ಮನೆಗಳ ಹಕ್ಕುಪತ್ರ ನೋಂದಣಿ ಶುಲ್ಕ ಇಳಿಕೆ
ಬೆಂಗಳೂರು : ಮನೆಗಳ ಹಕ್ಕುಪತ್ರ ನೋಂದಣಿ ಶುಲ್ಕವನ್ನು ಸಾಮಾನ್ಯ ವರ್ಗದವರಿಗೆ 10 ರಿಂದ 4 ಸಾವಿರ ಮತ್ತು ಎಸ್ ಸಿ, ಎಸ್‍ಟಿ ಸಮುದಾಯದವರಿಗೆ 4 ಸಾವಿರದಿಂದ 2ಸಾವಿರಕ್ಕೆ ಇಳಿಸಲಾಗಿದೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ವಿ.ಸೋಮಣ್ಣ ಅವರು ಹಕ್ಕುಪತ್ರ ವಿತರಣೆ ಮತ್ತು ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ ಪ್ರಧಾನಿ ಮಂತ್ರಿ ಅವಾಸ್ ಯೋಜನೆಯ ಅಡಿಯಲ್ಲಿ ಮನೆ ಕಟ್ಟಲು ಅನುದಾನ ಬಿಡುಗಡೆಯ ಚಕ್ಕುಗಳನ್ನು ಫಲಾನುಭವಿಗಳಿಗೆ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಫಲಾನುಭವಿಗಳಿಗೆ ಮನೆಗಳ ಹಕ್ಕುಪತ್ರ ನೋಂದಣಿ ಶುಲ್ಕವನ್ನ ಸಾಮಾನ್ಯ ವರ್ಗದವರಿಗೆ 10ರಿಂದ 4 ಸಾವಿರ ಮತ್ತು ಎಸ್ ಸಿ, ಎಸ್‍ಟಿ ಸಮುದಾಯದವರಿಗೆ 4 ಸಾವಿರದಿಂದ 2ಸಾವಿರಕ್ಕೆ ಇಳಿಸಲಾಗಿದೆ.
ಪ್ರಧಾನಿ ನರೇಂದ್ರಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಬಡವರು ಸೂರು ಇಲ್ಲದೇ ಜೀವನ ಸಾಗಿಸಬಾರದು, ಪ್ರತಿಯೊಬ್ಬ ನಾಗರಿಕರಿಗೆ ಶಾಶ್ವತ ಸೂರು ಕಲ್ಪಿಸಿಬೇಕು ಎಂಬ ಆಶಯವನ್ನು ಈಡೇರಿಸಲಾಗುತ್ತಿದೆ. ಎಲ್ಲ ಧರ್ಮ, ವರ್ಗದ ಜನರಿಗೆ ವಸತಿ ಸೌಲಭ್ಯ ಸಿಗಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ವಸತಿ ಇಲಾಖೆ ಶರವೇಗದಲ್ಲಿ ವಸತಿ ನಿರ್ಮಾಣ ಹಂಚಿಕೆ ಮಾಡುತ್ತಿದೆ ಎಂದು ಇದೇ ವೇಳೆ ತಿಳಿಸಿದರು.










