ಬೆಂಗಳೂರಿನ ಹೃದಯಭಾಗವಾಗಿರುವ ಮೆಜೆಸ್ಟಿಕ್ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಗೊಂದಲಕ್ಕೆ ಸಿಲುಕಿದ್ದಾರೆ.
ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಒಟ್ಟು 10 ಟ್ರ್ಯಾಕ್ಗಳಿವೆ. ಈ ಪೈಕಿ 2 ಟ್ರ್ಯಾಕ್ಗಳು ಮಾತ್ರ ಸದ್ಯ ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ ಎಂಟು ಟ್ರ್ಯಾಕ್ಗಳ (ಸರ್ವಿಸ್) ನಿರ್ವಹಣೆ ಕಾರ್ಯ ನಡೆಯುತ್ತಿದೆ.
ಆದ್ರೆ ಸಮಸ್ಯೆ ಅದಲ್ಲ. ಈ ಬಗ್ಗೆ ಸಾರ್ವಜನಿಕರಿಗೆ ರೈಲ್ವೆ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ. ಇದರಿಂದ ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಪರದಾಟ ನಡೆಸುವಂತಾಗಿದೆ,
ಪ್ರತಿದಿನ ನೂರಾರು ಪ್ರಯಾಣಿಕರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ದೂರದ ಊರಿಗೆ ಪ್ರಯಣ ಮಾಡುತ್ತಾರೆ. ರೈಲ್ವೆ ನಿಲ್ದಾಣದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಟ್ರ್ಯಾಕ್ಗಳ ನಿರ್ವಹಣೆ ಮಾಡುವುದು ಮುಖ್ಯವಾದ ಪ್ರಕ್ರಿಯೆ. ಆದ್ರೆ ಈ ಬಗ್ಗೆ ಪ್ರಯಾಣಿಕರಿಗೆ ಸೂಕ್ತ ಮಾಹಿತಿ ನೀಡದಿರುವುದು ತಪ್ಪು ಅಲ್ವಾ..? ರೈಲ್ವೆ ಅಧಿಕಾರಿಗಳು ಕೂಡ ಪ್ರಯಾಣಿಕರ ಸಮಸ್ಯೆ ಮತ್ತು ಗೊಂದಲಗಳಿಗೆ ಸೂಕ್ತ ಉತ್ತರ ನೀಡುತ್ತಿಲ್ಲ. ಇದು ಪ್ರಯಾಣಿಕರ ಅಸಮಾಧನಕ್ಕೆ ಪ್ರಮುಖ ಕಾರಣವಾಗಿದೆ..?
ಕೇಂದ್ರ ಸಚಿವರಾದ ವಿ. ಸೋಮಣ್ಣನವರೇ ನಿಮ್ಮ ಇಲಾಖೆಯ ಅಧಿಕಾರಿಗಳಿಗೆ ಸ್ವಲ್ಪ ಸಂಯಮದಿಂದ ಉತ್ತರ ನೀಡುವಂತೆ ಬುದ್ಧಿ ಹೇಳಿ. ಸರಿಯಾದ ಮಾಹಿತಿ ಕೊಡಿ. ಪ್ರಯಾಣಿಕರ ಸಮಸ್ಯೆಗಳಿಗೆ ಸ್ಪಂದಿಸಿ. ಈ ಗೊಂದಲಗಳನ್ನು ಬಗೆಹರಿಸಿ..!








