UPSC ಮೈನ್ ಫಲಿತಾಂಶ ಪ್ರಕಟ… ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ..!
ನವದೆಹಲಿ : 2020ನೇ ಸಾಲಿನ UPSC ಮೈನ್ ಪರೀಕ್ಷಾ ಫಲಿತಾಂಶವನ್ನ ಕೇಂದ್ರ ಲೋಕಸೇವಾ ಆಯೋಗವು ಪ್ರಕಟಿಸಿದೆ. ಇದೇ ವೇಳೆ ಸರ್ಕಾರ ಮತ್ತೊಂದು ಮಹತ್ವದ ಕ್ರಮ ಕೈಗೊಂಡಿದೆ.
ಹೌದು.. ಯುಪಿಎಸ್ಸಿ ಪರೀಕ್ಷೆಯಲ್ಲಿ ಈ ಅಭ್ಯರ್ಥಿಗಳು ಮಾಡಿರುವ ಸಾಧನೆಯ ಆಧಾರದಲ್ಲಿ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಅವರನ್ನು ನೇಮಕ ಮಾಡಿಕೊಳ್ಳಳು ಅನುಮತಿ ನೀಡಲಾಗಿದೆ. ಅಂದ್ಹಾಗೆ ಈ ಪರೀಕ್ಷೆಗಳನ್ನು 2021ರ ಜನವರಿ 8 ರಿಂದ 17ರವರೆಗೆ ನಡೆಸಲಾಗಿತ್ತು.
ಯುಪಿಎಸ್ಸಿ ಪರೀಕ್ಷೆಯ ಸಂದರ್ಶನದಲ್ಲಿ ತೇರ್ಗಡೆಯಾದವರಿಗೆ ಅನ್ಯ ಸರ್ಕಾರಿ ಮತ್ತಿತರೆ ಕ್ಷೇತ್ರಗಳಲ್ಲಿ ಆದ್ಯತೆಯ ಮೇರೆಗೆ ಉದ್ಯೋಗ ದೊರಕಿಸಿಕೊಡುವ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.
ಇನ್ನೂ ಇದೇ ವೇಳೆ ಸಂದರ್ಶನದ ಹಂತದವರೆಗೆ ಹೋಗಿ ವಿಫಲರಾದವರ ಅಂಕಗಳು ಹಾಗೂ ಇತರೆ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ ಇತರೆ ಉದ್ಯೋಗದಾತರಿಗೆ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರದ ಅನುಮೋದನೆ ಅನುವು ಮಾಡಿಕೊಟ್ಟಿರೋದಾಗಿ ತಿಳಿಸುವ ಮೂಲಕ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ.
ಸಂದರ್ಶನದ ಹಂತದವರೆಗೆ ಹೋಗಿ ವಿಫಲರಾದವರ ಈ ವಿವರಗಳನ್ನು ಇಂಟಿಗ್ರೇಟೆಡ್ ಇನ್ಫಾರ್ಮೇಷನ್ ಸಿಸ್ಟಂಗೆ ಸಂಪರ್ಕಿಸಲಾಗುತ್ತದೆ ಎಂದು ತಿಳಿಸಿದೆ. ಈ ಮೂಲಕ ಸಂದರ್ಶನದಲ್ಲಿ ವಿಫಲರಾದರೂ ಕೂಡ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಯೋಜನೆ ಸರ್ಕಾರದ್ದಾಗಿದೆ.
ರಾಜ್ಯದಲ್ಲಿ ಈ ಬಾರಿ ಹೋಳಿ ಹಬ್ಬ ಆಚರಣೆ ಮಾಡಂಗಿಲ್ಲ..!