ನಿಮಗೆ ಮಹಾತ್ಮಾ ಗಾಂಧಿಯವರ ಪ್ರಸಿದ್ಧ ತತ್ವಗಳು ನೆನಪಿದೆಯೇ? “ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ನೋಡಬೇಡಿ, ಕೆಟ್ಟದ್ದನ್ನು ಮಾತನಾಡಬೇಡಿ.” ಈ ತತ್ವಗಳು ಸದಾ ನಮ್ಮ ಜೀವನದ ಮಾರ್ಗದರ್ಶಕವಾಗಿದ್ದರೂ, ಇಂದಿನ ಡಿಜಿಟಲ್ ಯುಗದಲ್ಲಿ ಇವು ಹೊಸ ರೂಪವನ್ನು ಧರಿಸಿವೆ.
ಈ ನವತಂತ್ರಜ್ಞಾನ ಯುಗದಲ್ಲಿ, ಡಿಜಿಟಲ್ ಭದ್ರತೆ ಅತ್ಯಂತ ಮಹತ್ವ ಪಡೆದಿದೆ. ಇದಕ್ಕೆ ಸಂಬಂಧಿಸಿದಂತೆ, ಹಲವಾರು ನೆಟ್ಟಿಗರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಾ, ಕೆಲವು ತತ್ವಗಳನ್ನು ಪಾಲಿಸಲು ಎಲ್ಲರಿಗೂ ಕರೆ ನೀಡಿದ್ದಾರೆ.
ಇಂದಿನ ಡಿಜಿಟಲ್ ಯುಗದಲ್ಲಿ ಅನುಸರಿಸಬೇಕಾದ 3 ಮುಖ್ಯ ತತ್ವಗಳು:
1. ನಿಮ್ಮ OTP ಅನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ:
OTP (ಒನ್ಸ್ ಟೈಮ್ ಪಾಸ್ವರ್ಡ್) ನಿಮ್ಮ ಖಾಸಗಿ ಮಾಹಿತಿ ಮತ್ತು ಆರ್ಥಿಕ ಭದ್ರತೆಗೆ ಪ್ರಮುಖ ಅಂಶ. ಇದನ್ನು ಇತರರ ಜೊತೆ ಹಂಚಿಕೊಂಡರೆ, ಆರ್ಥಿಕ ವಂಚನೆ ಸಂಭವಿಸಬಹುದು.
2. WhatsApp ಅಥವಾ ಇತರ ಮ್ಯಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಲಿಂಕ್‌ಗಳನ್ನು ತೆರೆಯಬೇಡಿ:
ನೀವು ಪಡೆದ ಎಲ್ಲ ಲಿಂಕ್‌ಗಳು ನಿಜವಾಗಿಯೂ ವಿಶ್ವಾಸಾರ್ಹವಲ್ಲ. ಅನಾಮಿಕ ಅಥವಾ ಶಂಕಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ, ಹ್ಯಾಕಿಂಗ್ ಅಥವಾ ವೈರಸ್ ದಾಳಿಗೆ ಒಳಗಾಗುವ ಸಾಧ್ಯತೆ ಇದೆ.
3. ನಕಲಿ ಕರೆಗಳಿಗೆ ಕಿವಿಗೊಡಬೇಡಿ:
ಫಿಷಿಂಗ್ (Phishing) ಅಥವಾ ವಂಚನೆಯ ಕರೆಗಳು ಹೆಚ್ಚುತ್ತಿರುವ ಇಂದಿನ ಕಾಲದಲ್ಲಿ, ಅವುಗಳನ್ನು ತಕ್ಷಣವೇ ತಡೆದು, ಆಮಿಷಗಳಿಗೆ ಬೀಳದಂತೆ ಎಚ್ಚರದಿಂದ ಇರಬೇಕು.
ಎಚ್ಚರಿಕೆಯ ಸಂದೇಶ:
ನೀವು ಬುದ್ಧಿವಂತರು ಎಂದು ತೋರಿಸಬೇಕಾದರೆ, ನಿಮ್ಮ ಡಿಜಿಟಲ್ ಸುರಕ್ಷತೆ ಬಗ್ಗೆ ಎಚ್ಚರಿಕೆಯಿಂದ ಇರಿ. ತಂತ್ರಜ್ಞಾನದ ಯುಗದಲ್ಲಿ, ನಿಮ್ಮ ಜಾಗೃತಿಯು ನಿಮ್ಮ ರಕ್ಷಣೆ!
ಈ 3 ತತ್ವಗಳನ್ನು ಪಾಲಿಸುವ ಮೂಲಕ ನೀವು ಡಿಜಿಟಲ್ ಯುಗದಲ್ಲಿ ವಂಚನೆಯಿಂದ ದೂರ ಉಳಿಯಲು ಸಾಧ್ಯ.