ವಿಲಾಯತಿ ಶರಬ್’ ಮೂಲಕ‌ ಹಿಂದಿ ಮ್ಯೂಜಿಕ್ ‌ವಿಡಿಯೋ‌ದಲ್ಲಿ ಅಭಿನಯಿಸಿದ‌‌ ಮೊದಲ‌ ದಕ್ಷಿಣದ ನಟ ಖ್ಯಾತಿಗೆ ಪಾತ್ರರಾದ ಅಲ್ಲು ಸಿರಿಶ್

1 min read

‘ವಿಲಾಯತಿ ಶರಬ್’ ಮೂಲಕ‌ ಹಿಂದಿ ಮ್ಯೂಜಿಕ್ ‌ವಿಡಿಯೋ‌ದಲ್ಲಿ ಅಭಿನಯಿಸಿದ‌‌ ಮೊದಲ‌ ದಕ್ಷಿಣದ ನಟ ಖ್ಯಾತಿಗೆ ಪಾತ್ರರಾದ ಅಲ್ಲು ಸಿರಿಶ್

ಅಲ್ಲು ಸಿರಿಶ್ ಒಬ್ಬ ಟ್ರೆಂಡ್ ಸೆಟರ್ ಎಂದು ನಿಸ್ಸಂಶಯವಾಗಿ ಹೇಳಬಹುದಾಗಿದೆ. ಹೊಸ ಬಗೆಯ ಪ್ರಯೋಗಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಹಿಂಜರಿಯದ ಕಲಾವಿದ ಇವರು. ಇದಕ್ಕೆ ವಿವಿಧ ಕ್ಷೇತ್ರಗಳಲ್ಲಿನ ಅವರ ಕಾರ್ಯವೇ ಸಾಕ್ಷಿಯಾಗಿದೆ. ಅವರು ಹೋಸ್ಟ್ ಮಾಡಿರುವ ಐಫಾ,ಫಿಲ್ಮ್‌ಫೇರ್ ಅವಾರ್ಡ್, ಸೈಮಾ ಸೇರಿದಂತೆ ಹಲವಾರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಜನಮೆಚ್ಚುಗೆ ಗಳಿಸಿದ್ದಾರೆ. ಅಲ್ಲದೆ ಆ ಪ್ರದರ್ಶನದ ತುಣುಕುಗಳು ಇಂದಿಗೂ ಯೂಟ್ಯೂಬ್ ನಲ್ಲಿ ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಿದೆ. ಟಿಕ್-ಟಾಕ್ ಗೆ ಸೇರಿ ಮಿಲಿಯನ್ ಗಟ್ಟಲೆ ಅನುಯಾಯಿಗಳನ್ನು ಗಳಿಸಿದ ಮೊದಲ ನಟ ಇವರಾಗಿದ್ದಾರೆ.

ಹಿಂದಿಯಲ್ಲಿ ಬಹಳ ದರ್ಶನ್ ರಾವಲ್ ಮತ್ತು ನೀತಿ ಮೋಹನ್ ಅವರು ಹಾಡಿದ ಹಿಂದಿ – ವಿಲಾಯತಿ ಶರಬ್ ಎಂಬ ಮ್ಯೂಸಿಕ್ ವಿಡಿಯೋದಲ್ಲಿ ನಟಿಸಿದ ದಕ್ಷಿಣದ ಮೊದಲ ನಟ ಎಂಬ ಹೆಗ್ಗಳಿಕೆಗೆ ಅಲ್ಲು ಸಿರಿಶ್ ಪಾತ್ರರಾಗಿದ್ದಾರೆ.

Allu Sirish

ಸಿರಿಶ್‌ಗೆ ಭಾಷೆ ಎಂದಿಗೂ ತಡೆಗೋಡೆಯಾಗಿಲ್ಲ. ಈ ಜನರೇಶನಿಂದ ಮಲಯಾಳಂ ಚಿತ್ರವೊಂದರಲ್ಲಿ ನಟಿಸಿದ ಮೊದಲ ತೆಲುಗು ನಟ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅವರು ಬಿಯಾಂಡ್ ಬಾರ್ಡರ್ಸ್ ಮೂಲಕ ಮಲಯಾಳಂಗೆ ಪಾದಾರ್ಪಣೆ ಮಾಡಿದರು, ಮಲಯಾಳಂನ ಸೂಪರ್ಸ್ಟಾರ್ ಮೋಹನ್ ಲಾಲ್ ಜೊತೆ ಸಹನಟನಾಗಿ ನಟಿಸಿದ್ದಾರೆ.

ಈ ನಟ ಪ್ರಸ್ತುತ ತನ್ನ ಮುಂಬರುವ ರೋಮ್ಯಾಂಟಿಕ್-ಹಾಸ್ಯ ಚಿತ್ರದ ಚಿತ್ರೀಕರಣದಲ್ಲಿದ್ದು, ಅದರ ವಿವರಗಳು ಶೀಘ್ರದಲ್ಲೇ ಹೊರಬರಲಿವೆ. ಚಲನಚಿತ್ರಗಳ ಹೊರತಾಗಿ, ಸಿರಿಶ್ ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಇವರು ಇತ್ತೀಚೆಗೆ ತಮ್ಮ ದೇಹದ ತೂಕವನ್ನು ಇಳಿಸಿ ಸ್ಲಿಮ್-ಫಿಟ್ ಆಗಿದ್ದಾರೆ. ಸಿರಿಶ್ ಅವರು ಸ್ಟೈಲ್ ಗೆ ಹೆಸರುವಾಸಿಯಾಗಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd