ದಕ್ಷಿಣ ಕನ್ನಡ – ಬಿರುಗಾಳಿ ಗುಡುಗು ಸಹಿತ ಭಾರೀ ಮಳೆ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಬಿರುಗಾಳಿ ಗುಡುಗು ಸಹಿತ ಭಾರೀ ಮಳೆಯಾಗಿದೆ.
ಭಾರೀ ಗಾಳಿಗೆ ಕೆಲವೆಡೆ ಮರ ಬಿದ್ದು, ಸಂಚಾರ ವ್ಯವಸ್ಥೆ ಅಸ್ಯವಸ್ಯವಾಗಿದ್ದು, ಬಂಟ್ವಾಳದ ಬೆಂಜನಪದವಿನಲ್ಲಿ ವಿದ್ಯುತ್ ಕಂಬ ತುಂಡಾಗಿ ಬಿದ್ದಿದೆ.

ಸುಳ್ಯ, ಜಾಲ್ಸೂರು, ಗುತ್ತಿಗಾರು, ಪಂಜ, ಪುತ್ತೂರು, ಕಡಬ, ಉಪ್ಪಿನಂಗಡಿ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಗಾಳಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ವಿವಿಧ ಕಡೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ.

ಬೆಂಜನಪದವಿನಲ್ಲಿ ಗಾಳಿಯ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದ್ದರೆ, ಅಮ್ನಾಡಿಯ ನಲ್ಕೆಮಾರಿನಲ್ಲಿ ಮರ ಬಿದ್ದು ವಿದ್ಯುತ್ ಕಂಬ ಧರೆಗುರುಳಿದೆ.
ಹಲವೆಡೆ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು, ಕಂಬಗಳು ತುಂಡಾಗಿ ಬಿದ್ದಿದ್ದು ಬಹುತೇಕ ಕಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
https://twitter.com/SaakshaTv/status/1373829445518307328?s=19
https://twitter.com/SaakshaTv/status/1373840377975820288?s=19
https://twitter.com/SaakshaTv/status/1373795309852184581?s=19
https://twitter.com/SaakshaTv/status/1373611017943580677?s=19
#Heavyrain #dakshinakannada #stroms








