ಏಕದಿನ ಸರಣಿಯನ್ನು ಕೈ ವಶ ಮಾಡಿಕೊಂಡ ಟೀಮ್ ಇಂಡಿಯಾ
ಭಾರತ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಏಳು ರನ್ ಗಳಿಂದ ಪರಾಭವಗೊಳಿಸಿದೆ.
ಈ ಮೂಲಕ ಟೆಸ್ಟ್ ಸರಣಿ, ಟಿ-ಟ್ವೆಂಟಿ ಸರಣಿ ಹಾಗೂ ಏಕದಿನ ಸರಣಿಯನ್ನು ಗೆದ್ದ ಟೀಮ್ ಇಂಡಿಯಾ ಆಂಗ್ಲರಿಗೆ ಮುಖಭಂಗ ಮಾಡಿದೆ.
ಪುಣೆಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲಲು 330 ರನ್ ಗಳ ಗುರಿಯನ್ನು ಟೀಮ್ ಇಂಡಿಯಾ ನೀಡಿತ್ತು.
ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 322 ರನ್ ಗಳಿಸಿ ಏಳು ರನ್ ಗಳಿಂದ ಸೋಲು ಒಪ್ಪಿಕೊಂಡಿತ್ತು.
ಇಂಗ್ಲೆಂಡ್ ಪರ ಸ್ಯಾಮ್ ಕುರನ್ ಅಜೇಯ 95 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಲು ಪ್ರಯತ್ನಿಸಿದ್ರೂ ಸಾಧ್ಯವಾಗಲಿಲ್ಲ.
ಇಂಗ್ಲೆಂಡ್ ತಂಡದ ಪರ ಸ್ಯಾಮ್ ಕುರನ್ ಅಜೇಯ 95ರನ್, ಬೆನ್ ಸ್ಟೋಕ್ಸ್ 35 ರನ್, ಡೇವಿಡ್ ಮಲಾನ್ 50 ರನ್, ಲಿಯಾಮ್ ಲಿವಿಂಗ್ ಸ್ಟೋನ್ 36 ರನ್ ಹಾಗೂ ಮೋಯಿನ್ ಆಲಿ 29 ರನ್ ಗಳಿಸಿದ್ರು.
ಟೀಮ್ ಇಂಡಿಯಾ ಪರ ಭುವನೇಶ್ವರ್ ಕುಮಾರ್ 42ಕ್ಕೆ ಮೂರು ವಿಕೆಟ್ ಉರುಳಿಸಿದ್ರೆ, ಶಾರ್ದೂಲ್ ಥಾಕೂರ್ 67ಕ್ಕೆ 4 ವಿಕೆಟ್ ಪಡೆದ್ರು.
ಇದಕ್ಕು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 48.2 ಓವರ್ ಗಳಲ್ಲಿ 329 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು.
ಟೀಮ್ ಇಂಡಿಯಾ ಪರ ರಿಷಬ್ ಪಂತ್ ಸ್ಪೋಟಕ 78 ರನ್ ಗಳಿಸಿದ್ರೆ, ಹಾರ್ದಿಕ್ ಪಾಂಡ್ಯ 64 ರನ್ ದಾಖಲಿಸಿದ್ರು. ಇನ್ನುಳಿದಂತೆ ರೋಹಿತ್ ಶರ್ಮಾ 37 ರನ್, ಶಿಖರ್ ಧವನ್ 67 ರನ್, ಕೃನಾಲ್ ಪಾಂಡ್ಯ 25, ಶಾರ್ದೂಲ್ ಥಾಕೂರ್ 30 ರನ್ ಗಳಿಸಿದ್ರು.
ಇಂಗ್ಲೆಂಡ್ ಪರ ಮಾರ್ಕ್ ವುಡ್ 34ಕ್ಕೆ 3 ವಿಕೆಟ್ ಪಡೆದ್ರೆ, ಆದೀಲ್ ರಶೀದ್ 81ಕ್ಕೆ 2 ವಿಕೆಟ್ ಕಬಳಿಸಿದ್ರು.