ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ : ಇಬ್ಬರು ಕೊರೊನಾ ಸೋಂಕಿತರು ಸಜೀವ ದಹನ , 70 ಜನರ ರಕ್ಷಣೆ..!
ಮುಂಬೈ: ಮುಂಬೈನ ಆಸ್ಪತ್ರೆಯೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಇಬ್ಬರು ಸಜೀವ ದಹನವಾಗಿದ್ದಾರೆ. ಘಟನೆ ವೇಳೆ 70 ಕೊರೊನಾ ಸೋಂಕಿತರನ್ನ ರಕ್ಷಣೆ ಮಾಡಲಾಗಿದೆ.
ತಡರಾತ್ರಿ 12.30ರ ವೇಳೆಗೆ ಈ ಘಟನೆ ನಡೆದಿದ್ದು, ಬೆಂಕಿ ಕಾಣಿಸಿಕೊಂಡ ಕೂಡಲೇ 70ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ. ಆದರೆ ಇಬ್ಬರು ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಸಜೀವ ದಹನವಾಗಿದ್ದಾರೆ.
ಆಸ್ಪತ್ರೆ ಬಳಿ ಅಗ್ನಿಶಾಮಕದಳ ವಾಹನಗಳು ದೌಡಾಯಿಸಿದ್ದು, ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ಧಾರೆ. ಆದ್ರೆ ಈ ಅವಘಡಕ್ಕೆ ಇನ್ನೂವರೆಗೂ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ. 73 ಕೋವಿಡ್ ರೋಗಿಗಳ ಪೈಕಿ 30 ಮಂದಿಯನ್ನು ಮುಲುಂದ್ ಜಂಬೊ ಸೆಂಟರ್ಗೆ ಸ್ಥಳಾಂತರಿಸಲಾಗಿದೆ. ಮೂವರು ರೋಗಿಗಳನ್ನು ಫೋರ್ಟಿಸ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಸುಯೇಜ್ ಕಾಲುವೆಯಲ್ಲಿ ಸಿಲುಕಿರುವ ಹಡಗಿನಲ್ಲಿ ಇರುವವರು ಭಾರತೀಯರು..!
ಭಾರತ ಇಂಗ್ಲೆಂಡ್ ಎರಡನೇ ಏಕದಿನ ಪಂದ್ಯ- ಸೂರ್ಯಕುಮಾರ್ ಗೆ ಸಿಗುತ್ತಾ ಸ್ಥಾನ..?
ಖೇಲೋ ಇಂಡಿಯಾ ಯೂತ್ ಗೇಮ್ಸ್ 2021 ರಲ್ಲಿ ಯೋಗಾಸನ
ತಮಿಳುನಾಡು – ಚಂದ್ರನಲ್ಲಿಗೆ ಪ್ರವಾಸ ಕರೆದೊಯ್ಯುವ ಭರವಸೆ ನೀಡಿದ ಮಧುರೈಯ ಸ್ವತಂತ್ರ ಅಭ್ಯರ್ಥಿ