ತಲೈವಿ ಟ್ರೈಲರ್ ನಲ್ಲಿದೆ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಜಯಲಲಿತಾ ಮೇಲಿನ ಹಲ್ಲೆಯ ಘಟನೆ
ಕಂಗನಾ ರಣಾವತ್ ಅವರ ಜನ್ಮದಿನ ಮಾರ್ಚ್ 23 ರಂದು ತಲೈವಿ ಟ್ರೈಲರ್ ಬಿಡುಗಡೆಯಾಗಿದೆ. ತಲೈವಿ ತಮಿಳು ಚಿತ್ರ ತಾರೆ ಮತ್ತು ರಾಜಕೀಯ ನಾಯಕಿ ದಿ. ಜೆ.ಜಯಲಲಿತಾ ಅವರ ಜೀವನಚರಿತ್ರೆ. ತಲೈವಿ ಟ್ರೈಲರ್ ತಮಿಳು ನಾಡಿನ ಮುಖ್ಯ ಮಂತ್ರಿಯಾಗಿದ್ದ ಜಯಲಲಿತಾ ಅವರ ಜೀವನದಲ್ಲಿನ ಒಂದು ಮಹತ್ವದ ತಿರುವನ್ನು ತೋರಿಸುತ್ತದೆ. ಇದು ಮಾರ್ಚ್ 1989 ರಲ್ಲಿ ನಡೆದ ಒಂದು ನೈಜ ಘಟನೆಯನ್ನು ಆಧರಿಸಿದೆ.
ಅಂದು ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರ ಮೇಲೆ ಡಿಎಂಕೆ ಪಕ್ಷದ ಸದಸ್ಯರು ಹಲ್ಲೆ ನಡೆಸಿದ್ದರು ಎಂದು ಹೇಳಲಾಗಿದೆ.
ಎಐಎಡಿಎಂಕೆ ನಾಯಕಿ ತಮಿಳುನಾಡಿನ ಪ್ರತಿಪಕ್ಷದ ಮೊದಲ ಮಹಿಳಾ ನಾಯಕಿ. ತಮಿಳುನಾಡು ಸಿಎಂ ಬಜೆಟ್ ಮಂಡಿಸುವಾಗ ಪ್ರತಿಪಕ್ಷಗಳು ಪ್ರತಿಭಟಿಸುತ್ತಿದ್ದವು. ಆಗ ವಿಧಾನಸಭೆಯಿಂದ ನಿರ್ಗಮಿಸುತ್ತಿದ್ದ ಜಯಲಲಿತಾ ಅವರ ಮೇಲೆ ಡಿಎಂಕೆ ಸಚಿವರು ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ.
ನಂತರ ಸಿಮಿ ಗರೆವಾಲ್ ಅವರ ಪ್ರದರ್ಶನ ರೆಂಡೆಜ್ವಸ್ನಲ್ಲಿ ಜಯಲಲಿತಾ,’ ಕರುಣಾನಿಧಿ ಅವರ ಎಲ್ಲಾ ಶಾಸಕರು ಮತ್ತು ಮಂತ್ರಿಗಳು ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು. ಅವರು ಕುರ್ಚಿ, ಮೈಕ್ಸ್, ಹೀಗೆ ಎಲ್ಲವನ್ನೂ ಹಿಡಿದುಕೊಂಡರು.
