚೆ ಹೋಗುವ 3ನೇ ಸ್ಪರ್ಧಿ ಯಾರು..?
ಬಿಗ್ ಬಾಸ್ 8 ನೇ ಆವೃತ್ತಿಯಲ್ಲಿ 3 ವಾರ ವಾರಗಳು ಯಶಸ್ವಿಯಾಗಿ ಪೂರ್ಣಗೊಂಡಿದೆ. ಇಂದು ಕಿಚ್ಚ ಸುದೀಪ್ ಮನೆ ಮಂದಿಯ ಜೊತೆಗೆ ನ್ಯಾಯ ಪಂಚಾಯತಿ ಮಾಡಲಿದ್ದಾರೆ.
ಆ ಕ್ಷಣಕ್ಕಾಗಿ ಪ್ರೇಕ್ಷಕರು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಲ್ಲದೇ ಈ ವಾರ ಯಾರು ಮನೆಗೆ ಹೋಗಲಿದ್ದಾರೆ. ಯಾರೆಲ್ಲಾ ಸೇಫ್ ಆಗಲಿದ್ದಾರೆ ಅನ್ನೋ ಪ್ರಶ್ನೆಗಳು, ಕ್ಯೂರಿಯಾಸಿಟಿ ಕಾಡುತ್ತಿದೆ. ಎಲಿಮಿನೇಶನ್ ಗೆ ಶಮಂತ್ ಗೌಡ, ಪ್ರಶಾಂತ್, ದಿವ್ಯಾ ಸುರೇಶ್,
ಗೀತಾ, ನಿಧಿ, ಅರವಿಂದ್, ರಘು, ದಿವ್ಯಾ ಉರುಡುಗ, ವಿಶ್ವನಾಥ್ ನಾಮಿನೇಟ್ ಆಗಿದ್ದು, ಜನರ ವೋಟ್ ಗಳು ಯಾರನ್ನ ಸೇಫ್ ಮಾಡುತ್ತೆ, ಯಾರು ಮನೆಯಿಂದ ಆಚೆ ಹೋಗ್ತಾರೆ ಅನ್ನೋದು ಗೊತ್ತಾಗಲು ರಾತ್ರಿವರೆಗೂ ಕಾಯಲೇಬೇಕುತ್ತೆ.
ಇನ್ನೂ ಕ್ಯಾಪಟ್ನ್ ಆಗಿದ್ದ ರಾಜೀವ್ ಅವರು ನಾಮಿನೇಟ್ ಆಗಿದ್ದ ಶಂಕರ್ ಅಶ್ವಥ್ ಅವರನ್ನ ತಮಗೆ ಕೊಟ್ಟಿದ್ದ ವಿಶೇಷ ಅಧಿಕಾರ ಬಳಸಿಕೊಂಡು ಬಚಾವ್ ಮಾಡಿದ್ರು.
ಇನ್ನೂ ಮೊದಲನೇ ವಾರ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮನೆಯಿಂದ ಹೊರಗಡೆ ಬಂದಿದ್ದರು. 2ನೇ ವಾರ ನಿರ್ಮಾಪಕಿ, ನಟಿ, ನಿರ್ದೇಶಕಿ ನಿರ್ಮಲಾ ಚನ್ನಪ್ಪ ಮನೆಯಿಂದ ಹೊರನಡೆದಿದ್ರು.








