ಐಪಿಎಲ್ 2021- ಸನ್ ರೈಸರ್ಸ್ ಹೈದ್ರಬಾದ್ ತಂಡದ ಫುಲ್ ಡಿಟೇಲ್ಸ್..!
IPL 2021 -SunRisers Hyderabad Full team details
ಐಪಿಎಲ್ ನಲ್ಲಿ ಹಲವು ಏಳು ಬೀಳುಗಳನ್ನು ಕಂಡಿರುವ ತಂಡ ಅಂದ್ರೆ ಡೆಕ್ಕನ್ ಚಾರ್ಜರ್ಸ್ ಈಗೀನ ಸನ್ ರೈಸರ್ಸ್ ಹೈದ್ರಬಾದ್ ತಂಡ.
ತೆಲಂಗಾನ ಮತ್ತು ಆಂಧ್ರ ಪ್ರದೇಶದ ಪ್ರತೀಕವಾಗಿರುವ ಸನ್ ರೈಸರ್ಸ್ ಹೈದ್ರಬಾದ್ ತಂಡ 2008ರಿಂದ 2012ರವರೆಗೆ ಡೆಕ್ಕನ್ ಚಾರ್ಜರ್ಸ್ ತಂಡವಾಗಿತ್ತು. 2008ರ ಐಪಿಎಲ್ ನಲ್ಲಿ ಗ್ರೂಪ್ ಹಂತಕ್ಕೆ ಸೀಮಿತವಾಗಿದ್ದ ಡೆಕ್ಕನ್ ಚಾರ್ಜರ್ಸ್ 2009ರಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. 2010ರಲ್ಲಿ ಸೆಮಿಫೈನಲ್ ಮತ್ತು 2011 ಹಾಗೂ 2012ರಲ್ಲಿ ಗ್ರೂಪ್ ಹಂತಕ್ಕೆ ತನ್ನ ಹೋರಾಟವನ್ನು ಮುಗಿಸಿತ್ತು.
ನಂತರ ಡೆಕ್ಕನ್ ಚಾರ್ಜರ್ಸ್ ಮತ್ತು ಬಿಸಿಸಿಐ ನಡುವಿನ ವಿವಾದದಿಂದಾಗಿ 2013ರಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡವಾಗಿ ರೂಪುಗೊಂಡಿತ್ತು.
2013ರಲ್ಲಿ ಎಸ್ ಆರ್ ಎಚ್ ತಂಡ ಫ್ಲೇ ಆಫ್ ಗೆ ಎಂಟ್ರಿ ಪಡೆದ್ರೆ, 2014 ಮತ್ತು 2015ರಲ್ಲಿ ಆರನೇ ಸ್ಥಾನಕ್ಕೆ ಸಮಧಾನಪಟ್ಟುಕೊಂಡಿತ್ತು.
2016ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ಎಸ್ ಆರ್ ಎಚ್, 2017ರಲ್ಲಿ ಪ್ಲೇ ಆಫ್, 2018ರಲ್ಲಿ ರನ್ನರ್ ಅಪ್ ಹಾಗೂ 2019 ಮತ್ತು 2020ರಲ್ಲಿ ಕ್ರಮವಾಗಿ ನಾಲ್ಕು ಮತ್ತು ಮೂರನೇ ಸ್ಥಾನ ಪಡೆದುಕೊಂಡಿತ್ತು.
ಡೇವಿಡ್ ವಾರ್ನರ್ ನಾಯಕತ್ವದಲ್ಲಿರುವ ಎಸ್ ಆರ್ ಎಚ್ ತಂಡ ಈ ಬಾರಿಯೂ ಫೆವರೀಟ್ ತಂಡಗಳಲ್ಲಿ ಒಂದಾಗಿದೆ.
2008ರಿಂದ 2012ರವರೆಗೆ ಡೆಕ್ಕನ್ ಚಾರ್ಜರ್ಸ್ 75 ಪಂದ್ಯಗಳನ್ನು ಆಡಿದ್ದು, 29 ಪಂದ್ಯಗಳಲ್ಲಿ ಜಯ, 46 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.
ಇನ್ನು 2013ರಿಂದ 2020ರವರೆಗೆ ಸನ್ ರೈಸರ್ಸ್ ಹೈದ್ರಬಾದ್ ತಂಡ 125 ಪಂದ್ಯಗಳನ್ನು ಆಡಿದ್ದು, 66 ಪಂದ್ಯಗಳಲ್ಲಿ ಗೆಲುವು ಮತ್ತು 58 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಒಂದು ಪಂದ್ಯದ ಫಲಿತಾಂಶ ಬಂದಿಲ್ಲ.
ಟಾಮ್ ಮೂಡಿ ಎಸ್ ಆರ್ ಎಚ್ ತಂಡದ ಕ್ರಿಕೆಟ್ ಡೈರೆಕ್ಟರ್ ಆಗಿದ್ದಾರೆ. ಟ್ರೆವೋರ್ ಬೈಲಿಸ್ ಅವರು ಹೆಡ್ ಕೋಚ್ ಆಗಿದ್ದು, ಬ್ರಾಡ್ ಹ್ಯಾಡಿನ್ ಸಹಾಯಕ ಕೋಚ್, ಲಕ್ಷ್ಮಣ್ ಬ್ಯಾಟಿಂಗ್ ಕೋಚ್, ಮುತ್ತಯ್ಯ ಮುರಳೀಧರನ್ ಅವರು ಬೌಲಿಂಗ್ ಹಾಗೂ ಬಿಜು ಜಾರ್ಜ್ ಫೀಲ್ಡಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸನ್ ರೈಸರ್ಸ್ ಹೈದ್ರಬಾದ್ ತಂಡ
ಡೇವಿಡ್ ವಾರ್ನರ್ (ನಾಯಕ), ಅಭಿಷೇಕ್ ಶರ್ಮಾ, ಬಾಸಿಲ್ ಥಂಪಿ, ಭುವನೇಶ್ವರ್ ಕುಮಾರ್, ಜೋನಿ ಬೇರ್ ಸ್ಟೋವ್, ಕಾನೆ ವಿಲಿಯಮ್ಸನ್, ಮನಿಷ್ ಪಾಂಡೆ, ಮಹಮ್ಮದ್ ನಬಿ, ರಶೀದ್ ಖಾನ್, ಸಂದೀಪ್ ಶರ್ಮಾ, ಶಹಬಾಝ್ ನದೀಪ್, ಶ್ರಿವಾವತ್ಸ ಗೋಸ್ವಾಮಿ, ಸಿದ್ಧರ್ಥಾ ಕೌಲ್, ಖಲೀಲ್ ಅಹಮ್ಮದ್, ಟಿ. ನಟರಾಜನ್, ವಿಜಯ್ ಶಂಕರ್, ವೃದ್ದಿಮಾನ್ ಸಾಹ, ಅಬ್ದುಲ್ ಸಮಾದ್, ಮಿಟ್ಚೆಲ್ ಮಾರ್ಶ್, ಜೇಸನ್ ಹೋಲ್ಡರ್, ಪ್ರಿಯಮ್ ಗರ್ಗ್, ವಿರಾಟ್ ಸಿಂಗ್, (ಖರೀದಿ ಮಾಡಿದ ಆಟಗಾರರು), ಕೇದಾರ್ ಜಾಧವ್, ಮುಜೀವ್ ಉರ್ ರಹಮಾನ್, ಸುಚಿತ್