ದಳಪತಿ ವಿಜಯ್ ಸಿನಿಮಾದಿಂದ ರಶ್ಮಿಕಾಗೆ ಗೇಟ್ ಪಾಸ್ – ಕನ್ನಡದ ಪೂಜಾ ಹೆಗ್ಡೆಗೆ ಚಾನ್ಸ್..!
ತಮಿಳಿನ ಸ್ಟಾರ್ ನಟ ವಿಜಯ್ ಅವರ 65ನೇ ಸಿನಿಮಾ ಅನೌನ್ಸ್ ಆಗಿದ್ದು, ಚಿತ್ರದ ಕ್ರೇಜ್ ಹೆಚಚುತ್ತಲೇ ಇದೆ. ಈ ನಡುವೆ ಚಿತ್ರದ ನಾಯಕಿ ಯಾರಾಗ್ತಾರೆ ಎಂಬ ಕುತೂಹಲಗಳಿತ್ತು. ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಲಿದ್ದಾರೆ ಎನ್ನಲಾಗ್ತಿತ್ತು.
ಆದ್ರೆ ಇದೀಗ ರಶ್ಮಿಕಾ ಬದಲಿಗೆ ಕನ್ನಡದ ಬ್ಯೂಟಿ ಸ್ಟಾರ್ ನಟಿ ಪೂಜಾ ಹೆಗ್ಡೆ ವಿಜಯ್ ಗೆ ನಾಯಕಿಯಾಗಲಿರೋದು ಕನ್ ಫರ್ಮ್ ಆಗಿದೆ. ಈ ಕುರಿತು ಸನ್ ಪಿಕ್ಚರ್ಸ್ ಅಧಿಕೃತವಾಗಿ ಘೋಷಣೆ ಮಾಡಿ ಪೋಸ್ಟರ್ ಸಹ ರಿಲೀಸ್ ಮಾಡಿದೆ.
ಈ ಮೂಲಕ ರಶ್ಮಿಕಾ ಮಂದಣ್ಣ ಈ ಸಿನಿಮಾದ ಚಾನ್ಸ್ ಕಳೆದುಕೊಂಡಿದ್ದು, ಪೂಜಾ ಹೆಗ್ಡೆಯವರು ಫೈನಲ್ ಆಗಿದ್ದಾರೆ. ಅಂದ್ಹಾಗೆ ಪೂಜಾ ಹೆಗ್ಡೆ ಒನ್ ಆಫ್ ದ ಟಾಪ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಬ್ಯುಸಿಯೆಸ್ಟ್ ನಟಿಯರು ಹಾಗೂ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಟಾಪ್ ನಟಿಯೂ ಹೌದು.
ಪೂಜಾ ಹೆಗ್ಡೆ ಹಾಗೂ ಪ್ರಭಾಸ್ ಅಭಿನಯದ ಬಹುನಿರೀಕ್ಷೆಯ ರಾಧೆ ಶ್ಯಾಮ್ ಸಿನಿಮಾ ಕೂಡ ಪೋಸ್ಟರ್ ನಿಂದಲೇ ಭಾರೀ ಸೌಂಡ್ ಮಾಡ್ತಿದ್ದು, ಈಗಾಗಲೇ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಇದು ಒಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಮಾಸ್ ಹೀರೋ ಪ್ರಭಾಸ್ ಈ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಮಿಂಚಲಿದ್ದಾರೆ.
The gorgeous @hegdepooja onboard as the female lead of #Thalapathy65 !@actorvijay @Nelsondilpkumar @anirudhofficial#Thalapathy65bySunPictures #PoojaHegdeInThalapathy65 pic.twitter.com/flp4izppAk
— Sun Pictures (@sunpictures) March 24, 2021
ಕಾರ್ತಿಯ ‘ಸುಲ್ತಾನ’ದಲ್ಲಿ ಕೆಜಿಎಫ್ ಗರುಡನ ಅಬ್ಬರ..!
‘ರಾಬರ್ಟ್’ ಸಕ್ಸಸ್ ಸಂಭ್ರಮದಲ್ಲಿ ‘ಮದಗಗಜ’ ನಿರ್ದೇಶಕನಿಗೆ ಕಾರ್ ಗಿಫ್ಟ್ ಕೊಟ್ಟ ಉಮಾಪತಿ..!