ಸ್ಪೀಕರ್ ಮೇಜಿನ ಮೇಲೆದ್ದ ಹಿತ್ತಾಳೆ ಗಂಟೆಯಿಂದ ನನ್ನ ತಲೆಯ ಮೇಲೆ ಹೊಡೆದರು. ಅವರು ನನ್ನ ಕೂದಲನ್ನು ಎಳೆದರು. ನನ್ನ ಮೇಲೆ ಚಪ್ಪಲ್ಗಳನ್ನು ಎಸೆದರು, ಕಾಗದಗಳ ದೊಡ್ಡ ಕಟ್ಟುಗಳನ್ನು ಭಾರವಾದ ಪುಸ್ತಕಗಳನ್ನು ನನ್ನ ಮೇಲೆ ಎಸೆದರು. ಅವರಲ್ಲಿ ಒಬ್ಬರು ನನ್ನ ಸೀರೆಯನ್ನು ಎಳೆಯಲು ಸಹ ಪ್ರಯತ್ನಿಸಿದರು. ನನ್ನ ಶಾಸಕರು ನನ್ನನ್ನು ಕಾಪಾಡದೆ ಇರುತ್ತಿದ್ದರೆ ಇಂದು ನಾನು ಜೀವಂತವಾಗಿರುತ್ತಿರಲಿಲ್ಲ. ಕೋಪದಿಂದ ಆ ದಿನ ನಾನು ಅಸೆಂಬ್ಲಿಯಿಂದ ಕಣ್ಣೀರು ಹಾಕುತ್ತಾ ಹೊರಬಂದೆ . ಜೊತೆಗೆ ಅಂದು ನಾನು ಈ ವ್ಯಕ್ತಿ ಮುಖ್ಯಮಂತ್ರಿಯಾಗಿ ಮುಂದುವರಿಯುವವರೆಗೂ ಅಸೆಂಬ್ಲಿಗೆ ನಾನು ಕಾಲಿಡಲಾರೆ ಮತ್ತು ಮತ್ತೆ ಈ ವಿಧಾನಸಭೆಯನ್ನು ನಾನು ಮುಖ್ಯಮಂತ್ರಿಯಾಗಿ ಪ್ರವೇಶಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದೆ. ಎರಡು ವರ್ಷಗಳಲ್ಲಿ ನಾನು ನನ್ನ ಪ್ರತಿಜ್ಞೆಯನ್ನು ಪೂರೈಸಿದ್ದೇನೆ’ ಎಂದು ಅವರು ಹೇಳಿದ್ದರು.
ಎಐಎಡಿಎಂಕೆ ನಾಯಕಿ 1991 ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಮೊದಲ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ತಮಿಳು ಚಿತ್ರ ನಟಿ ಜಯಲಲಿತಾ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಬೆಳೆದ ರೋಚಕ ಕಥೆಯ ತಲೈವಿ ಚಿತ್ರ ರಾಜಕಾರಣದಲ್ಲಿ ಜಯಲಲಿತಾ ಎದುರಿಸಿದ ಸವಾಲು, ಸಂಕಷ್ಟಗಳ ಹೂರಣವನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.
#KanganaRanaut #Thalaivi #Jayalalithaa #tamilnaduassembly
ಕಿತ್ತಳೆ ಹಣ್ಣಿನ ಆರೋಗ್ಯ ಪ್ರಯೋಜನಗಳು ಮತ್ತು ಕಿತ್ತಳೆ ಹಣ್ಣಿನ ಕೆಲವು ಮನೆಮದ್ದುಗಳು https://t.co/n1HMwioq7j
— Saaksha TV (@SaakshaTv) March 20, 2021
ಮನೆಯಲ್ಲೇ ತಯಾರಿಸಿ ವೆನಿಲ್ಲಾ ಐಸ್ ಕ್ರೀಂ https://t.co/EcO1ByfVci
— Saaksha TV (@SaakshaTv) March 20, 2021
ಜೀವನೋಪಾಯಕ್ಕಾಗಿ ಹೂವು, ಪ್ರಸಾದ ಮಾರುತ್ತಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಹೋದರಿ https://t.co/trMzK8sVSu
— Saaksha TV (@SaakshaTv) March 20, 2021
ಸ್ಯಾಂಡಲ್ ವುಡ್ ನ ಖಳ ಭಯಂಕರನ ಇಬ್ಬರು ಪುತ್ರರತ್ನಗಳ ಸಹೋದರರ ಸವಾಲ್!@TharunSudhir @Kannadacinema24@dasadarshan @SarjaFanshttps://t.co/WksW6tt3n8
— Saaksha TV (@SaakshaTv) March 16, 2021