ಬಾಂಗ್ಲಾ ಪ್ರಧಾನಿ ಹತ್ಯೆಗೆ ಯತ್ನಿಸಿದ 14 ಉಗ್ರರಿಗೆ ಗಲ್ಲು ಶಿಕ್ಷೆ..!
ಬಾಂಗ್ಲಾದೇಶ: ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಕೊಲೆಗೆ ಯತ್ನಿಸಿದ್ದ 14 ಮಂದಿ ಉಗ್ರರಿಗೆ ಮರಣದಂಡನೆ ವಿಧಿಸಲಾಗಿದೆ. ಇನ್ನೂ ಶಿಕ್ಷೆಗೊಳಗಾಗಿರುವ ಎಲ್ಲರೂ ನಿಷೇಧಿತ ಹರ್ಕತುಲ್ ಜಿಹಾದ್ ಬಾಂಗ್ಲಾದೇಶ್ ಸಂಘಟನೆಗೆ ಸೇರಿದವರು ಎನ್ನಲಾಗಿದೆ.
2000 ಜುಲೈ 21ರಂದು ಶೇಖ್ ಹಸೀನಾ ಚುನಾವಣಾ ಭಾಷಣ ಮಾಡಬೇಕಾಗಿದ್ದ ಕೊಟಾಲಿಪಾರ ಮೈದಾನದ ಸಮೀಪ ದೋಷಿಗಳು 76 ಕಿಲೋಗ್ರಾಮ್ ಬಾಂಬ್ ಇರಿಸಿದ್ದರು.
ಇದೇ ಪ್ರಕರಣದ ಆರೋಪಿಗಳನ್ನ ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿದೆ. 14 ಜಿಹಾದಿಗಳಿಗೆ ಮರಣದಂಡನೆ ಶಿಕ್ಷೆಯನ್ನ ವಿಧಿಸಲಾಗಿದೆ. ಶೇಖ್ ಹಾಸೀನಾ ಧೀರ್ಘಕಾಲ ಆಡಳಿತದಲ್ಲಿರುವ ಪ್ರಧಾನಿಯೂ ಕೂಡ ಆಗಿದ್ದಾರೆ. ಇವರ ಜೀವನದಲ್ಲಿ ಅನೇಕ ಬಾರಿ ಶೇಖ್ ಅವರ ಕೊಲೆ ಪ್ರಯತ್ನಗಳು ನಡೆದಿವೆ.
UPSC ಮೈನ್ ಫಲಿತಾಂಶ ಪ್ರಕಟ… ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ..!