ಕೊಡಗಿನಲ್ಲಿ ನರಹಂತ ಹುಲಿ ಗುಂಡೇಟಿಗೆ ಬಲಿ..!
ಕೊಡಗು : ದಕ್ಷಿಣ ಕೊಡಗಿನಲ್ಲಿ ಆತಂಕ ಸೃಷ್ಟಿಸಿದ್ದ ನರ ಹಂತಕ ಹುಲಿ ಕೊನೆಗೂ ಗುಂಡಿಗೆ ಬಲಿಯಾಗಿದೆ. ಇದರಿಂದಾಗಿ ಕೊಡಗಿನ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ದಕ್ಷಿಣ ಕೊಡಗಿನ ನಾಲ್ಕೇರಿ, ಹುದಿಕೇರಿ, ಬೆಳ್ಳೂರು, ಹರಿಹರ, ತಾವಳಗೇರಿ ಹಾಗೂ ಇನ್ನಿತರೇ ಕಡೆಗಳಲ್ಲಿ ಕಳೆದ 25 ದಿನಗಳಿಂದ ಹುಲಿಯ ಆತಂಕ ಹೆಚ್ಚಾಗಿತ್ತು. ಅಲ್ಲದೇ ಇಬ್ಬರನ್ನ ಬಲಿಪಡೆದುಕೊಂಡಿತ್ತು. ಸುಮಾರು 11 ವರ್ಷದ ಗಂಡು ಹುಲಿ ಇದಾಗಿದ್ದು, ಇದರ ಉಪಟಳದಿಂದ ಗ್ರಾಮಸ್ಥರು ಭಯದಿಂದ ಓಡಾಡುವ ಪರಿಸ್ಥಿತಿ ಎದುರಾಗಿತ್ತು.
ಬೆಳಗಾವಿ : ಕೊರೊನಾ ಸೋಂಕು ತಪಾಸಣೆ ವೇಳೆ ವೈದ್ಯರು ಗ್ರಾಮಸ್ಥರ ನಡುವೆ ವಾಗ್ವಾದ..!
ಹೀಗಾಗಿ ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ಮಾಡಿ ಹುಲಿ ಸೆರೆಗೆ ಆಗ್ರಹಿಸಿದ್ದರು. ಇದರಿಂದ ಅರಣ್ಯ ಇಲಾಖೆ ಕೂಬಿಂಗ್ ಮತ್ತಷ್ಟು ಚೂರುಕು ಗೊಳಿಸಿತು. ಕಳೆದ ಮಾರ್ಚ್ 8 ರಂದು ಬೆಳ್ಳೂರೂ ಭಾಗದಲ್ಲಿ ಅನೆ ಕಾರ್ಯಚರಣೆ ವೆಳೆ ಹುಲಿಗೆ ಗುಂಡು ಹೊಡೆಯಲಾಗಿತ್ತು ಆದ್ರೆ ಅದು ಗುಂಡಿ ಹಾರಿಸಿದ ಸ್ಥಳದಿಂದ ಸುಮಾರು 8ರಿಂದ 10 k.m ದೂರದಲ್ಲಿ ಸತ್ತು ಬಿದ್ದಿದೆ.
ಮೂರು ಗುಂಡು ಹುಲಿಗೆ ತಗುಲಿತ್ತು. ನಾಗರಹೊಳೆ ಬಳಿಯ ಲಕ್ಕುಂದ ಎಸ್ಟೇಟ್ ಬಳಿ ಹುಲಿ ದೇಹ ಪತ್ತೆಯಾಗಿದೆ. ಇಂದು ಮುಂಜಾನೆ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ದುರ್ವಾಸನೆ ಬಂದ ಹಿನ್ನಲೆ ಹುಡುಕಾಟ ನಡೆಸಿದಾಗ ಅದರ ಮೃತದೇಹ ಸಿಕ್ಕಿದೆ.
ಕೊರೊನಾ ತೊಲಗಿಲ್ಲ.. ಕಾದಿದೆ ಮಾರಿ ಹಬ್ಬ..!!