2026ರ ಗ್ಲಾಸ್ಗೋ ಕಾಮನ್‍ವೆಲ್ತ್‍ನಲ್ಲಿ ಚಿನ್ನದ ಪದಕ ಗೆಲ್ಲುವ ನೀರಜ್ ಚೋಪ್ರಾ ಕನಸು ಭಗ್ನಗೊಂಡಿದೆ. ಆದ್ರೂ ಈ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಚೋಪ್ರಾ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾನೆ.
ಒಂದು ರೀತಿಯಲ್ಲಿ ನಿರೀಕ್ಷೆಯಂತೆ ಶ್ರೀಲಂಕಾದ ರುಮೇಶ್ ತರಂಗ ಪತಿರಗೆ ಚಿನ್ನದ ನಗು ಬೀರಿದ್ದಾನೆ. ರುಮೇಶ್ 89.75 ಮೀಟರ್ ದೂರ ಎಸೆದು ಮೊದಲ ಸ್ಥಾನ ಪಡೆದ್ರೆ, ನೀರಜ್ 85.83 ದೂರ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾನೆ.
ಇನ್ನು ಭಾರತದ ಯುವ ಅಥ್ಲೀಟ್ ಯಶ್ವೀರ್ ಚೊಚ್ಚಲ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಪದಕದ ಗೆಲುವನ್ನು ಸಂಭ್ರಮಿಸಿದ್ದಾನೆ. 24ರ ಹರೆಯದ ಯಶ್ವೀರ್ 85.41 ಮೀಟರ್ ದೂರ ಎಸೆದು ಕಂಚಿನ ಪದಕ ಗಿಟ್ಟಿಸಿಕೊಂಡಿದ್ದಾನೆ. ಈ ಮೂಲಕ ಪೋಡಿಯಂನಲ್ಲಿ ಭಾರತದ ಇಬ್ಬರು ಅಥ್ಲೀಟ್‍ಗಳು ಕಂಗೊಳಿಸಿದ್ದರು.
ಇನ್ನು ಪಾಕಿಸ್ತಾನದ ಅರ್ಷದ್ ನದೀಮ್ ಎಂಟನೇ ಸ್ಥಾನ ಪಡೆದುಕೊಂಡಿದ್ದಾನೆ. ಫೈನಲ್ ಸ್ಪರ್ಧೆಯಲ್ಲಿ ನೀರಸ ಪ್ರದರ್ಶನ ನೀಡಿದ್ದ ನದೀಮ್ 77.41 ಮೀಟರ್ ದೂರ ಎಸೆದು ನಿರಾಸೆ ಅನುಭವಿಸಿದ್ದಾನೆ. 2022ರ ಕಾಮನ್‍ವೆಲ್ತ್‍ನಲ್ಲಿ ನದೀಮ್ 90.18 ಮೀಟರ್ ದೂರ ಎಸೆದು ಚಿನ್ನ ಗೆದ್ದುಕೊಂಡಿದ್ದರು.








