ಸಾಮೂಹಿಕ ಅತ್ಯಾಚಾರ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಿದ ಪಾಕ್ ನ್ಯಾಯಾಲಯ..!
ಪಾಕಿಸ್ತಾನ : ಸಾಮೂಹಿಕ ಅತ್ಯಾಚಾರ ಪ್ರಕರಣದ ಇಬ್ಬರು ಆರೋಪಿಗಳಿಗೆ ಪಾಕಿಸ್ತಾನದ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ. ಕಳೆದ ವರ್ಷ ಹೈ ವೇಯಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಗಿದ್ದ ಆರೋಪದಲ್ಲಿ ಈ ಇಬ್ಬರೂ ಅಪರಾಧಿಗಳೆಂದು ಸಾಬೀತಾಗಿದ್ದು, ಇಬ್ಬರನ್ನೂ ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿದೆ.
ಕಳೆದ ವರ್ಷ ನಡೆದಿದ್ದ ಈ ಘಟನೆಯಿಂದ ನಾಗರೀಕರು ಸರ್ಕಾರದ ವಿರುದ್ಧ ರೊಚ್ಚಿಗೆದ್ದು, ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ರಸ್ತೆಗಿಳಿದು ತೀವ್ರವಾಗಿ ಪ್ರತಿಭಟನೆಗಳನ್ನ ನಡೆಸಿದ್ದರು. ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಜಾರಿಗೆ ಆಗ್ರಹಿಸಿದ್ದರು.
ಮಹಿಳೆಯು ಕಾರಿನಲ್ಲಿ ತನ್ನ ಮಕ್ಕಳನ್ನ ಕೂರಿಸಿಕೊಮಡು ಹೈವೇಯಲ್ಲಿ ಹೋಗುವಾಗ ಕಾರಿನಲ್ಲಿ ಪೆಟ್ರೋಲ್ ಖಾಲಿಯಾಗಿತ್ತು. ಬಳಿಕ ಕಾರನ್ನ ರಸ್ತೆ ಬದಿ ನಿಲ್ಲಿಸಿ ತನ್ನ ಗಂಡನಿಗೆ ಕರೆ ಮಾಡುವ ಪ್ರಯತ್ನ ಮಾಡುತ್ತಿದ್ದು. ಇದೇ ವೇಳೆ ಅಲ್ಲಿಗೆ ಬಂದ ಕಿಡಿಗೇಡಿಗಳು ಅವರನ್ನ ಅಪಹರಿಸಿ ಬಳಿಕ ಸಾಮೂಹಿಕ ಅತ್ಯಾಚಾರ ನಡೆಸಿದ್ದರು.
ಈ ಇಬ್ಬರು ದರೋಡೆ, ಅಪರಹಣ, ಉಗ್ರ ಚಟುವಟಿಕೆಗಳಲ್ಲೂ ಬೇಕಾಗಿದ್ದ ಪ್ರಮುಖ ಆರೋಪಿಗಳಾಗಿದ್ದರು. ಅಬಿದ್ ಮಲ್ಹೀ ಹಾಗೂ ಶಫ್ಕತ್ ಹುಸೇನ್ ಅಪರಾಧಿಗಳಾಗಿದ್ದು, ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಬಾಲಕಿಗೆ ಗುಟ್ಕಾ ತರಲಿಕ್ಕೆ ಹೇಳಿ ಕಂಟೈನರ್ ನ ಒಳಗೆ ಅತ್ಯಾಚಾರಸಗಿದ ಕೀಚಕ..!
ಮಾಂತ್ರಿಕನ ಮಾತು ಕೇಳಿ ನೀಚ ಕೆಲಸ ಮಾಡಿದ ಕಿರಾತಕಿ… 3 ವರ್ಷದ ಪುಟ್ಟ ಕಂದಮ್ಮನ ಕೊಲೆ..!